More

    ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ದೀಪ್ತಿ ಸುನೈನಾ ಪ್ರೇಮ್​ ಕಹಾನಿ ಬಯಲು: ಯೂಟ್ಯೂಬರ್​ ಜತೆ ದೀಪ್ತಿ ಪ್ಯಾರ್!​

    ಹೈದರಾಬಾದ್​: ಷಣ್ಮುಖ ಜಸ್ವಂತ್ ಅಲಿಯಾಸ್​ ಶನ್ನು… ಈ ಹೆಸರು ತೆಲುಗು ಮಂದಿ ತುಂಬಾ ಪರಿಚಿತ. ಏಕೆಂದರೆ, ಯೂಟ್ಯೂಬ್​ನಲ್ಲಿ ಭಾರೀ ಸಂಚಲನ ಮೂಡಿಸಿರುವ ಶನ್ನು ತೆಲುಗಿನ ಪ್ರಖ್ಯಾತ ಯೂಟ್ಯೂಬರ್​. 4 ಮಿಲಿಯನ್​ ಫಾಲೋವರ್ಸ್​ ಹೊಂದಿದ ಮೊದಲ ಯೂಟ್ಯೂಬರ್​ ಎಂಬ ಹೆಗ್ಗಳಿಕೆಯನ್ನು ಶನ್ನು ಹೊಂದಿದ್ದಾರೆ. ಪ್ರಸ್ತುತ ಅವರು ತೆಲುಗು ಬಿಗ್​ಬಾಸ್​ ಸಿಸನ್​ 5ರ ಸ್ಪರ್ಧಿಯು ಆಗಿದ್ದಾರೆ.

    ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ದೀಪ್ತಿ ಸುನೈನಾ ಪ್ರೇಮ್​ ಕಹಾನಿ ಬಯಲು: ಯೂಟ್ಯೂಬರ್​ ಜತೆ ದೀಪ್ತಿ ಪ್ಯಾರ್!​

    ಕಿರುಚಿತ್ರ, ಡ್ಯಾನ್ಸ್​ ವಿಡಿಯೋ ಮೂಲಕ ಶನ್ನು ತುಂಬಾ ಪ್ರಸಿದ್ಧಿ ಪಡೆದಿದ್ದಾರೆ. ಅದರಲ್ಲೂ ಅರೇ ಎಂಟ್ರಾ ಇಧಿ… ಡೈಲಾಗ್​ ಅಂತೂ ಸಿಕ್ಕಾಪಟ್ಟೆ ಫೇಮಸ್​. ಬಿಗ್​ಬಾಸ್​ ವೇದಿಕೆ ಮೇಲೆ ಸ್ವತಃ ನಾಗಾರ್ಜುನ್​ ಕೂಡ ಆ ಡೈಲಾಗ್​ ಹೊಡೆದಿದ್ದರು.​ ಇತ್ತೀಚೆಗೆ ಡ್ರಂಕ್​ ಆ್ಯಂಡ್​ ಡ್ರೈವ್​ ಅಪಘಾತದ ಕೇಸ್​ನಿಂದಲೂ ಶನ್ನು ಸುದ್ದಿಯಾಗಿದ್ದರು. ಸದ್ಯ ಬಿಗ್​ಬಾಸ್​ಗೆ 19ನೇ ಸ್ಪರ್ಧಿಯಾಗಿ ಆಗಮಿಸಿರುವ ಶನ್ನು ತಮ್ಮ ಗರ್ಲ್​ಫ್ರೆಂಡ್​ ವಿಚಾರವಾಗಿ ಸುದ್ದಿಯಾಗಿದ್ದಾರೆ.

    ಕಳೆದ ಶನಿವಾರ ನಡೆದ 7ನೇ ಎಪಿಸೋಡ್​ ವೇಳೆ ಶನ್ನು ತಮ್ಮ ಗರ್ಲ್​ಫ್ರೆಂಡ್​ ಹೆಸರನ್ನು ಬಹಿರಂಗಪಡಿಸಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ದೀಪ್ತಿ ಸುನೈನಾ. ಈ ಹಿಂದೆ ಎರಡನೇ ಆವೃತ್ತಿಯ ಬಿಗ್​ಬಾಸ್​ ಶೋನಲ್ಲಿ ದೀಪ್ತಿ ಸ್ಪರ್ಧಿಯಾಗಿದ್ದರು. ಈ ವೇಳೆ ನಾನಿ ಶೋ ನಡೆಸಿಕೊಟ್ಟಿದ್ದರು.

    ಇನ್ನು ಶನ್ನು ಮತ್ತು ದೀಪ್ತಿ ಸೋಶಿಯಲ್​ ಮೀಡಿಯಾದಲ್ಲಿ ಪ್ರಖ್ಯಾತ ಜೋಡಿಯಾಗಿದ್ದಾರೆ. ಅನೇಕ ಡ್ಯಾನ್ಸ್​ ವಿಡಿಯೋಗಳನ್ನು ಒಟ್ಟಿಗೆ ಮಾಡಿದ್ದಾರೆ. ಅನೇಕ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಬಿಗ್​ಬಾಸ್​ 5ನೇ ಆವೃತ್ತಿಗೆ ಶನ್ನು ಹೋದಾಗ ದೀಪ್ತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಟಿವಿಯಲ್ಲಿ ಪ್ರತಿದಿನ ನಿನ್ನನ್ನು ನೋಡಲು ಮತ್ತು ಹೆಮ್ಮೆ ಪಡಲು ಕಾಯಲು ಸಾಧ್ಯವಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನಗಾಗಿ ಇರುತ್ತೇನೆಂದು ದೀಪ್ತಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

    PHOTOS| ಮಾಜಿ ಸಿಎಂ HDK ಕುಟುಂಬದಲ್ಲಿ ಸಂಭ್ರಮ: ನಿಖಿಲ್​ ಪತ್ನಿ ರೇವತಿ ಸೀಮಂತದ ಫೋಟೋಗ್ಯಾಲರಿ

    ಸಾವಿನಲ್ಲೂ ನಾಲ್ವರ ಪ್ರಾಣ ಉಳಿಸಿ ಸಾರ್ಥಕತೆ ಮೆರೆದ ಹಾವೇರಿ ಯುವತಿ

    ಗಂಟೆಗಟ್ಟಲೆ ಬಾಲಕಿಯ ಕೊರಳಿಗೆ ಸುತ್ತಿಕೊಂಡ ನಾಗರಹಾವು- ಅಸಹಾಯಕನಾದ ಉರಗ ತಜ್ಞ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts