ಹರಿಯಾಣ ಸ್ಟೀಲರ್ಸ್​ಗೆ ಸತತ ಎರಡನೇ ಜಯ: ಪ್ರೊ ಕಬಡ್ಡಿ ಲೀಗ್​ನಲ್ಲಿ ತಮಿಳ್ ತಲೈವಾಸ್​ಗೆ ಸೋಲು

Hariyana
Published on

ಬೆಂಗಳೂರು: ರೈಡರ್ ಮಂಜೀತ್ (8 ಅಂಕ) ಹಾಗೂ ಡಿಫೆಂಡರ್ ಜೈದೀಪ್ ದಹಿಯಾ (5) ಭರ್ಜರಿ ನಿರ್ವಹಣೆಯ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ತಂಡವನ್ನು 27-22 ಅಂತರದಿಂದ ಸೋಲಿಸಿ ಸತತ ಎರಡನೇ ಜಯ ಸಾಧಿಸಿದ ಸಾಧನೆ ತೋರಿದೆ.

ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಹರಿಯಾಣ ತಂಡ ತಮಿಳ್ ತಲೈವಾಸ್ ಎದುರು ಸಂಘಟಿತ ಪ್ರದರ್ಶನ ತೋರಿತು. ಕಡಿಮೆ ಅಂಕಗಳ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಪೈಪೋಟಿ ನಡೆಸಿದವು.

ಮೊದಲಾರ್ಧದಲ್ಲೇ ಎದುರಾಳಿ ತಂಡವನ್ನು ಆಲೌಟ್ ಮಾಡಿದ ಹರಿಯಾಣ 5 ಅಂಕಗಳಿಂದ ಮೇಲುಗೈ ಸಾಧಿಸಿತು. ದ್ವಿತೀಯಾರ್ಧದಲ್ಲಿ ಎಚ್ಚರಿಕೆಯ ಆಟವಾಡಿದ ಹರಿಯಾಣ ತಂಡ ತಲೈವಾಸ್​ಗೆ ಮುನ್ನಡೆ ಸಾಧಿಸುವ ಅವಕಾಶ ನೀಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net