ಪೊಲೀಸ್​ ಬಸ್​ ಡಿಕ್ಕಿಯಾಗಿ ಮೂವರು ಬೈಕ್​ ಸವಾರರ ಸಾವು: ಬಸ್ಸಿನಡಿ ಸಿಲುಕಿ ಓರ್ವ ಸವಾರ​ ಸಜೀವ ದಹನ

Police Bus
Published on

ಪಟನಾ: ಬಿಹಾರದ ಪೊಲೀಸ್​ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್​ ಡಿಕ್ಕಿಯಾಗಿ ಮೂವರು ಬೈಕ್​ ಸವಾರರು ದುರಂತ ಸಾವಿಗೀಡಾಗಿರುವ ಘಟನೆ ಬಿಹಾರದ ಡಿಯೋರಿಯಾ ಗ್ರಾಮದ ಬಳಿಯ ಛಪ್ರಾ-ಸಿವಾನ್​ ಹೆದ್ದಾರಿಯಲ್ಲಿ ಬುಧವಾರ (ಅ.12) ಬೆಳಗ್ಗೆ ನಡೆದಿದೆ.

ಪೊಲೀಸ್ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್​, ಬೈಕ್​ನಲ್ಲಿ ಹೋಗುತ್ತಿದ್ದವರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಮೂವರು ಮೃತಪಟ್ಟರು. ಈ ವೇಳೆ ಓರ್ವ ಸವಾರ ತನ್ನ ಬೈಕ್​ ಸಮೇತ ಬಸ್ಸಿನ ಅಡಿಗೆ ಸಿಲುಕಿದ ಪರಿಣಾಮ ಸುಮಾರು 90 ಮೀಟರ್​ ದೂರ ಎಳೆದುಹೋಯಿತು. ಇದರಿಂದಾಗಿ ಬಸ್​ ಇಂಧನ ಟ್ಯಾಂಕ್​ ಸ್ಫೋಟಗೊಂಡು, ಬೈಕ್​ ಸವಾರ ಸಜೀಹ ದಹನವಾದನು.

ಅಪಘಾತದ ನಂತರ ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಆ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಬಸ್‌ನಿಂದ ಇಳಿದು ಪರಾರಿಯಾಗುತ್ತಿರುವ ದೃಶ್ಯವು ಸಹ ವಿಡಿಯೋದಲ್ಲಿದೆ.

ಬಿಹಾರದ ಸಿತಾಬ್ದಿಯಾರಾದಲ್ಲಿ ದಿವಂಗತ ರಾಜಕೀಯ ನಾಯಕ ಜಯಪ್ರಕಾಶ್ ನಾರಾಯಣ್ ಅವರ 120 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಬಸ್ ಹಿಂತಿರುಗುತ್ತಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net