

ಹೈದರಾಬಾದ್: ಭಾರತೀಯ ಸಿನಿಮಾಗಳ ಬಗ್ಗೆ ಆಗಾಗ ಒಲವು ತೋರುವ ಖ್ಯಾತ ನೀಲಿ ತಾರೆ ಕೇಂದ್ರ ಲಸ್ಟ್, ತಮಗೆ ಶಾರುಖ್ ಖಾನ್ ಅಂದರೆ ಇಷ್ಟ ಎಂದು ಹೇಳಿಕೊಂಡಿರುವುದು ಹಳೇ ಸಂಗತಿ. ತಾಜಾ ಸಂಗತಿ ಅಂದರೆ, ಲಸ್ಟ್ ಅವರು ಟಾಲಿವುಡ್ ಸೂಪರ್ ಸ್ಟಾರ್ಗಳಾದ ರಾಮಚರಣ್ ಹಾಗೂ ಜೂನಿಯರ್ ಎನ್ಟಿಆರ್ ಅವರನ್ನು ಕೊಂಡಾಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ಆರ್ಆರ್ಆರ್ ಸಿನಿಮಾ ಭಾರತದ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಸಿನಿಮಾ 1000ಕ್ಕೂ ಹೆಚ್ಚು ಕೋಟಿ ರೂಪಾಯಿಯನ್ನು ಬಾಚಿಕೊಂಡಿದೆ. ಅಲ್ಲದೆ, ವಿದೇಶದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿತು. ಅದರಲ್ಲೂ ಈ ಸಿನಿಮಾ ಬಿಡುಗಡೆಯಾದ ಎರಡು ತಿಂಗಳ ಬಳಿಕ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ತೆರೆಕಂಡು, ಅಲ್ಲೂ ದಾಖಲೆ ಬರೆಯಿತು.
ಒಟಿಟಿಯಲ್ಲಿ ಸಿನಿಮಾ ವೀಕ್ಷಣೆ ಮಾಡಿರುವ ಕೇಂದ್ರ ಲಸ್ಟ್ ಅವರು ಆರ್ಆರ್ಆರ್ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಲಸ್ಟ್, ರಾಜಮೌಳಿ ನಿರ್ದೇಶನಕ್ಕೆ ನಾನು ಸಂಪೂರ್ಣ ಮನಸೋತಿದ್ದೇನೆ. ವಾವ್ ರಾಮಚರಣ್ ಮತ್ತು ತಾರಕ್. ಎಂಥಾ ಸಿನಿಮಾ ಇದು! ನಟನೆ, ಹಾಡುಗಳು, ಸಿನಿಮಾಟೋಗ್ರಫಿ, ಸಾಹಸ ಡೈಲಾಗ್ ಡೆಲಿವತಿ ಎಲ್ಲವೂ ಪರಿಪೂರ್ಣವಾಗಿದೆ. ಇಬ್ಬರು ನಟರು (ರಾಮ್ಚರಣ್ ಮತ್ತು ಎನ್ಟಿಆರ್) ಕೂಡ ನೋಡಲು ಸುಂದರವಾಗಿದ್ದಾರೆ. ಅವರ ಅದ್ಭುತ ನಟನೆಯೇ ಈ ಸಿನಿಮಾದ ಆತ್ಮ ಎಂದು ಲಸ್ಟ್ ಕೊಂಡಾಡಿದ್ದಾರೆ.
ಇತ್ತೀಚಿನ ಸುದ್ದಿಯೊಂದರಲ್ಲಿ, ಶಾರುಖ್ ಖಾನ್ ನಾಯಕನಾಗಿ ನಟಿಸಿರುವ 'ಡಾನ್ 3' ಅಲ್ಲಿ ನಟಿಸಲು ಕೇಂದ್ರ ಲಸ್ಟ್ ಅವರಿಗೆ ಆಫರ್ ಮಾಡಲಾಗಿತ್ತು ಎನ್ನಲಾಗಿದೆ. ಈ ಸುದ್ದಿಗೆ ಪ್ರತಿಕ್ರಿಯಿಸಿದ ಲಸ್ಟ್, ನಾನು ಬಾಲಿವುಡ್ ಚಿತ್ರದ ಭಾಗವಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅಟ್ಲಿ ನಿರ್ದೇಶನದ 'ಜವಾನ್' ಚಿತ್ರದ ಮೊದಲ ಪೋಸ್ಟರ್ ಅನ್ನು ಸಹ ಲಸ್ಟ್ ಮೆಚ್ಚಿಕೊಂಡಿದ್ದಾರೆ. (ಏಜೆನ್ಸೀಸ್)