ದೇಹದ ಬಗ್ಗೆ ಕಾಮೆಂಟ್​ ಮಾಡಿದ ನೆಟ್ಟಿಗನಿಗೆ ನಟಿ ನಂದಿತಾ ಶ್ವೇತಾ ಕೊಟ್ಟ ಖಡಕ್​ ಉತ್ತರ ಹೀಗಿತ್ತು...

Nanditha Shwetha
Published on

ಹೈದರಾಬಾದ್​: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್​ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ.

ಇದೀಗ ಅದೇ ರೀತಿಯ ಕಾಮೆಂಟ್​ಗೆ ನಟಿ ನಂದಿತಾ ಶ್ವೇತಾ ಉತ್ತರ ನೀಡಿದ್ದಾರೆ. ಇತ್ತೀಚೆಗೆ ನಂದಿತಾ ಅವರು ತಮ್ಮ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದರು. ಇದಕ್ಕೆ ಕಾಮೆಂಟ್​ ಮಾಡಿದ್ದ ನೆಟ್ಟಿಗನೊಬ್ಬ ದಯವಿಟ್ಟು ನಿಮ್ಮ ದೇಹದ ಮೇಲೆ ಗಮನ ಹರಿಸಿ. ನಿಮ್ಮ ದೇಹದ ಆಕಾರವನ್ನು ಸ್ವಲ್ಪ ನೋಡಿಕೊಳ್ಳಿ. ಕೊನೇ ಪಕ್ಷ ವರ್ಕೌಟ್​ ಮಾಡಿ. ನೋಡಲು ಆಂಟಿ ಥರಾ ಕಾಣುತ್ತಿದ್ದೀರಾ ಎಂದು ಕಾಮೆಂಟ್​ ಮಾಡಿದ್ದಾನೆ.

ಇದರಿಂದ ಅಸಮಾಧಾನಗೊಂಡಿರುವ ನಂದಿತಾ, ನೆಟ್ಟಿಗ ಕಾಮೆಂಟ್​ ಮಾಡಿರುವ ಸ್ಕ್ರೀನ್​ಶಾಟ್​ ಶೇರ್​ ಮಾಡಿ, ಮನುಷ್ಯರೇ ಹೀಗೆಯೇ? ನಾನೇನು ದೇವತೆಯಲ್ಲ. ನಾನೂ ಕೂಡ ಸಾಮಾನ್ಯ ವ್ಯಕ್ತಿ. ಎಲ್ಲರಂತೆ ನಮಗೂ ಕೆಲವು ಪರಿಸ್ಥಿತಿಗಳು ಇವೆ. ಈ ರೀತಿ ಅದು ಹೇಗೆ ಮಾತನಾಡುತ್ತೀರಾ? ನಾನು ನನ್ನ ದೇಹವನ್ನು ಪ್ರೀತಿಸುತ್ತೇನೆ. ನಾನು ಈಗ ಇರುವ ಪರಿಸ್ಥಿತಿಯನ್ನು ನಾನು ಇಷ್ಟಪಡುತ್ತೇನೆ, ನಾನು ನೋಡುವ ರೀತಿ ಇದು ಎಂದು ಖಾರವಾಗಿಯೇ ತಿರುಗೇಟು ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net