ಪ್ರವಾಸಿ ಸ್ವರ್ಗ ಗೋವಾದಲ್ಲಿ ಮನೆ ಖರೀದಿಸಿದ ರಶ್ಮಿಕಾ: ಇನ್​ಸ್ಟಾಗ್ರಾಂನಲ್ಲಿ ಸುಳಿವು ಬಿಟ್ಟುಕೊಟ್ಟ ನಟಿ!

Rashmika
Published on

ಬೆಂಗಳೂರು: ಚಷ್ಮಾ ಸುಂದರಿ ರಶ್ಮಿಕಾ ಮಂದಣ್ಣ ಗೋವಾದಲ್ಲಿ ಹೊಸ ಮನೆ ಖರೀದಿಸಿರುವ ಸುಳಿವು ಬಿಟ್ಟುಕೊಟ್ಟಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಸ್ಟೇಟಸ್​ನಲ್ಲಿ ಮನೆಯ ಹೊರಾಂಗಣದ ಫೋಟೋ ಶೇರ್​ ಮಾಡುವ ಮೂಲಕ ಸುಳಿವು ಬಿಟ್ಟಿಕೊಟ್ಟಿದ್ದಾರೆ.

ಫೋಟೋ ಜೊತೆಗೆ ಗೋವಾದಲ್ಲಿ ನೀವು ಹೊಸ ಮನೆ ಖರೀದಿಸಿದಾಗ ಹೊಟ್ಟೆ ಕಿಚ್ಚು ಹೆಚ್ಚಾಗುತ್ತದೆ ಅಲ್ವಾ? ಎಂದು ಪ್ರಶ್ನಾರ್ಥಕ ಚೆಹ್ನೆ ಬಳಸಿ ಬರೆದಿರುವ ಬರವಣಿಗೆ ನಾನಾ ಚರ್ಚೆ ದಾರಿ ಮಾಡಿಕೊಟ್ಟಿದೆ. ರಶ್ಮಿಕಾ ಯಾರಿಗೆ ಟಾಂಗ್ ಕೊಟ್ಟಿದ್ದಾರೆಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಇನ್ನು ಇತ್ತೀಚಿಗಷ್ಟೇ ರಶ್ಮಿಕಾ, ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ್ದರು. ಟಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕಿರಿಕ್ ಬ್ಯೂಟಿ, ಅನುಕೂಲ ಆಗಲೆಂದು ಮನೆಗಳನ್ನು ಖರೀದಿಸಿದ್ದಾರೆ. ಇದೀಗ ಗೋವಾದಲ್ಲಿ ಮನೆಯನ್ನು ಖರಿದೀಸಿರುವುದಾಗಿ ತಾವೇ ಸುಳಿವು ನೀಡಿದ್ದು, ಆ ಬಗ್ಗೆ ಮತ್ತಷ್ಟು ಅಪ್​ಡೇಟ್​ ಕೊಡುತ್ತಾರಾ ಅಂತಾ ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net