ಚಿಕ್ಕ ವಯಸ್ಸಿನಲ್ಲೇ ಪ್ರೀತಿಸಿ 18 ವರ್ಷ ತುಂಬಿದ ಬಳಿಕ ಮದ್ವೆಯಾದ ಯುವತಿಯ ಬದುಕು ದುರಂತ ಅಂತ್ಯ!

Kerala Girl
Published on

ಕೋಯಿಕ್ಕೋಡ್​: ಕೇವಲ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಗಂಡನ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಭಾರೀ ಅನುಮಾನ ಹುಟ್ಟುಹಾಕಿದೆ.

ಮೃತ ಯುವತಿಯ ಹೆಸರು ಭಾಗ್ಯ (19). ಈಕೆ ಕೋಯಿಕ್ಕೋಡ್​ನ ಎಲಥೂರ್​ ನಿವಾಸಿ ಅನಂತು ಎಂಬಾತನ ಪತ್ನಿ. ಭಾಗ್ಯ ಗರ್ಭಿಣಿ ಆಗಿದ್ದಳು. ಇಬ್ಬರು ಪ್ರೀತಿಸಿ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.

ಬಹಳ ಹಿಂದಿನಿಂಗಲೂ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಭಾಗ್ಯಳನ್ನು ಅಪಹರಿಸಿದ ಆರೋಪದ ಮೇಲೆ ಪೊಕ್ಸೊ ಕಾಯ್ದೆ ಅಡಿಯಲ್ಲಿ ಅನಂತುನನ್ನು ಪೊಲೀಸರು ಬಂಧಿಸಿದ್ದರು. ಭಾಗ್ಯಳಿಗೆ 18 ವರ್ಷ ತುಂಬಿದ ಬಳಿಕ ಪ್ರಕರಣವನ್ನು ಇತ್ಯರ್ಥ ಮಾಡಿ ಇಬ್ಬರಿಗೆ ಮದುವೆ ಮಾಡಲಾಗಿತ್ತು.

ಆದರೆ, ಈಗ ಭಾಗ್ಯ ಮೃತಪಟ್ಟಿದ್ದಾಳೆ. ಆಕೆಯ ಸಾವಿನ ಸುತ್ತು ನಿಗೂಢ ಅಡಗಿದೆ ಎಂದು ಹೇಳಿ ಆಕೆಯ ತಾಯಿ ದೂರು ದಾಖಲಿಸಿದ್ದಾರೆ. ಅನಂತು ತಾಯಿ ಯಾವಾಗಲೂ ಭಾಗ್ಯಗೆ ಕಿರುಕುಳ ನೀಡುತ್ತಿದ್ದಳು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net