ಮುಂಬೈ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಲ್ಕು ಚಿತ್ರರಂಗಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಸದ್ಯ, ಬಾಲಿವುಡ್ನಲ್ಲಿ ಬೀಡುಬಿಟ್ಟಿರುವ ರಶ್ಮಿಕಾ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಸ್ಟಾರ್ ನಾಯಕಿ ಪಟ್ಟ ಗಿಟ್ಟಿಸಿಕೊಂಡ ಖ್ಯಾತಿ ರಶ್ಮಿಕಾಗೆ ಸಲ್ಲುತ್ತದೆ. ಅದು ಅವರ ಅದೃಷ್ಟವೂ ಹೌದು.
ತಮಿಳು, ತೆಲುಗು ಮಾತ್ರವಲ್ಲದೆ, ಹಿಂದಿ ಚಿತ್ರರಂಗದಲ್ಲು ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮಿಷನ್ ಮುಂಜು ಚಿತ್ರವನ್ನು ಪೂರ್ಣಗೊಳಿಸಿದ್ದು, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಿನಿಮಾದಿಂದಾಚೆಗೆ ರಶ್ಮಿಕಾ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಅಲ್ಲದೆ, ಆಗಾಗ ವಿವಿಧ ಕಾರಣಗಳಿಂದ ಟ್ರೋಲ್ಗಳಿಗೆ ಗುರಿಯಾಗುತ್ತಿರುತ್ತಾರೆ. ಈ ಬಾರಿಯು ತಮ್ಮ ಬಟ್ಟೆ ವಿಚಾರಕ್ಕೆ ರಶ್ಮಿಕಾ ನೆಟ್ಟಿಗರ ಟ್ರೋಲ್ ದಾಳಕ್ಕೆ ಸಿಲುಕಿದ್ದಾರೆ.
ಶುಕ್ರವಾರ ರಾತ್ರಿ ರಶ್ಮಿಕಾ ಅವರು ಮುಂಬೈನಲ್ಲಿ ನಡೆದ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತೊಟ್ಟಿದ್ದ ಕೆಂಪು ಬಣ್ಣದ ತುಂಡುಡುಗೆ ಎಲ್ಲರ ಕಣ್ಣನ್ನು ಕೆಂಪಾಗಿಸಿದೆ. ಶಾರ್ಟ್ ಡ್ರೆಸ್ನಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ, ಕ್ಯಾಮೆರಾಗೆ ಪೋಸ್ ನೀಡಿದರು. ಕಾರ್ಯಕ್ರಮಕ್ಕೆ ಬಂದಿದ್ದವರ ಜೊತೆ ಸೋಫಾ ಮೇಲೆ ಕುಳಿತು ಫೋಟೋಗ್ರಾಫರ್ಗೆ ಫೋಸ್ ನೀಡಿದರು.
ಫೋಟೋ ತೆಗೆಯುವುವ ವೇಳೆ ತುಂಡುಡುಗೆಯಿಂದ ರಶ್ಮಿಕಾ ಮುಜುಗರಕ್ಕೀಡಾದಂತೆ ಕಂಡಿತು. ಆದರೂ ಅದನ್ನು ತೋರಿಸಿಕೊಳ್ಳದೇ ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿ ಅಲ್ಲಿಂದ ಹೊರಟರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವೈರಲ್ ಭಯಾನಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. 20 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ರಶ್ಮಿಕಾ ಹಾಟ್ ಡ್ರೆಸ್ ನೋಡಿ ಅನೇಕರು ಫಿದಾ ಆಗಿದ್ದಾರೆ. ಇನ್ನು ಕೆಲವರು ರಶ್ಮಿಕಾ ಏನಮ್ಮಾ ನಿನ್ನ ಫಜೀತಿ ಎಂದು ಟ್ರೋಲ್ ಮಾಡಿದ್ದಾರೆ. (ಏಜೆನ್ಸೀಸ್)
ಜೂಜಾಟಕ್ಕೆ ಪೊಲೀಸ್ ಪೇದೆ ಬಲಿ: ರಮ್ಮಿ ಆಡಲು ಮಾಡಿದ್ದ ಸಾಲದ ಮೊತ್ತ ಕೇಳಿದ್ರೆ ಶಾಕ್ ಆಗುತ್ತೆ!
ಸಾಲಶೂಲದಲ್ಲಿ ಡಜನ್ ದೇಶ; ಲಂಕೆಯ ಹಾದಿಯಲ್ಲಿ ಹೆಜ್ಜೆ, ಆರ್ಥಿಕ ಪತನದ ಭೀತಿ..
ಸುಖಾಸುಮ್ಮನೆ ವಾಹನ ತಡೆಯದಂತೆ ಜಿಲ್ಲಾ ಎಸ್ಪಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