ನಿದ್ರೆಯಿಲ್ಲದ ಅನೇಕ ರಾತ್ರಿಗಳನ್ನು ಕಳೆದಿದ್ದೇನೆ: ಅತ್ಯಂತ ನೋವಿನ ಸಂಗತಿ ಬಿಚ್ಚಿಟ್ಟ ಕೆಜಿಎಫ್​ ನಟಿ​

Raveena tandon
Published on

ಮುಂಬೈ: ಬಾಲಿವುಡ್​ ನಟಿ ರವೀನಾ ಟಂಡನ್ ಅವರು​ ಸದ್ಯ ತಮ್ಮ ಮುಂದಿನ ಚಿತ್ರ ಕೆಜಿಎಫ್​ ಚಾಪ್ಟರ್​ 2ಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ಅವರು ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರನ್ನು ಮಾಡಲು ಪ್ರಯತ್ನಿಸುವಾಗ ಎದುರಿಸಿದ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ.

ತಮ್ಮ ಸ್ವಂತ ಸಹೋದರನೊಂದಿಗೆ ಸಂಬಂಧವನ್ನು ತಳುಕು ಹಾಕಿ ಬರೆಯಲಾಗಿದ್ದ ಗಾಸಿಪ್​ ಒಂದನ್ನು ಸಂದರ್ಶನದಲ್ಲಿ ನೆನಪಿಸಿಕೊಂಡರು. ರವೀನಾ ಟಂಡನ್ ಅವರು ಪ್ಲಾಟೋನಿಕ್ ಸಂಬಂಧಗಳನ್ನು ಅನೇಕ ಪುರುಷರೊಂದಿಗೆ ಹಂಚಿಕೊಂಡಿದ್ದಾರೆ ಎಂತಲೂ ಬರೆಯಲಾಗಿತ್ತಂತೆ. ಈ ಎಲ್ಲ ಘಟನೆಗಳಿಂದ ಬಹಳಷ್ಟು ನೋವು ಅನುಭವಿಸಿದ್ದೇನೆಂದು ಟಂಡನ್​ ಹೇಳಿದ್ದಾರೆ.

ನಿದ್ದೆಯಿಲ್ಲದ ಅನೇಕ ರಾತ್ರಿಗಳನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ ಮತ್ತು ನಾನು ಪ್ರತಿ ತಿಂಗಳು ಭಯಪಡುತ್ತಿದ್ದೆ. ಟ್ಯಾಬ್ಲಾಯ್ಡ್​ನಲ್ಲಿ ಪ್ರಕಟವಾದ ಗಾಸಿಪ್​ ಒಂದು ನನ್ನನ್ನು ಸಂಪೂರ್ಣವಾಗಿ ಕುಗ್ಗಿಸಿತು. ನನ್ನ ಖ್ಯಾತಿ, ನನ್ನ ವಿಶ್ವಾಸಾರ್ಹತೆ, ನನ್ನ ಹೆತ್ತವರನ್ನು ದಿಗ್ಭ್ರಾಂರನ್ನಾಗಿ ಮಾಡಿತು. ಏಕೆಂದರೆ, ಅದರಲ್ಲಿ ನನ್ನ ಸ್ವಂತ ಸಹೋದರನೊಂದಿಗೆ ನನಗೆ ಸಂಬಂಧ ಕಲ್ಪಿಸಿದ್ದರು ಎಂದು ತಿಳಿಸಿದ್ದಾರೆ.

ಅವರು ನನ್ನ ಹೆಸರನ್ನು ನನ್ನ ಸ್ವಂತ ಸಹೋದರನೊಂದಿಗೆ ಜೋಡಿಸಿ, ಹೀಗೆ ಬರೆದಿದ್ದರು... ರವೀನಾ ಟಂಡನ್ ಅವರನ್ನು ಡ್ರಾಪ್​ ಮಾಡಲು ಒಬ್ಬ ಸುಂದರ, ಹುಡುಗ ಬಂದಿದ್ದಾನೆ, ನಾವು ಟಂಡನ್ ಅವರ ಗೆಳೆಯನನ್ನು ಕಂಡುಹಿಡಿದಿದ್ದೇವೆ ಎಂದು ಬರೆದಿದ್ದರು. ಈ ಎಲ್ಲ ಘಟನೆಯಿಂದ ನಾನು ಸಾಕಷ್ಟು ನೋವು ಅನುಭವಿಸಿದ್ದೇ ಎಂದು ರವೀನಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net