More

    20 ನಿಮಿಷ ಫ್ಲೈಓವರ್​ನಲ್ಲಿ ಸಿಲುಕಿದ ಮೋದಿ; ಇತಿಹಾಸದಲ್ಲಿ ಕರಾಳ ದಿನ..

    20 ನಿಮಿಷ ಫ್ಲೈಓವರ್​ನಲ್ಲಿ ಸಿಲುಕಿದ ಮೋದಿ; ಇತಿಹಾಸದಲ್ಲಿ ಕರಾಳ ದಿನ..ದೇಶದ ಪ್ರಧಾನಮಂತ್ರಿ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ ಅವರ ಸಂಪೂರ್ಣ ರಕ್ಷಣೆಯ ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರದ್ದು. ಪ್ರಧಾನಮಂತ್ರಿಯವರ ಅತ್ಯಂತ ಸನಿಹದ ಅಂದರೆ ಫಸ್ಟ್ ರಿಂಗ್ ರಕ್ಷಣೆಗೆ ಎಸ್​ಪಿಜಿ ನಿಯೋಜನೆ ಮಾಡಿರಲಾಗುತ್ತದೆ. ಎಸ್​ಪಿಜಿ ವ್ಯವಸ್ಥೆ ಕೇಂದ್ರ ಸರ್ಕಾರದ್ದು. ಉಳಿದ ಎಲ್ಲ ರೀತಿಯ ರಕ್ಷಣೆಯ ಹೊಣೆಗಾರಿಕೆ ರಾಜ್ಯ ಸರ್ಕಾರದ್ದು. ಪ್ರಧಾನಮಂತ್ರಿ ಯಾವುದೇ ರಾಜ್ಯಕ್ಕೆ ಭೇಟಿ ನೀಡುವುದಾದರೂ ಹಲವು ದಿನಗಳ ಮುಂಚಿತವಾಗಿಯೇ ಭದ್ರತಾ ಯೋಜನೆಗಳು ರೂಪುಗೊಳ್ಳುತ್ತವೆ. ಕೇಂದ್ರ ಸರ್ಕಾರದ ಅಧಿಕಾರಿಗಳು ರಾಜ್ಯಕ್ಕೆ ಬಂದು ರಾಜ್ಯದ ಮುಖ್ಯಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್ ವರಿಷ್ಠರ ಜತೆಗೆ ಸಮಾಲೋಚನೆ ನಡೆಸಿ ಭದ್ರತೆಗೆ ಸಂಬಂಧಿಸಿದ ಸೂಚನೆಗಳನ್ನು ಕೊಡುತ್ತಾರೆ. ಆಗ ಭದ್ರತಾ ರಿಹರ್ಸಲ್ ನಡೆಯುತ್ತದೆ. ಎಸ್​ಪಿಜಿ ಅಧಿಕಾರಿಗಳು ಮುಂಚಿತವಾಗಿ ಬಂದು ಭದ್ರತಾ ಪರಿಶೀಲನೆ ನಡೆಸುತ್ತಾರೆ. ಕೇಂದ್ರ ಗುಪ್ತಚರ ಇಲಾಖೆ ಮತ್ತು ಎಸ್​ಪಿಜಿ ರಾಜ್ಯ ಸರ್ಕಾರಕ್ಕೆ ಸಂಭಾವ್ಯ ಪ್ರತಿಭಟನೆ ಇತ್ಯಾದಿಗಳ ವಿವರವನ್ನು ಒದಗಿಸಿ ಮುಂಜಾಗ್ರತಾ ಕ್ರಮಕ್ಕಾಗಿ ಎಚ್ಚರಿಸುತ್ತವೆ.

    ಈ ಘಟನೆಗೆ ಪಂಜಾಬ್ ಸರ್ಕಾರ, ಮುಖ್ಯಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಡಿಜಿಪಿ ಹಾಗೂ ಪೊಲೀಸ್ ಇಲಾಖೆ ನೇರ ಹೊಣೆಗಾರರು.

    | ಡಾ.ಡಿ.ವಿ.ಗುರುಪ್ರಸಾದ್ ನಿವೃತ್ತ ಡಿಜಿಪಿ, ಗುಪ್ತಚರ ದಳದ ಮುಖ್ಯಸ್ಥರು.

