More

    ಗಂಡನನ್ನು ಬಿಟ್ಟು ಹಣದ ಹಿಂದೆ ಬಿದ್ದವಳ ಬಗ್ಗೆ ಏನು ಹೇಳಲಿ ಎಂದ ನೆಟ್ಟಿಗನಿಗೆ ನವ್ಯಾ ಕೊಟ್ಟ ತಿರುಗೇಟು ಹೀಗಿತ್ತು…

    ತಿರುವನಂತಪುರ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್​ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಅದೇ ರೀತಿ ಇದೀಗ ಮಲಯಾಳಂ ಬ್ಯೂಟಿ ನವ್ಯಾ ನಾಯರ್​ ತಮ್ಮ ವಿರುದ್ಧದ ಕಾಮೆಂಟ್​ಗೆ ತಿರುಗೇಟು ನೀಡಿದ್ದಾರೆ.

    ನವ್ಯಾ ನಾಯರ್​ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ರೆಸಾರ್ಟ್ ಒಂದರಲ್ಲಿ ತೆಗೆದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದರು. ಅದಕ್ಕೆ ನೀವು ನಿರ್ಭೀತರಾಗಲು ಬಯಸಿದರೆ, ಪ್ರೀತಿಯನ್ನು ಆರಿಸಿ ಎಂದು ಫೋಟೋಗೆ ಅಡಿಬರಹ ನೀಡಿದ್ದರು.

    ಫೋಟೋಗೆ ಸಾಕಷ್ಟು ಧನಾತ್ಮಕ ಕಾಮೆಂಟ್​ಗಳ ನಡುವೆ ಕೆಲ ನಟ್ಟಿಗರ ಋಣಾತ್ಮಕ ಕಾಮೆಂಟ್​ ಸಹ ಮಾಡಿದ್ದಾರೆ. ಅದರಲ್ಲೊಬ್ಬ ನೆಟ್ಟಿಗ, ಗಂಡನನ್ನು ಬಿಟ್ಟು, ಹಣ ಮತ್ತು ಅಭಿಮಾನಿಗಳ ಹಿಂದೆ ಬಿದ್ದ ನಿಮ್ಮ ಬಗ್ಗೆ ನಾನೇನು ಹೇಳಲಿ, ಇರುವುದು ಒಂದೇ ಒಂದು ಜೀವನ. ಖುಷಿಯಾಗಿರಿ ಎಂದು ಕಾಮೆಂಟ್​ ಮಾಡಿದ್ದಾನೆ.

    ನೆಟ್ಟಿಗನ ಕಾಮೆಂಟ್​ಗೆ ಪ್ರತ್ಯುತ್ತರ ನೀಡಿರುವ ನವ್ಯಾ ನಾಯರ್​, ಇದೆಲ್ಲವನ್ನು ನಿಮಗೆ ಯಾರು ಹೇಳಿದ್ದು? ಆದರೂ ನೀವು ಹೇಳಿದ ಕೊನೆಯ ಸಾಲು ಸರಿಯಿದೆ. ಇರುವುದೊಂದೆ ಜೀವನ. ನೀವು ಕೂಡ ಖುಷಿಯಾಗಿರಿ. ಅದನ್ನು ಬಿಟ್ಟು ಅನವಶ್ಯಕವಾಗಿ ಯಾಕೆ ದ್ವೇಷವನ್ನು ಹರಡುತ್ತಿದ್ದೀರಾ ಎಂದು ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​)

    ಅಂಕಿತಾ ಭಂಡಾರಿ ಕೊಲೆ ಪ್ರಕರಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಉತ್ತರಾಖಂಡದ ಮಾಜಿ ಡಿಜಿಪಿ

    VIDEO| ಭೂತದ ಹಿಂದೆ ಬಿದ್ದ ವಾರಣಾಸಿ ಪೊಲೀಸರು: ಏರಿಯಾ ಪೂರ್ತಿ ಗಸ್ತು, ದೆವ್ವದ ವಿಡಿಯೋ ವೈರಲ್​

    ಹೆಬ್ಬುಲಿ ಚಿತ್ರದ ಖಳನಟ, ಬಿಜೆಪಿ ಸಂಸದ ರವಿ ಕಿಶನ್​ಗೆ 3.5 ಕೋಟಿ ರೂ. ವಂಚನೆ: ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts