ರಶ್ಮಿಕಾ ನನ್ನ ಡಾರ್ಲಿಂಗ್; ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದ ದೇವರಕೊಂಡ

Rashmika
Published on

ಅವರಿಬ್ಬರು ಸ್ನೇಹಿತರಾ? ಪ್ರೇಮಿಗಳಾ? ಎಂಬ ಪ್ರಶ್ನೆ ಇಬ್ಬರೂ ಒಟ್ಟಿಗೆ ‘ಗೀತ ಗೋವಿಂದಂ’ ಚಿತ್ರದಲ್ಲಿ ನಟಿಸಿದಾಗಿನಿಂದ ಇದ್ದೇ ಇದೆ. ಅದಕ್ಕೆ ಸರಿಯಾಗಿ ವಿಜಯ್ ದೇವರಕೊಂಡ ಆಗಲೀ, ರಶ್ಮಿಕಾ ಮಂದಣ್ಣ ಆಗಲೀ ಈ ಕುರಿತು ಎಲ್ಲೂ ಮಾತನಾಡುವುದಕ್ಕೆ ಹೋಗಿಲ್ಲ. ಮಾಧ್ಯಮದವರು ತುಂಬ ಕೆದಕಿದಾಗ, ‘ನಾವಿಬ್ಬರೂ ಒಳ್ಳೆಯ ಸ್ನೇಹಿತರು’ ಅಂತಲೇ ಹೇಳುತ್ತಲೆ ಬಂದಿದ್ದಾರೆ. ಆದರೆ, ಇಬ್ಬರೂ ಅದೇನೇ ಹೇಳಿದರೂ, ಜಗತ್ತು ಅವರಿಬ್ಬರನ್ನೂ ಅನುಮಾನದ ದೃಷ್ಟಿಯಿಂದಲೇ ನೋಡುತ್ತಿದೆ. ಈಗ ವಿಜಯ್ ದೇವರಕೊಂಡ ಈ ಕುರಿತು ಬಹಳ ದಿನಗಳ ನಂತರ ಮಾತನಾಡಿದ್ದಾರೆ. ‘ಕಾಫಿ ವಿಥ್ ಕರಣ್’ನಲ್ಲಿ ಮಾತನಾಡುವ ಸಂದರ್ಭದಲ್ಲಿ ತಮ್ಮ ಮತ್ತು ರಶ್ಮಿಕಾ ಸಂಬಂಧದ ಕುರಿತು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ನಾವಿಬ್ಬರೂ ನಮ್ಮ ಚಿತ್ರ ಜೀವನದ ಆರಂಭದಲ್ಲಿ ಒಟ್ಟಿಗೆ ಎರಡು ಚಿತ್ರಗಳನ್ನು ಮಾಡಿದ್ದೇವೆ. ರಶ್ಮಿಕಾ ಬಗ್ಗೆ ಹೇಳುವುದಾದರೆ, ಆಕೆಯೊಬ್ಬ ಡಾರ್ಲಿಂಗ್ ಮತ್ತು ಆಕೆಯನ್ನು ಕಂಡರೆ ನನಗೆ ಬಹಳ ಇಷ್ಟ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ನಾವಿಬ್ಬರು ಸಾಕಷ್ಟು ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದೇವೆ. ನಮ್ಮಿಬ್ಬರ ನಡುವೆ ಒಂದು ಬಂಧ ಬೆಳೆದಿದೆ’ ಎಂದು ಹೇಳಿಕೊಂಡಿದ್ದಾರೆ.

ವಿಜಯ್ ಏಕೆ ತಮ್ಮ ಅಫೇರ್​ಗಳ ಕುರಿತಾಗಿ ಬಹಿರಂಗವಾಗಿ ಮಾತನಾಡುವುದಿಲ್ಲ ಎಂಬ ಪ್ರಶ್ನೆಗೆ, ‘ಒಬ್ಬ ನಟನಾಗಿ ನನ್ನನ್ನು ಬಹಳಷ್ಟು ಜನ ಆರಾಧಿಸುತ್ತಾರೆ.

ನಮ್ಮನ್ನು ಪ್ರೀತಿಸುತ್ತಾರೆ. ನನಗೆ ಅವರ ಹೃದಯ ಒಡೆಯಲು ಅಥವಾ ಅವರಿಗೆ ಬೇಸರ ಮಾಡುವುದಕ್ಕೆ ಇಷ್ಟವಿಲ್ಲ. ಎಲ್ಲವೂ ಕೂಡಿಬಂದಾಗ, ಪಕ್ಕಾ ಆದಾಗ ಖಂಡಿತಾ ನಾನೇ ಬಹಿರಂಗವಾಗಿ ಹೇಳುತ್ತೇನೆ. ಅದಕ್ಕೂ ಮುನ್ನ ಯಾರನ್ನೂ ನೋಯಿಸುವುದಕ್ಕೆ ನನಗೆ ಇಷ್ಟ ಇಲ್ಲ’ ಎಂದು ವಿಜಯ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net