    ಪಂಜಾಬ್​ನಲ್ಲಿ ಬುಧವಾರ ನಡೆದ ಘಟನೆ ನನ್ನ ಅಭಿಪ್ರಾಯದಲ್ಲಿ ಭದ್ರತಾ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಪಂಜಾಬ್​ನಲ್ಲಿ ಮೂರು ಪ್ರಮುಖ ಲೋಪಗಳು ಕಂಡುಬಂದಿವೆ.

    1. ಪ್ರಧಾನಮಂತ್ರಿ ಅವರ ವಾಹನವನ್ನು ಫ್ಲೈ ಓವರ್ ಮೇಲೆ ಬಿಡಬಾರದಾಗಿತ್ತು. ಫ್ಲೈಓವರ್ ಕೆಳಗೆ ಏನೇ ಆದರೂ ಯಾರಿಗೂ ಗೊತ್ತಾಗುವುದಿಲ್ಲ. ತಿರುಪತಿ ಸಮೀಪ ಗುಡ್ಡದ ಮೇಲೆ ಹೋಗುವಾಗ 2003ರ ಅಕ್ಟೋಬರ್​ನಲ್ಲಿ ಆಂಧ್ರ ಸಿಎಂ ಮೇಲೆ ಬಾಂಬ್ ದಾಳಿ ನಡೆದಿತ್ತು. ಅಂದು ಕೂಡ ಇಂಥದ್ದೇ ಭದ್ರತಾ ಲೋಪ ಉಂಟಾಗಿತ್ತು.
    2. ಪ್ರಧಾನಮಂತ್ರಿಯವರ ವಾಹನ ಸಂಚರಿಸುವಾಗ ಜೀರೋ ಟ್ರಾಫಿಕ್ ಇರಬೇಕಾದ್ದು ಕ್ರಮ. ಆದರೆ, ಪಂಜಾಬ್​ನಲ್ಲಿ ಜೀರೋ ಟ್ರಾಫಿಕ್ ಇರಲಿಲ್ಲ. ಡಬಲ್ ರೋಡ್​ನಲ್ಲಿ ಪಕ್ಕದ ರಸ್ತೆಯಲ್ಲಿ ವಾಹನ ಸಂಚಾರ ಇತ್ತು. ಸಾರ್ವಜನಿಕರು ಪ್ರಧಾನಿಯವರ ವಾಹನದ ಸಮೀಪಕ್ಕೂ ಹೋಗುವಂತೆ ಇಲ್ಲ. ಆದರೆ ಇಲ್ಲಿ ಕೆಲವು ಪ್ರತಿಭಟನಾಕಾರರು ಕಾನ್ವಾಯ್ ಬಳಿಯೇ ಬಂದಿದ್ದರು.
    3. ಸಾರ್ವಜನಿಕ ಪ್ರತಿಭಟನೆ ವಿಚಾರ ಗುಪ್ತಚರ ಮಾಹಿತಿ ಮೂಲಕ ರಾಜ್ಯ ಸರ್ಕಾರಕ್ಕೆ ಲಭ್ಯವಾಗಿರುತ್ತದೆ. ಆದರೂ ಅವರನ್ನು ಫ್ಲೈಓವರ್ ಬಳಿಗೆ ಬಿಟ್ಟದ್ದು ತಪು್ಪ. ಒಂದು ವೇಳೆ ಸಾರ್ವಜನಿಕರು ಬಂದರೆ ಅವರನ್ನು ಅಲ್ಲಿಂದ ಚದುರಿಸಬೇಕಾಗಿತ್ತು. ಇಲ್ಲವೇ ಪ್ರಧಾನಮಂತ್ರಿಯವರನ್ನು ಬೇರೆ ರಸ್ತೆಯಲ್ಲಿ ಕರೆದೊಯ್ಯಬೇಕಾಗಿತ್ತು.

    ‘ಕಮಾನ್ ಕಮಾನ್..’ ಎಂದು ಉಪೇಂದ್ರಗೆ ನೆನಪಿನ ಬಾಣ ಬಿಟ್ಟ ‘ಕಾಮಣ್ಣ’! ; ಅನಂತನ ಅವಾಂತರ ಮತ್ತು ಆ ಅವತಾರ…

    ರೂಪಾಂತರಿಯಿಂದ ಸಾವಿಲ್ಲ ಎಂಬುದರ ನಡುವೆಯೇ ಆತಂಕಕಾರಿ ಸುದ್ದಿ; ಇದು ದೇಶದಲ್ಲಿ ಒಮಿಕ್ರಾನ್ ಸಂಬಂಧಿತ ಮೊದಲ ಮರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts