More

    ದಿಢೀರ್ ಮೋಡ ಕಾರಣ ಕಾಪ್ಟರ್ ಪತನ; ರಾವತ್ ಹೆಲಿಕಾಪ್ಟರ್ ದುರಂತ ಕುರಿತ ವರದಿ ಸಲ್ಲಿಕೆ..

    ನವದೆಹಲಿ: ಸಿಡಿಎಸ್ ಜ. ಬಿಪಿನ್ ರಾವತ್ ಪ್ರಯಾಣಿಸಿದ್ದ ಸೇನಾ ಕಾಪ್ಟರ್ ಪತನಕ್ಕೆ ಸಂಬಂಧಿಸಿ ಟ್ರೖೆ ಸರ್ವೀಸಸ್ ತನಿಖೆ ಪೂರ್ಣಗೊಂಡಿದೆ. ಇದರ ವರದಿ ಪ್ರಕಾರ, ದಿಢೀರ್ ಮೋಡ ಕವಿದ ಕಾರಣ ಪೈಲಟ್​ಗೆ ಮುಂಭಾಗದಲ್ಲಿ ಏನೂ ಕಾಣದೆ ಕಾಪ್ಟರ್ ಪತನವಾಗಿದೆ. ಕಳೆದ ವರ್ಷ ಡಿಸೆಂಬರ್ 8 ರಂದು ಜನರಲ್ ರಾವತ್ ಮತ್ತು ಇತರೆ 13 ಜನ ಪ್ರಯಾಣಿಸಿದ್ದ ರಷ್ಯಾ ನಿರ್ವಿುತ ’Mಜಿ75’ ಹೆಲಿಕಾಪ್ಟರ್ ಸುಳೂರು ಸಮೀಪ ಅರಣ್ಯ ಪ್ರದೇಶದಲ್ಲಿ ಪತನವಾಗಿತ್ತು. ಈ ಪತನಕ್ಕೆ ಕೆಟ್ಟ ಹವಾಮಾನ ಕಾರಣ ಎಂಬುದನ್ನು ತನಿಖಾ ವರದಿ ದೃಢೀಕರಿಸಿದೆ.

    ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಪತನಕ್ಕೆ 8 ನಿಮಿಷ ಮುಂಚಿತವಾಗಿ ಕಾಪ್ಟರ್​ನ್ನು ಸದ್ಯದಲ್ಲೇ ಲ್ಯಾಂಡ್ ಮಾಡುವುದಾಗಿ ತಿಳಿಸಿದ್ದರು. ಆ ಸಂದರ್ಭದಲ್ಲಿ ಅವರು ಕೆಳಮಟ್ಟದಲ್ಲಿ ನೆಲಮಟ್ಟದಿಂದ 500-600 ಮೀಟರ್ ಎತ್ತರದಲ್ಲಿ ಹೆಲಿಕಾಪ್ಟರ್ ಚಲಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ದಿಢೀರ್ ಆಗಿ ಮಂಜು ಮುಸುಕಿದ ವಾತಾವರಣ ಎದುರಾದ ಕಾರಣ ಕಾಪ್ಟರ್ ಚಲಾಯಿಸಲು ಅವರಿಗೆ ಕಷ್ಟವಾಗಿತ್ತು. ಅವರು ರೈಲ್ವೆ ಲೈನ್ ಅನುಸರಿಸಿ ಆ ಪ್ರದೇಶದಲ್ಲಿ ಕಾಪ್ಟರ್ ಚಲಾಯಿಸಿದ್ದರು. ಕಾಪ್ಟರ್ ಪ್ರಯಾಣಿಸುವ ಮುನ್ನ ಕ್ಲಿಯರೆನ್ಸ್ ರಿಪೋರ್ಟ್ ಪಡೆಯಲಾಗಿತ್ತು. ಆದರೂ ಹವಾಮಾನ ವೈಪರೀತ್ಯದಿಂದ ಹೀಗಾಗಿದೆ ಎಂದು ವರದಿ ತಿಳಿಸಿದೆ.

    ರಕ್ಷಣಾ ಸಚಿವರಿಗೆ ವರದಿ: ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ವಿ.ಆರ್. ಚೌಧರಿ, ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಫ್ ಟ್ರೇನಿಂಗ್ ಕಮಾಂಡ್ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ತನಿಖಾ ವರದಿಯನ್ನು ಬುಧವಾರ ಒಪ್ಪಿಸಿದರು. ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಅವರು ಟ್ರೖೆ ಸರ್ವೀಸಸ್ ತನಿಖೆಯ ನೇತೃತ್ವವಹಿಸಿದ್ದರು. ಅವರು ಬೆಂಗಳೂರು ಕೇಂದ್ರ ಕಚೇರಿ ಹೊಂದಿರುವ ಐಎಎಫ್ ಟ್ರೇನಿಂಗ್ ಕಮಾಂಡ್​ನ ಮುಖ್ಯಸ್ಥರು. ದೇಶದ ಅತ್ಯುತ್ತಮ ವಿಮಾನ ಅಪಘಾತ ತನಿಖಾಧಿಕಾರಿಗಳಲ್ಲಿ ಒಬ್ಬರು.

    ರೂಪಾಂತರಿಯಿಂದ ಸಾವಿಲ್ಲ ಎಂಬುದರ ನಡುವೆಯೇ ಆತಂಕಕಾರಿ ಸುದ್ದಿ; ಇದು ದೇಶದಲ್ಲಿ ಒಮಿಕ್ರಾನ್ ಸಂಬಂಧಿತ ಮೊದಲ ಮರಣ!

    ರಾಜ್ಯದಲ್ಲಿ ಏರುತ್ತಲೇ ಇದೆ ಕರೊನಾ; ಇಂದು ಸೋಂಕಿನ ಪ್ರಮಾಣ ಮತ್ತೆ ಬಹುತೇಕ ದುಪ್ಪಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts