More

    ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ: ಜೆಟ್ಲಾಗ್ ಪರವಾನಗಿ ರದ್ದು

    ಬೆಂಗಳೂರು: ನಟ ದರ್ಶನ್ ಹಾಗೂ ಇತರೆ ಸಿನಿಮಾ ತಾರೆಯರು ನಿಯಮ ಮೀರಿ ತಡರಾತ್ರಿವರೆಗೆ ಬೆಂಗಳೂರಿನ ಜೆಟ್ಲಾಗ್ ಪಬ್​ನಲ್ಲಿ ಪಾರ್ಟಿ ಮಾಡಿರುವ ಬಗ್ಗೆ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಟ ದರ್ಶನ್​ ಸೇರಿ ಹಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಇದೀಗ ಅವಧಿ ಮೀರಿ ಪಾರ್ಟಿ ಮಾಡಲು ಅವಕಾಶ ಕೊಟ್ಟಿದ್ದ ಜೆಟ್ಲಾಗ್ ಪಬ್​ನ ಪರವಾನಗಿಯನ್ನು 25 ದಿನಗಳ ಕಾಲ ರದ್ದು ಮಾಡಿ ಆದೇಶಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇದನ್ನೂ ಓದಿ:ಸರ್ಕಾರಿ ನೌಕರರ ವೇತನ ಪರಿಷ್ಕರಣೆ; ಆಯೋಗದ ಅಂತಿಮ ವರದಿ ಬಂದ ನಂತರ ತೀರ್ಮಾನ: ಸಿಎಂ

    ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ: ಜೆಟ್ಲಾಗ್ ಪರವಾನಗಿ ರದ್ದು
    ಕಾಟೇರಾ ಸಿನಿಮಾ ತಂಡ

    ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟರಾದ ದರ್ಶನ್ ತೂಗುದೀಪ, ಚಿಕ್ಕಣ್ಣ, ಡಾಲಿ ಧನಂಜಯ್, ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ರಾತ್ರಿಯಿಡೀ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಬ್ರಹ್ಮಣ್ಯ ನಗರ ಪೊಲೀಸರ ಮುಂದೆ ಹಾಜರಾಗಿದ್ದರು.

    ಜೆಟ್ಲಾಗ್ ಪಬ್​ ಅಬಕಾರಿ ನಿಯಮ ಮೀರಿರುವ ಕಾರಣ ಅದರ ಪರವಾನಗಿಯನ್ನು ಮುಂದಿನ 25 ದಿನಗಳ ಅವಧಿಗೆ ರದ್ದು ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಮುಂದಿನ 25 ದಿನಗಳ ಕಾಲ ಜೆಟ್ಲಾಗ್  ಪಬ್​ನಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎನ್ನಲಾಗಿದೆ.

    ಜೆಟ್ಲಾಗ್ ಪಬ್​ನಲ್ಲಿ ಅಬಕಾರಿ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಎಫ್ಐಆರ್ ನಲ್ಲಿ ಉಲ್ಲೇಖ ಮಾಡಲಾಗಿತ್ತು. ಹಾಗಾಗಿ ಈಗ ಪರವಾನಗಿ ರದ್ದು ಮಾಡಲಾಗಿದೆ. ಮೂರು ಬಾರಿ ನಿಯಮ ಉಲ್ಲಂಘನೆ ಮಾಡಿದರೆ ಪರವಾನಗಿ ರದ್ದು ಮಾಡಲಾಗುತ್ತದೆ. ಮೊದಲ ಬಾರಿ ಜೆಟ್ಲಾಗ್ ವಿರುದ್ಧ ದೂರು ಬಂದಿರುವ ಕಾರಣ 25 ದಿನಗಳ ಕಾಲ ಪರವಾನಗಿ ರದ್ದು ಮಾಡಲಾಗಿದೆ.

    ವಿರೋಧಿಗಳಿಗೆ ದರ್ಶನ್​ ಹೇಳಿದ್ದೇನು ?: ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ.. ಕಾಲಾಯ ತಸ್ಮಯ್ ನಮಃ..” ಎಂದು ನಟ ದರ್ಶನ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

    Darshan, Sandalwood Katera Cinima, Jetlag
    ದರ್ಶನ್​, ಸಿನಿಮಾ ಕಾಟೇರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts