

ಹೈದರಾಬಾದ್: ಚಲ್ ಮೋಹನ್ ರಂಗ ಚಿತ್ರದ ಮೂಲಕ ಟಾಲಿವುಡ್ನಲ್ಲಿ ಸಿನಿ ಜರ್ನಿ ಆರಂಭಿಸಿದ ಗ್ಲಾಮರ್ ಬ್ಯೂಟಿ ಆಶು ರೆಡ್ಡಿ, ಬಿಗ್ಬಾಸ್ ಸಿಸನ್ 3ರಲ್ಲಿ ಭಾಗವಹಿಸುವ ಮೂಲಕ ತುಂಬಾ ಖ್ಯಾತಿ ಪಡೆದಿದ್ದಾರೆ. ನೋಡಲು ಸ್ವಲ್ಪ ಸಮಂತಾರನ್ನೇ ಹೋಲುವುದರಿಂದ ಆಶು ರೆಡ್ಡಿಯನ್ನು ಜೂನಿಯರ್ ಸಮಂತಾ ಅಂತಾನೇ ಕರೆಯುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಆಶು ರೆಡ್ಡಿ, ಆಗಾಗ ತಮ್ಮ ಬೋಲ್ಡ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಅಲ್ಲದೆ, ಅಭಿಮಾನಿಗಳು ಅಥವಾ ನೆಟ್ಟಿಗರ ಜತೆ ಆಗಾಗ ಇನ್ಸ್ಟಾಗ್ರಾಂ ಲೈವ್ ಸೆಷೆನ್ಸ್ ಕೂಡ ನಡೆಸುತ್ತಾರೆ.
ಸಾಮಾನ್ಯವಾಗಿ ಲೈವ್ ಸೆಷೆನ್ಸ್ ವೇಳೆ ತಮಗೆ ಬೇಕಾದ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುವುದು ಸಹಜ. ಕೆಲವೊಮ್ಮೆ ಕೆಲ ನೆಟ್ಟಿಗರು ಅಸಭ್ಯ ಪ್ರಶ್ನೆಗಳನ್ನು ಕೇಳಿ ನಟಿಯರನ್ನು ಮುಜುಗರಕ್ಕೆ ಸಿಲುಕಿಸುತ್ತಾರೆ. ಆದರೆ, ಕೆಲವೊಮ್ಮೆ ಏನೇ ಕೇಳಿದರು ನಟಿಯರು ಬೋಲ್ಡ್ ಆಗಿಯೇ ಉತ್ತರ ಕೊಡುತ್ತಾರೆ.
ಸಾಮಾನ್ಯವಾಗಿ ಫೋನ್ ನಂಬರ್ ಕೊಡಿ ಎಂದು ನಟಿಯರನ್ನು ಅಭಿಮಾನಿಗಳು ಕೇಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ನೆಟ್ಟಿಗ ತನ್ನ ನಂಬರ್ ನೀಡಿ, ಅಕ್ಕ ನಾನು ನಿಮ್ಮ ಜತೆ ಮಾತನಾಡಬೇಕು, ಸಮಯ ಸಿಕ್ಕಾಗ ಕರೆ ಮಾಡಿ ಅಂತಾ ಬರೆದು ತನ್ನ ಮೊಬೈಲ್ ನಂಬರ್ ಅನ್ನು ಕಾಮೆಂಟ್ ಮಾಡಿದ್ದಾನೆ. ಆದರೆ, ನೆಟ್ಟಿಗನ ಕಾಮೆಂಟ್ ಆತನನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಏನಾಯಿತು ಅಂದರೆ, ನಟಿ ಆಶು ರೆಡ್ಡಿ ನೆಟ್ಟಿಗನ ಫೋನ್ ನಂಬರ್ ಅನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಾದ ಬಳಿಕ ನೆಟ್ಟಿಗನಿಗೆ ಒಂದರ ಹಿಂದೆ ಒಂದಂತೆ ಸಿಕ್ಕಾಪಟ್ಟೆ ಕರೆ ಬರಲು ಆರಂಭಿಸಿದೆ. ಇದರಿಂದ ಬೇಸರಗೊಂಡಿರುವ ನೆಟ್ಟಿಗ ಅಕ್ಕ ಕರೆ ಮಾಡಿ ಮಾಡಿ ಸಾಯಿಸುತ್ತಿದ್ದಾರೆ. ದಯಮಾಡಿ ಪೋಸ್ಟ್ ಡಿಲೀಟ್ ಮಾಡಿ ಅಕ್ಕ ಎಂದು ಗೊಗರೆದಿದ್ದಾನೆ.
ಇದೀಗ ಎರಡು ಫೋಸ್ಟ್ ಅನ್ನು ಒಟ್ಟಿಗೆ ಎಡಿಟ್ ಮಾಡಿ ಆಶು ರೆಡ್ಡಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ನಗುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಇತ್ತ ಫೋನ್ ನಂಬರ್ ಕೊಟ್ಟ ನೆಟ್ಟಿಗನ ಸ್ಥಿತಿ ಇರಲಾಗದೇ ಇರುವೆ ಬಿಟ್ಟುಕೊಂಡಂತಾಗಿದೆ. (ಏಜೆನ್ಸೀಸ್)