ಸ್ನಾನಕ್ಕೆಂದು ತೆರಳಿದಾಗಲೇ ಕುಸಿದ ಮನೆ; ಆ ಸಮಯದಲ್ಲಿ ಏಕಾಂಗಿಯಾಗಿದ್ದ ಮಹಿಳೆ ಸಾವು..

House
Published on

ಬ್ಯಾಡಗಿ: ಅಮಾವಾಸ್ಯೆ ಕಳೆದು ಇಂದು ಶ್ರಾವಣ ಶುರುವಾಗಿದೆ. ಶ್ರಾವಣ ಮಾಸದ ಮೊದಲ ದಿನದ ಪೂಜೆಗೆಂದು ಮಹಿಳೆಯೊಬ್ಬರು ಸ್ನಾನಕ್ಕೆ ತೆರಳಿದ್ದಾಗಲೇ ಮನೆ ಕುಸಿದಿದ್ದು, ಆಕೆ ಸಾವಿಗೀಡಾಗಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿನ ಉಳಿದವರು ಆ ಸಮಯದಲ್ಲಿ ಹೊರಗೆ ಹೋಗಿದ್ದರಿಂದ ಹೆಚ್ಚಿನ ಸಾವು-ನೋವು ತಪ್ಪಿಹೋಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಬ್ಯಾಡಗಿ ತಾಲೂಕು ತಡಸ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಪದ್ಮವ್ವ ಶಿವನಗೌಡ ಪಾಟೀಲ (65) ಎಂಬವರು ಸಾವಿಗೀಡಾಗಿದ್ದಾರೆ. ಈ ಸಂದರ್ಭದಲ್ಲಿ ಈಕೆಯ ಮಕ್ಕಳು, ಸೊಸೆಯಂದಿರುವ ಹೊಲಕ್ಕೆ ಹೋಗಿದ್ದರು, ಮೊಮ್ಮಕ್ಕಳು ಶಾಲೆಗೆ ತೆರಳಿದ್ದರು.

ಕುಸಿದ ಮನೆಯಡಿ ಮಹಿಳೆ ಸಿಕ್ಕಿ ಮೊಳೆಗಳು ಚುಚ್ಚಿಕೊಂಡಿದ್ದವು. ಅವರನ್ನು ಕೂಡಲೇ ಬ್ಯಾಡಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭೇಟಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net