More

    ಆಸ್ಟ್ರೇಲಿಯನ್​ ಓಪನ್​ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಸುಮಿತ್​ ನಗಾಲ್​

    ಮೆಲ್ಬೋರ್ನ್​: ಭಾರತದ ಆಟಗಾರ ಸುಮಿತ್​ ನಗಾಲ್​ ವೃತ್ತೀಜಿವನದ ಅತಿದೊಡ್ಡ ಗೆಲುವಿನೊಂದಿಗೆ ವರ್ಷದ ಮೊದಲ ಗ್ರಾಂಡ್​ ಸ್ಲಾಂ ಆಸ್ಟ್ರೆಲಿಯನ್​ ಓಪನ್​ನಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ವಿಶ್ವ ನಂ. 27 ಕಜಾಕ್​ಸ್ತಾನದ ಆಟಗಾರ ಅಲೆಕ್ಸಾಂಡರ್​ ಬಬ್ಲಿಕ್​ ವಿರುದ್ಧ ನೇರಸೆಟ್​ಗಳಿಂದ ಗೆಲ್ಲುವ ಮೂಲಕ ನಗಾಲ್​ ಮೆಲ್ಬೋರ್ನ್​ ಪಾರ್ಕ್​ನಲ್ಲಿ ಹಲವು ಭಾರತೀಯ ದಾಖಲೆಗಳನ್ನು ನಿರ್ಮಿಸಿದರು. ಅವರು ಕಳೆದ 35 ವರ್ಷಗಳಲ್ಲಿ ಗ್ರಾಂಡ್​ ಸ್ಲಾಂ ಟೂರ್ನಿಯ ಸಿಂಗಲ್ಸ್​ ವಿಭಾಗದಲ್ಲಿ ಶ್ರೇಯಾಂಕಿತನನ್ನು ಸೋಲಿಸಿದ ಮೊದಲ ಆಟಗಾರ ಎಂಬ ಇತಿಹಾಸ ಬರೆದಿದ್ದಾರೆ. 2000ದ ಬಳಿಕ ಆಸ್ಟ್ರೆಲಿಯನ್​ ಓಪನ್​ನಲ್ಲಿ ಸಿಂಗಲ್ಸ್​ ಪಂದ್ಯ ಗೆದ್ದ ಕೇವಲ 3ನೇ ಭಾರತೀಯರೂ ಆಗಿದ್ದಾರೆ.

    ಅರ್ಹತಾ ಸುತ್ತಿನಿಂದ ಮೇಲೇರಿದ್ದ 26 ವರ್ಷದ ಸುಮಿತ್​ ನಗಾಲ್​ ಮಂಗಳವಾರ ನಡೆದ ಮೊದಲ ಸುತ್ತಿನ ಕಾದಾಟದಲ್ಲಿ 31ನೇ ಶ್ರೇಯಾಂಕಿತ ಬಬ್ಲಿಕ್​ ವಿರುದ್ಧ 6-4, 6-2, 7-6ರಿಂದ ಎರಡು ಗಂಟೆ 38 ನಿಮಿಷಗಳಲ್ಲಿ ಗೆಲುವು ಸಾಧಿಸಿದರು. ವಿಶ್ವ ನಂ. 137 ಆಟಗಾರ ನಗಾಲ್​ಗೆ ಇದು 2021ರ ಬಳಿಕ ಗ್ರಾಂಡ್​ ಸ್ಲಾಂ ಪ್ರಧಾನ ಸುತ್ತಿನಲ್ಲಿ ಇದು ಮೊದಲ ಪಂದ್ಯವಾಗಿತ್ತು. 2ನೇ ಸುತ್ತಿನಲ್ಲಿ ಅವರು ವಿಶ್ವ ನಂ. 140 ಚೀನಾದ ಜುನ್​ಚೆಂಗ್​ ಶಾಂಗ್​ ವಿರುದ್ಧ ಸೆಣಸಲಿದ್ದಾರೆ. 3ನೇ ಸುತ್ತಿಗೇರಿದರೆ ವಿಶ್ವ ನಂ. 2 ಸ್ಪೇನ್​ ತಾರೆ ಕಾಲೋರ್ಸ್​ ಅಲ್ಕರಾಜ್​ ಸವಾಲು ಎದುರಾಗುವ ನಿರೀಕ್ಷೆ ಇದೆ.

    1989ರಲ್ಲಿ ಕೊನೆಯದಾಗಿ ರಮೇಶ್​ ಕೃಷ್ಣನ್​ ಗ್ರಾಂಡ್​ ಸ್ಲಾಂನಲ್ಲಿ ಶ್ರೇಯಾಂಕಿತ ಆಟಗಾರನನ್ನು ಮಣಿಸಿದ ಭಾರತೀಯ ಎನಿಸಿದ್ದರು. ರಮೇಶ್​ ಕೃಷ್ಣ ಆಸ್ಟ್ರೆಲಿಯನ್​ ಓಪನ್​ನಲ್ಲೇ ಆಗಿನ ವಿಶ್ವ ನಂ. 1 ಹಾಗೂ ಹಾಲಿ ಚಾಂಪಿಯನ್​ ಸ್ವೀಡನ್​ನ ಮ್ಯಾಟ್ಸ್​ ವಿಲಾಂಡರ್​ಗೆ ಸೋಲುಣಿಸಿದ್ದರು. ನಗಾಲ್​ 2019ರ ಯುಎಸ್​ ಓಪನ್​ನಲ್ಲಿ ಗ್ರಾಂಡ್​ ಸ್ಲಾಂಗೆ ಪದಾರ್ಪಣೆ ಮಾಡಿದಾಗ ಸ್ವಿಸ್​ ದಿಗ್ಗಜ ರೋಜರ್ ಫೆಡರರ್​ ವಿರುದ್ಧ ಮೊದಲ ಸೆಟ್​ ಗೆದ್ದು ಗಮನಸೆಳೆದಿದ್ದರು. ಬಳಿಕ 2020ರ ಆವೃತ್ತಿಯಲ್ಲಿ ಅವರು ಗ್ರಾಂಡ್​ ಸ್ಲಾಂ ಪ್ರಧಾನ ಸುತ್ತಿನಲ್ಲಿ ಮೊದಲ ಗೆಲುವಿನ ಸಾಧನೆ ಮಾಡಿದ್ದರು.

    ಆಯ್ಕೆಗಾರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ; ಸಲೀಲ್​ ಅಂಕೋಲಗೆ ಕೊಕ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts