ಸುಖಾಸುಮ್ಮನೆ ವಾಹನ ತಡೆಯದಂತೆ ಜಿಲ್ಲಾ ಎಸ್‌ಪಿಗಳಿಗೆ ಡಿಜಿಪಿ ಪ್ರವೀಣ್​ ಸೂದ್​ ಸೂಚನೆ

Traffic Police
Published on

ಬೆಂಗಳೂರು: ದಾಖಲೆಗಳ ಪರಿಶೀಲನೆಗಾಗಿ ಸುಖಾಸುಮ್ಮನೆ ವಾಹನ ತಡೆಯದಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಜಿಲ್ಲಾ ಎಸ್‌ಪಿಗಳಿಗೆ ಆದೇಶ ಹೊರಡಿಸಿದ್ದಾರೆ.

ವಾಹನ ತಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಆದೇಶ ಹೊರಡಿಸಿರುವ ಪ್ರವೀಣ್ ಸೂದ್ ಸುಖಾಸುಮ್ಮನೆ ವಾಹನಗಳನ್ನ ನಿಲ್ಲಿಸುವಂತಿಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕೂಡ ಈ ಆದೇಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಡಾಕ್ಯುಮೆಂಟ್ ಪರಿಶೀಲನೆಗೆ ವಾಹನ ಸವಾರರನ್ನು ನಿಲ್ಲಿಸಬೇಡಿ, ಡ್ರಂಕ್ ಅಂಡ್ ಡ್ರೈವ್ ಮಾಡುವವರನ್ನು ಮಾತ್ರ ಪರಿಶೀಲನೆ ಮಾಡಿ, ಕಣ್ಣಿಗೆ ಕಾಣುವಂತ ಅಪರಾಧ ಕಂಡು ಬಂದರೆ ಮಾತ್ರ ವಾಹನ ನಿಲ್ಲಿಸಿ, ಪಟ್ಟಣ ಮತ್ತು ಹೆದ್ದಾರಿಗಳಲ್ಲಿ ಎಲ್ಲಾ ಕಡೆ ಈ ಆದೇಶ ಅನುಸರಿಸಬೇಕು. ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಜಿ ಐಜಿಪಿ ಪ್ರವೀಣ್ ಸೂದ್ ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net