ಗರ್ಲ್​ಫ್ರೆಂಡ್​ ಜತೆ ಶಾಪಿಂಗ್​ ಮಾಡುವಾಗ ಪತ್ನಿಯ ಕೈಗೆ ಸಿಕ್ಕಿಬಿದ್ದ ಪತಿ: ಮುಂದೇನಾಯ್ತು ವಿಡಿಯೋ ನೋಡಿ...

Husband and Wife
Published on

ನವದೆಹಲಿ: ಗರ್ಲ್​ಫ್ರೆಂಡ್​ ಜತೆ ಶಾಪಿಂಗ್​ ಮಾಡುವ ವೇಳೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಂಡನಿಗೆ ಪತ್ನಿ ಜನನಿಬಿಡ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​ ಮಾರುಕಟ್ಟೆಯಲ್ಲಿ ನಡೆದಿದೆ. ಕರ್ವಾ ಚೌತ್​ ಹಿನ್ನೆಲೆಯಲ್ಲಿ ಪ್ರೇಯಸಿ ಜತೆ ಶಾಪಿಂಗ್​ ಮಾಡುವಾಗ ಗಂಡ ಸಿಕ್ಕಿಬಿದ್ದಿದ್ದಾನೆ.

ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪತ್ನಿಯು ತನ್ನ ಫ್ರೆಂಡ್ಸ್ ಜೊತೆ ಸೇರಿಕೊಂಡು ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಂಡನ ಕಾಲರ್​ ಹಿಡಿದು ಜನ ಜಂಗುಳಿಯ ನಡುವೆಯೇ ಥಳಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ರಕ್ಷಣೆಗೆ ಬಂದ ಗರ್ಲ್​ಫ್ರೆಂಡ್​ಗೂ ಸಹ ಏಟುಗಳು ಬಿದ್ದಿವೆ. ನಿಮ್ಮ ಮನೆಯ ವಿಚಾರವನ್ನು ಬೀದಿ ರಂಪಾಟ ಮಾಡಬೇಡಿ. ಇದನೆಲ್ಲ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಮಾರುಕಟ್ಟೆಯಲ್ಲಿರುವ ಅಂಗಡಿಯವನು ಹೇಳಿರುವುದು ಸಹ ವಿಡಿಯೋದಲ್ಲಿದೆ.

ಗಂಡನ ಜೊತೆ ಜಗಳವಾಡಿ, ಮುನಿಸಿಕೊಂಡಿದ್ದ ಮಹಿಳೆ ಗಂಡನ ಮನೆ ತೊರೆದು, ತವರಿನಲ್ಲಿ ಉಳಿದುಕೊಂಡಿದ್ದಳು. ಕರ್ವಾ ಚೌತ್​ ಹಿನ್ನೆಲೆಯಲ್ಲಿ ಶಾಪಿಂಗ್​ಗೆಂದು ತನ್ನ ತಾಯಿಯ ಜೊತೆ ಮಾರುಕಟ್ಟೆಗೆ ಬಂದಿದ್ದಳು. ಈ ವೇಳೆ ತನ್ನ ಗಂಡ ಬೇರೊಬ್ಬ ಮಹಿಳೆಯ ಜೊತೆ ಇರುವುದನ್ನು ಆಕೆ ನೋಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಆಕೆ, ತನ್ನ ಜೊತೆ ಬಂದಿದ್ದ ಫ್ರೆಂಡ್ಸ್​ ಜೊತೆ ಸೇರಿ ಗಂಡ ಮತ್ತು ಆತನ ಗರ್ಲ್​ಫ್ರೆಂಡ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಪತಿಯ ವಿರುದ್ಧ ಪತ್ನಿ ದೂರು ಸಹ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಂದಹಾಗೆ ಕರ್ವಾ ಚೌತ್ ಹಿಂದುಗಳ ಹಬ್ಬವಾಗಿದ್ದು, ಇದನ್ನು ಹೆಚ್ಚಾಗಿ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ದಿನ, ವಿವಾಹಿತ ಮಹಿಳೆಯರು ಉಪವಾಸವನ್ನು ಆಚರಿಸುತ್ತಾರೆ ಮತ್ತು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಕರ್ವಾ ಚೌತ್ ಅನ್ನು ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net