ವಿಶ್ವ ಚೆಸ್​ ಚಾಂಪಿಯನ್ ಡಿಂಗ್ ಲಿರೇನ್ ಮಣಿಸಿ ನಂ.1 ಸ್ಥಾನಕ್ಕೇರಿದ 'ಪ್ರಜ್ಞಾನಂದ'

ಚೆಸ್​ ಮಾಸ್ಟರ್
Published on

ನೆದರ್ಲೆಂಡ್ಸ್​: ವಿಶ್ವ ಚೆಸ್​ ಚಾಂಪಿಯನ್ ಡಿಂಗ್ ಲಿರೇನ್ ಅವರನ್ನು ಮಣಿಸುವ ಮೂಲಕ ಭಾರತದ ಗ್ರ್ಯಾಂಡ್​ ಮಾಸ್ಟರ್​ ವಿಶ್ವನಾಥ್ ಆನಂದ್​ ಅವರನ್ನು ಉದಯೋನ್ಮುಖ ತಾರೆ ಪ್ರಜ್ಞಾನಂದ ನಂಬರ್ 1 ಚೆಸ್​ ಚಾಂಪಿಯನ್​ ಪಟ್ಟಕ್ಕೇರಿದ್ದಾರೆ.

ನೆದರ್ಲೆಂಡ್ಸ್​ ವಿಜ್ಕ್​ ಆನ್​ ಝೀನಲ್ಲಿ ನಡೆದ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಮಣಿಸಿದ ಚೆಸ್ ಪ್ರತಿಭೆ ಪ್ರಜ್ಞಾನಂದ ಅವರು ನಂ.1 ಸ್ಥಾನಕ್ಕೇರಿ ದಾಖಲೆ ನಿರ್ಮಿಸಿದರು. ಆ ಮೂಲಕ ಪ್ರಜ್ಞಾನಂದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಂ.1 ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಇದು 2024 ರ ಮೊದಲ ಸೂಪರ್ ಟೂರ್ನಮೆಂಟ್ ಆಗಿತ್ತು.

ವಿಶ್ವನಾಥನ್​ ಆನಂದ್ ಅವರು 2,748 ಪಾಯಿಂಟ್​ ಗಳಿಸಿ ವಿಶ್ವ ಚಾಂಪಿಯನ್​ ಆಗಿದ್ದರು. ಇದೀಗ ಪ್ರಜ್ಞಾನಂದ ಅವರು 2,748.3 ಅಂಕ ಗಳಿಸಿದ್ದಾರೆ. ವಿಶ್ವ ಚೆಸ್​ ಸಂಸ್ಥೆಯ ಪ್ರತಿ ತಿಂಗಳು ಆರಂಭದಲ್ಲಿ ರೇಟಿಂಗ್​ಗಳನ್ನು ಪ್ರಕಟಿಸುತ್ತದೆ.

ಕಪ್ಪು ಕಾಯಿಗಳೊಂದಿಗೆ ಆಟ ಆರಂಭಿಸಿದ ಪ್ರಜ್ಞಾನಂದ ಅವರು 62 ನಡೆಗಳ ಗೆಲುವು ದಾಖಲಿಸಿದರು. ಇದರಿಂದ ಪ್ರಜ್ಞಾನಂದ ಅವರು ಮಾಸ್ಟರ್ ವಿಶ್ವನಾಥನ್​ ಆನಂದ್ ನಂತರ ಚೆಸ್​ನಲ್ಲಿ ಹಾಲಿ ವಿಶ್ವ ಚಾಂಪಿಯನ್​ನನ್ನು ಸೋಲಿಸಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಜ್ಞಾನಂದ, ಚೆಸ್​ನಲ್ಲಿ ವಿಶ್ವ ಚಾಂಪಿಯನ್ ವಿರುದ್ಧ ಮೊದಲ ಬಾರಿಗೆ ಗೆದ್ದಿರುವುದು ಖುಷಿ ಕೊಟ್ಟಿದೆ. ಮೊದಲ ಮೂರು ಪಂದ್ಯಗಳು ಸಾಕಷ್ಟು ಆಸಕ್ತಿದಾಯಕವಾಗಿದ್ದವು. ನಾನು ಉತ್ತಮವಾಗಿ ಆಡುತ್ತಿದ್ದೇನೆ ಎಂದು ಭಾವಿಸುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net