More

    ವೈಎಸ್​ವಿ ದತ್ತಾರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳಿ: ಸಿದ್ದರಾಮಯ್ಯಗೆ ಬೆಂಬಲಿಗರ ಒತ್ತಾಯ

    ಬೆಂಗಳೂರು: ಮಾಜಿ ಶಾಸಕ ವೈ.ಎಸ್​.ವಿ. ದತ್ತ ಅವರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳಿ ಎಂದು ದತ್ತಾ ಅವರ ಬೆಂಬಲಿಗರು ಬಹಿರಂಗವಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯಗೆ ಸೋಮವಾರ ಮನವಿ ಮಾಡಿದ್ದಾರೆ. ಸಂಕ್ರಾಂತಿ ಬಳಿಕ ಮಾಜಿ ಶಾಸಕ ವೈಎಸ್​ವಿ ದತ್ತ ಕಾಂಗ್ರೆಸ್​ ಸೇರಲಿದ್ದಾರೆ ಎಂದು ಹರಿದಾಡುತ್ತಿರವ ಸುದ್ದಿಗೆ ದತ್ತ ಬೆಂಬಲಿಗರ ಈ ಮಾತು ಪುಷ್ಟಿ ನೀಡುವಂತಿದೆ.

    ರೈತರ ವಿಚಾರವಾಗಿ ದತ್ತ ಅವರು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು. ಈ ವೇಳೆ ಬೆಂಬಲಿಗರು ಈ ಪ್ರಸ್ತಾಪ ಮಾಡಿದರು. ಸಿದ್ದರಾಮಯ್ಯನವರೇ ಕೃಷ್ಣಮೂರ್ತಿ ಕಾಲದಿಂದಲೂ ನೀವು ಹೇಳಿದಂತೆಯೇ ಮಾಡಿದ್ದೇವೆ, ಇದೊಂದು ಬಾರಿ ದತ್ತ ಅವರಿಗೆ ಅವಕಾಶ ಮಾಡಿಕೊಡಿ ಎಂದು ಬೆಂಬಲಿಗರು ಮನವಿ ಮಾಡಿದರು.

    ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದತ್ತ ಕಾಂಗ್ರೆಸ್​ ಸೇರುವುದು ಬಿಡುವುದು ಅವರೇ ನಿರ್ಧರಿಸಬೇಕು. ಅವರ ಬೆಂಬಲಿಗರು ದತ್ತ ಅವರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳಿ ಅಂತ ಹೇಳಿದರು. ಆದರೆ ಅದನ್ನ ದತ್ತ ಅವರೇ ನಿರ್ಧಾರ ಮಾಡಬೇಕು. ನೋಡೋಣ ಮುಂದೆ ಏನೇನಾಗುತ್ತೆ ಅಂತ ಎಂದರು.

    ಹತ್ತು ದಿನದ ಹಿಂದಷ್ಟೇ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಅರೇಕಲ್ಲಮ್ಮ ದೇವಿಯ ಬಾನಸೇವೆ ಅಂಗವಾಗಿ ವೈಎಸ್​ವಿ ದತ್ತ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಂಸದ ಪ್ರಜ್ವಲ್​ ರೇವಣ್ಣ, ಜಾತ್ಯತಿತ ನಿಲುವಿನ ಕಟ್ಟಾಳು ದತ್ತ. ಅವರು ಕಾಂಗ್ರೆಸ್​ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಆರು ತಿಂಗಳಿಂದ ಕಾಂಗ್ರೆಸ್​ನವರೇ ಸೃಷ್ಟಿ ಮಾಡಿರುವ ದತ್ತ ಕಾಂಗ್ರೆಸ್​ ಸೇರ್ಪಡೆ ಕುರಿತಾದ ರೆಕ್ಕೆಪುಕ್ಕವಿಲ್ಲದ ಮಾಹಿತಿ ಹರಿದಾಡುತ್ತಿದೆ. ಇದಕ್ಕೆ ತೆರೆ ಎಳೆಯಬೇಕಾಗಿದೆ. ಜೆಡಿಎಸ್​ ಕಾರ್ಯಕರ್ತರು ಇಂಥ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ಕ್ರಿಯಾಶೀಲರಾಗಬೇಕಿದೆ. ದತ್ತಣ್ಣ ಜೆಡಿಎಸ್​ನಲ್ಲಿ ಭದ್ರವಾಗಿ ನೆಲೆಯೂರಿದ್ದು ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದಿದ್ದರು.

    ವೈಎಸ್​ವಿ ದತ್ತ ಕಾಂಗ್ರೆಸ್​ ಸೇರ್ಪಡೆ ಕುರಿತ ಸುದ್ದಿಗೆ ತೆರೆ ಎಳೆದ ಸಂಸದ ಪ್ರಜ್ವಲ್​ ರೇವಣ್ಣ

    ಕರೊನಾಗೆ ಗಂಡ ಬಲಿ: ಕಂಗಾಲಾದ ಪತ್ನಿ-ಮಗ: ವಿಧವೆಗೆ ಬಾಳು ಕೊಟ್ಟು ಮಾದರಿಯಾದ ಮೃತನ ಸ್ನೇಹಿತ!

    ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಭೀಕರ ಕೊಲೆ: ಮನೆ ಬಾಗಿಲು ಮುರಿದಿಲ್ಲ.. ಆ ರಾತ್ರಿ ಇವರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts