ವರದಿಗಾರ್ತಿಯ ಪಕ್ಕದಲ್ಲೇ ನಿಂತಿದ್ದ ಹುಡುಗನಿಗೆ ಕಾದಿತ್ತು ಶಾಕ್​: ಇದ್ದಕ್ಕಿದ್ದಂತೆ ಏನಾಯ್ತು ಈ ಪತ್ರಕರ್ತೆಗೆ?

Pak Journalist
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.

ಕ್ಯಾಮೆರಾ ಮುಂದೆ ನಿಂತು ವರದಿ ಮಾಡುವಾಗ ತೊಂದರೆ ಕೊಟ್ಟ ಯುವಕನಿಗೆ ಪಾಕಿಸ್ತಾನದ ವರದಿಗಾರ್ತಿ ಕಪಾಳಕ್ಕೆ ಬಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಜುಲೈ 9ರಂದು ಇಡೀ ವಿಶ್ವದಾದ್ಯಂತ ಆಚರಿಸಲಾದ ಬಕ್ರೀದ್​ ಹಬ್ಬದ ಕುರಿತಾಗಿ ವರದಿ ಮಾಡುವಾಗ ಈ ಪ್ರಸಂಗ ಜರುಗಿದೆ.

ವಿಡಿಯೋದಲ್ಲಿ ಏನಿದೆ?

ವರದಿಗಾರ್ತಿಯೊಬ್ಬಳು ಜನರ ಮಧ್ಯೆ ಕ್ಯಾಮೆರಾ ಮುಂದೆ ನಿಂತು ವರದಿ ಮಾಡುತ್ತಿರುತ್ತಾರೆ. ಈ ವೇಳೆ ತಾಳ್ಮೆ ಕಳೆದುಕೊಳ್ಳುವ ವರದಿಗಾರ್ತಿ ಪಕ್ಕದಲ್ಲೇ ನಿಂತಿದ್ದ ಹುಡುಗನ ಕಪಾಳಕ್ಕೆ ಬಾರಿಸುತ್ತಾರೆ.

ಪತ್ರಕರ್ತೆ ಕೋಪವನ್ನು ಕಳೆದುಕೊಂಡಿದ್ದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹುಡುಗ ಕೆಲವು ಅನಗತ್ಯ ಕಾಮೆಂಟ್ ಮಾಡಿರಬಹುದು ಎಂದು ತೋರುತ್ತಿದೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net