ಟಿವಿ ನೋಡುತ್ತಾ ಮ್ಯಾಗಿ ಮಾಡಿ ತಿಂದ ಮಹಿಳೆ ದುರಂತ ಸಾವು! ಇದರ ಮಧ್ಯೆ ನಡೆದಿದ್ದು ಮಹಾ ಎಡವಟ್ಟು

Maggi
Published on

ಮುಂಬೈ: ಇಲಿ ಪಾಷಾಣ ಬೆರಸಿದ್ದ ಆಹಾರವನ್ನು ಆಕಸ್ಮಿಕವಾಗಿ ತಿಂದ 27 ವರ್ಷದ ಮಹಿಳೆ ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮೃತ ಮಹಿಳೆ ತನಗೆ ಗೊತ್ತಿಲ್ಲದೆ ಇಲಿ ಪಾಷಾಣ ಬೆರೆಸಿದ್ದ ಟೊಮ್ಯಾಟೋವನ್ನು ಹಾಕಿ ಮ್ಯಾಗಿ ಮಾಡಿ ತಿಂದ ಪರಿಣಾಮ ದುರಂತ ಸಂಭವಿಸಿದೆ. ಈ ಘಟನೆ ಮುಂಬೈನ ಮಲಾಡ್​ನಲ್ಲಿರುವ ಪಾಸ್ಕಲ್​ ವಾಡಿ ಏರಿಯಾದಲ್ಲಿ ನಡೆದಿದೆ.

ಮೃತ ಯುವತಿಯನ್ನು ರೇಖಾ ನಿಶಾದ್​ ಎಂದು ಗುರುತಿಸಲಾಗಿದೆ. ಮನೆಯಲ್ಲಿರುವ ಇಲಿಗಳನ್ನು ಕೊಲ್ಲಲು ಜುಲೈ 21 ರಂದು ಟೊಮ್ಯಾಟೊಗೆ ಪಾಷಾಣ ಬೆರೆಸಿದ್ದಳು. ಮರುದಿನ, ಅವಳು ಆಕಸ್ಮಿಕವಾಗಿ ತನ್ನ ನೂಡಲ್ಸ್‌ಗೆ ಟೊಮ್ಯಾಟೊವನ್ನು ಸೇರಿಸಿ, ಬೇಯಿಸಿ ತಿಂದ ಪರಿಣಾಮ ಮೃತಪಟ್ಟಿದ್ದಾಳೆ.

ಟಿವಿ ನೋಡುತ್ತಾ ತನಗೆ ಗೊತ್ತಿಲ್ಲದೇ ವಿಷಕಾರಿ ಟೊಮ್ಯಾಟೋವನ್ನು ಮ್ಯಾಗಿಯಲ್ಲಿ ಸೇರಿಸಿದ್ದೇ ದುರಂತಕ್ಕೆ ಕಾರಣವಾಗಿದೆ ಎಂದು ಮಾಳವನಿ ಪೊಲೀಸ್​ ಠಾಣೆಗೆ ಸಬ್​ ಇನ್ಸ್​ಪೆಕ್ಟರ್​ ಮೂಸಾ ದೇವರ್ಸಿ ಹೇಳಿದ್ದಾರೆ.

ಮ್ಯಾಗಿ ತಿಂದ ಕೆಲವೇ ಗಂಟೆಗಳಲ್ಲಿ ಆಕೆ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾಳೆ. ಆಕೆಯ ಗಂಡ ಮತ್ತು ಮೈದುನ ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾದರೂ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ (ಜುಲೈ 27) ಮೃತಪಟ್ಟಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net