VIDEO: ಹಾವನ್ನು ಮೈಮೇಲೆ ಬಿಟ್ಕೊಂಡು ಹಾಡು ಹೇಳಿದ ಗಾಯಕಿ: ಕೆನ್ನೆಗೆ ‘ಮುತ್ತಿಟ್ಟು’ ಬೆಚ್ಚಿಬೀಳಿಸಿದ ಉರಗ

singer
Published on

ವಾಷಿಂಗ್ಟನ್: ಆಲ್ಬಂ ಒಂದರ ಚಿತ್ರೀಕರಣದ ವೇಳೆ ಹಾವು ಹಿಡಿದುಕೊಂಡು ಹಾಡು ಹೇಳುವ ಸಾಹಸ ಮಾಡಿದ್ದ ಗಾಯಕಿಯೊಬ್ಬಳಿಗೆ ಆ ಹಾವು ಕಚ್ಚಿರುವ ಘಟನೆ ನಡೆದಿದೆ. ಅಮೆರಿಕದ ಗಾಯಕಿ ಮೇಟಾ ಅವರಿಗೆ ಹಾವು ಕಚ್ಚಿದ್ದು, ಆಕೆ ಭಯದಿಂದ ಚೀರಿದ್ದಾಳೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ.

21 ವರ್ಷದ ಗಾಯಕಿ ಮೇಟಾ ಹಾವನ್ನು ತನ್ನ ಮೈಮೇಲೆ ಬಿಟ್ಟುಕೊಂಡು ವಿಭಿನ್ನವಾಗಿ ಚಿತ್ರೀಕರಣ ಮಾಡಲು ಹೋಗಿದ್ದಳು. ಆಕೆ ಒಂದು ಹಾವನ್ನು ಹಿಡಿದುಕೊಂಡು ಹಾಡು ಹೇಳುತ್ತಿದ್ದಾಗ, ಆಕೆಯ ಸಹಾಯಕ ಇನ್ನೊಂದು ಹಾವನ್ನು ಕೊಡಲು ಹೋಗಿದ್ದಾನೆ. ಈ ವೇಳೆ ಆಕೆ ಕೈಯಲ್ಲಿ ಹಿಡಿದುಕೊಂಡಿದ್ದ ಹಾವು ಮುಖಕ್ಕೆ ಕಚ್ಚಿದೆ. ಇದು ನೋಡಿದರೆ ಅದು ಆಕೆಯ ಕೆನ್ನೆಗೆ ಮುತ್ತಿಟ್ಟಂತೆ ಕಾಣಿಸುತ್ತಿದೆ.

ಏಕಾಏಕಿ ಹೀಗಾದುದ್ದಕ್ಕೆ ಗಾಯಕಿ ಥಟ್ಟನೆ ಚೀರಿಕೊಂಡಿದ್ದಾಳೆ. ಆದರೆ ಈ ಹಾವು ವಿಷಪೂರಿತವಲ್ಲವಾದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟೀನ್ ಸೀನ್, ಟಾಕ್ಸಿಕ್ ಮತ್ತು ಹ್ಯಾಬಿಟ್ಸ್ ನಂತಹ ಹಾಡುಗಳನ್ನು ಒಳಗೊಂಡಿರುವ ತಮ್ಮ ಚೊಚ್ಚಲ ಆಲ್ಬಂ ‘ಹ್ಯಾಬಿಟ್ಸ್’ನಿಂದ ಭಾರಿ ಜನಪ್ರಿಯತೆ ಗಳಿಸಿರುವ ಗಾಯಕಿ ನಾನು ಏನೇನೋ ಸಾಹಸ ಮಾಡಿದ್ದು, ಮೊದಲ ಬಾರಿಗೆ ಇಂಥ ಅನಾಹುತ ಆಗಿದೆ ಎಂದಿದ್ದಾಳೆ.

ಐದು ಸೆಕೆಂಡ್‌ಗಳ ವಿಡಿಯೋವನ್ನು ಖುದ್ದು ಮೇಟಾ ‘ಎಂದಿಗೂ ಹೀಗೆ ಆಗಿಲ್ಲ’ ಎಂದು ಶೀರ್ಷಿಕೆಯೊಂದಿಗೆ ಈ ವಿಡಿಯೋ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net