More

    ನಾಗಚೈತನ್ಯ-ನಟಿ ಶೋಭಿತಾ ಡೇಟಿಂಗ್ ವಿಷಯದಲ್ಲಿ ಕೆಲ ನೆಟ್ಟಿಗರಿಗೆ ಉಗಿದು ಬುದ್ಧಿ ಹೇಳಿದ ಸಮಂತಾ!

    ಹೈದರಾಬಾದ್​: ಡಿವೋರ್ಸ್​ ಆದ ಬಳಿಕ ನಾಗಚೈತನ್ಯ ಮೇಲೆ ದ್ವೇಷ ಸಾಧಿಸುತ್ತಿರುವ ಸಮಂತಾ, ಮಾಜಿ ಪತಿ ವಿರುದ್ಧ ತಮ್ಮ ಸಾರ್ವಜನಿಕ ಸಂಪರ್ಕ ತಂಡ (ಪಿಆರ್​ ಟೀಮ್​)ವನ್ನು ಛೂಬಿಟ್ಟು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂಬ ನಾಗಚೈತನ್ಯ ಅಭಿಮಾನಿಗಳ ಆರೋಪಕ್ಕೆ ಸಮಂತಾ ತಿರುಗೇಟು ನೀಡಿದ್ದಾರೆ.

    ತಾರಾದಂಪತಿ ಸಮಂತಾ ಮತ್ತು ನಾಗಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಕಳೆದ ಅಕ್ಟೋಬರ್ 2ರಂದು ಇಬ್ಬರು ಅಂತ್ಯವಾಡಿದ್ದು, ಅಂದಿನಿಂದ ಇಬ್ಬರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಸಮಂತಾ ಮತ್ತು ನಾಗಚೈತನ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬಿಜಿಯಾಗಿದ್ದು, ಇದರ ನಡುವೆ ಒಂದು ಬ್ರೇಕಿಂಗ್​ ನ್ಯೂಸ್​ ಹೊರಬಿದ್ದಿದ್ದು, ನಾಗಚೈತನ್ಯ ಮತ್ತು ಬಾಲಿವುಡ್​ ನಟಿ ಶೋಭಿತ ಧುಲಿಪಲ‌ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಕಳೆದ ಕೆಲವು ವಾರಗಳಿಂದ ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೀಗ ಈ ವಿಚಾರ ಟಾಲಿವುಡ್​ ಗಲ್ಲಿಯಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

    ಇದರ ನಡುವೆ ನಾಗಚೈತನ್ಯ ಅಭಿಮಾನಿಗಳು ಸಮಂತಾ ವಿರುದ್ಧ ಗರಂ ಆಗಿದ್ದು, ತಮ್ಮ ಪಿಆರ್​ ಟೀಮ್​ನಿಂದ ವದಂತಿಗಳನ್ನು ಹರಡಿಸುವ ಮೂಲಕ ನಾಗಚೈತನ್ಯ ಅವರ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರ ಸಮಂತಾ ಗಮನಕ್ಕೆ ಬಂದಿದ್ದು, ನಾಗಚೈತನ್ಯ ಮತ್ತು ಶೋಭಿತ ಧುಲಿಪಲ ನಡುವೆ ತಮ್ಮನ್ನು ಎಳೆದುತಂದ ನೆಟ್ಟಿಗರಿಗೆ ತಿರುಗೇಟು ನೀಡಿದ್ದಾರೆ.

    ಟ್ವೀಟ್​ ಮಾಡಿರುವ ಸಮಂತಾ, ಹುಡುಗಿಯ ಬಗ್ಗೆ ವದಂತಿಗಳು ಬಂದರೆ ಅದು ನಿಜ. ಅದೇ ವದಂತಿಗಳು ಹುಡುಗರ ಬಗ್ಗೆ ಬಂದರೆ, ಅದನ್ನು ಹುಡುಗಿಯರು ಹಬ್ಬಿಸುತ್ತಿದ್ದಾರೆ ಎನ್ನುತ್ತಾರೆ. ಸ್ವಲ್ಪ ಬೆಳವಣಿಗೆ ಹೊಂದಿ. ನಿಮ್ಮ ಸಂಕುಚಿತ ಮನಸ್ಸಿನಿಂದ ಹೊರಬಂದು. ಬೌದ್ಧಿಕವಾಗಿ ಬೆಳವಣಿಗೆ ಹೊಂದಿ. ಸಂಬಂಧಪಟ್ಟವರು ಎಲ್ಲಾ ಮರೆತು ಮುಂದೆ ಹೋಗಿದ್ದಾರೆ. ಅವರವರ ಕೆಲಸದಲ್ಲಿ ಬಿಜಿಯಾಗಿದ್ದಾರೆ. ನೀವು ಕೂಡ ಮುಂದೆ ಸಾಗುವುದನ್ನು ಕಲಿಯಿರಿ. ನಿಮ್ಮ ಕೆಲಸದ ಮೇಲೆ ಗಮನ ವಹಿಸಿ. ನಿಮ್ಮ ಕುಟುಂಬದ ಮೇಲೆ ಗಮನವಹಿಸಿ ಎಂದು ಬುದ್ಧಿಮಾತುಗಳನ್ನು ಹೇಳಿದ್ದಾರೆ. (ಏಜೆನ್ಸೀಸ್​)

    ಬಾಲಿವುಡ್​ ಬ್ಯೂಟಿಯ ಜತೆ ನಾಗಚೈತನ್ಯ ಡೇಟಿಂಗ್​! ನಟಿಯ ಹೆಸರು ಬಹಿರಂಗ, ಶುರುವಾಯ್ತು ಬಿಸಿ ಬಿಸಿ ಚರ್ಚೆ

    ವಿಸ್ಮಯಾ ಸಾವು ಪ್ರಕರಣ: ತಿಂಗಳಿಗೆ 50 ಸಾವಿರ ಸಂಬಳ ಪಡೆಯುತ್ತಿದ್ದವನಿಗೆ ಈಗ 63 ರೂ. ದಿನಗೂಲಿ!

    ಅಗ್ನಿಪಥ ಪ್ರತಿಭಟನೆ ವೇಳೆ ಕಲ್ಲೇಟು ಬಿದ್ದು ರಕ್ತ ಸೋರುತ್ತಿದ್ರು ಅಧಿಕಾರಿ ಮುಖದಲ್ಲಿ ನಗು: ಕಾರಣ ಮನಕಲಕುವಂತಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts