ಪ್ರೇಯಸಿ ಜತೆಗಿರುವ ಫೋಟೋಗಳನ್ನು ಕಳುಹಿಸಿದ ಗಂಡ: ಮನನೊಂದು ಸಾವಿನ ಹಾದಿ ಹಿಡಿದ ಪತ್ನಿ

Lover
ಮೃತ ಮೋನಿಕಾ ಮತ್ತು ಪತಿ ಭಾರ್ಗವ್​
Published on

ಚಿಕ್ಕಬಳ್ಳಾಪುರ: ಗಂಡ ಪ್ರೇಯಸಿಯ ಜೊತೆ ಪ್ರವಾಸ ಹೊರಟ ಫೋಟೋಗಳನ್ನು ನೋಡಿ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿಯಲ್ಲಿ ನಡೆದಿದೆ.

ಮೋನಿಕಾ (22) ನೇಣಿಗೆ ಶರಣಾದ ಮಹಿಳೆ. ಡಿಗ್ರಿ ವ್ಯಾಸಂಗ ಮಾಡಿದ್ದ ಮೋನಿಕಾ, 8 ತಿಂಗಳ ಹಿಂದೆ ಚಿಕ್ಕಬಳ್ಳಾಪುರ ತಾಲೂಕಿನ ಪ್ರಶಾಂತ ನಗರದ ಭಾರ್ಗವ್​ನೊಂದಿಗೆ ಮದುವೆಯಾಗಿದ್ದಳು.

ಈ ನಡುವೆ ಭಾರ್ಗವ್​ ಮೋನಿಕಾಳನ್ನು ತವರು ಮನೆಗೆ ಕಳಿಸಿದ್ದ. ಈ ವೇಳೆ ಪ್ರೇಯಸಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ಭಾರ್ಗವ್​, ಆಕೆಯನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ, ಸುತ್ತಾಡಿದ್ದಾನೆ. ಈ ಸಂದರ್ಭದಲ್ಲಿ ತೆಗೆದು ಫೋಟೋಗಳನ್ನು ತನ್ನ ಪತ್ನಿಗೆ ಕಳುಹಿಸಿದ್ದ.

ಪತಿ ಕಳುಹಿಸಿದ ಫೋಟೋಗಳನ್ನು ನೋಡಿದ ಮೋನಿಕಾ ಮನನೊಂದು ಡೆತ್​ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net