PHOTOS| ಮಾಜಿ ಸಿಎಂ HDK ಕುಟುಂಬದಲ್ಲಿ ಸಂಭ್ರಮ: ನಿಖಿಲ್​ ಪತ್ನಿ ರೇವತಿ ಸೀಮಂತದ ಫೋಟೋಗ್ಯಾಲರಿ

Nikhil
Published on

ಬೆಂಗಳೂರು: ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ತಮ್ಮ ಮುದ್ದಿನ ಸೊಸೆ ರೇವತಿ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಸೀಮಂತ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.

ಎಚ್​ಎಸ್​ಆರ್​ ಲೇಔಟ್​ನಲ್ಲಿ ಇರುವ ಮಾನ್ವಿ ಕನ್ವೆನ್ಷನ್ ಹಾಲ್​ನಲ್ಲಿ ರೇವತಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ರೇವತಿ ಮತ್ತು ನಿಖಿಲ್​ ಕುಮಾರಸ್ವಾಮಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.​

ಕೋವಿಡ್​ ಹಿನ್ನೆಲೆಯಲ್ಲಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಮಾತ್ರ ಸೀಮಂತ ಕಾರ್ಯಕ್ರಮ ಸರಳವಾಗಿ ನೆರವೇರಿದೆ. ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ದಂಪತಿ, ಮಾಜಿ ಸಚಿವ ಎಚ್​.ಡಿ. ರೇವಣ್ಣ ದಂಪತಿ ಹಾಗೂ ಕೆಲ ರಾಜಕೀಯ ನಾಯಕರು ಮಾತ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೀಗ ಸೀಮಂತ ಸಮಾರಂಭದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಿಖಿಲ್​ ದಂಪತಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಎಚ್​ಡಿಡಿ ಕುಟುಂಬಕ್ಕೆ ಮತ್ತೊಬ್ಬ ಅತಿಥಿಯ ಆಗಮನವಾಗಲಿದ್ದು, ಸಂಭ್ರಮ ಮತ್ತಷ್ಟು ದ್ವಿಗುಣವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net