ತಾಯಿಯಾಗುತ್ತಿರುವ ಖುಷಿಯಲ್ಲಿ ಪ್ರಣೀತಾ: ವಿಭಿನ್ನವಾಗಿ ಸುದ್ದಿ ಹಂಚಿಕೊಂಡ ದಂಪತಿ

1264287
Published on

ಬೆಂಗಳೂರು: ದಕ್ಷಿಣ ಭಾರತದ ಪ್ರತಿಭಾವಂತ ನಟಿ ಪ್ರಣೀತಾ ಸುಭಾಷ್ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಂತರ ಅಭಿಮಾನಿಗಳಲ್ಲಿ ಕ್ಷಮೆ ಕೋರಿ ಸ್ಪಷ್ಟನೆ ನೀಡಿದ ಸಂಗತಿ ಎಲ್ಲರಿಗೂ ತಿಳಿದೇ ಇದೆ. ತಾಜಾ ವಿಷಯವೇನೆಂದರೆ ಪ್ರಣೀತಾ ಅವರು ತಾಯಿಯಾಗುತ್ತಿದ್ದಾರೆ.

ಗರ್ಭಿಣಿ ಆಗಿರುವ ಪ್ರಣೀತಾ, ಈ ಸುದ್ದಿಯನ್ನ ವಿಭಿನ್ನವಾಗಿ ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ. ಪತಿ ಹಾಗೂ ಉದ್ಯಮಿ ನಿತಿನ್ ರಾಜು ಜತೆ ಇರುವ ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿ ತಾಯಿ ಆಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಒಂದು ಫೋಟೋದಲ್ಲಿ ಪ್ರಣೀತಾ ಮತ್ತು ನಿತಿನ್​ ಪ್ರಗ್ನೆಂಟ್​ ಕಿಟ್​ ಹಿಡಿದಿದ್ದರೆ, ಇನ್ನೊಂದು ಫೋಟೋದಲ್ಲಿ ನಿತಿನ್​, ಪ್ರಣಿತಾರನ್ನು ಎತ್ತಿಕೊಂಡಿದ್ದು, ಪ್ರಣೀತಾ ಸ್ಕ್ಯಾನ್​ ರಿಪೋರ್ಟ್​ ಅನ್ನು ಕ್ಯಾಮೆರಾಗೆ ಪ್ರದರ್ಶಿಸುವ ಮೂಲಕ ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

Koo App
ನನ್ನ ಗಂಡನ 34 ನೇ ಹುಟ್ಟುಹಬ್ಬಕ್ಕೆ , ಮೇಲಿನ ದೇವತೆಗಳು ನಮಗಾಗಿ 🧿 ❤️
View attached media content
-Pranitha Subhash (@pranithasubhash)11 Apr 2022

ಸದ್ಯ ಪ್ರಣೀತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಪ್ರಣೀತಾ ಅವರು ಕಳೆದ ವರ್ಷ ಮೇ 30ರಂದು ನಿತಿನ್​ ಜತೆ ಗುಟ್ಟಾಗಿ ಮದುವೆ ಆಗಿದ್ದಾರೆ. ಮದುವೆ ಬಳಿಕ ಸುದೀರ್ಘ ಪತ್ರ ಬರೆದಿದ್ದ ಪ್ರಣೀತಾ, 2021ರ ಮೇ 30ರಂದು ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದೇವೆ. ಈ ಸಂತಸದ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮದುವೆಯ ದಿನಾಂಕ ಅರ್ಜೆಂಟಾಗಿ ನಿಗದಿಯಾಯಿತು. ಕರೊನಾ ಹಿನ್ನೆಲೆಯಲ್ಲಿ ಮದುವೆಗೆ ಯಾರನ್ನೂ ಆಮಂತ್ರಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಕರೊನಾ ನಿಯಮವನ್ನ ಕಟ್ಟುನಿಟ್ಟಾಗಿ ನಾವೂ ಪಾಲಿಸಬೇಕಿದೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ’ ಎಂದು ಕೋರಿದ್ದರು.

ದರ್ಶನ್​ ಅಭಿನಯದ ‘ಪೊರ್ಕಿ’ ಸಿನಿಮಾದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣೀತಾ ತೆಲುಗು, ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net