More

    ಪತ್ನಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ಕೊನೆಗೂ ಮೌನ ಮುರಿದ ಗಾಯಕ ಯೋ ಯೋ ಹನಿ ಸಿಂಗ್

    ಮುಂಬೈ: ತನ್ನ ವಿರುದ್ಧ ಪತ್ನಿ ಶಾಲಿನಿ ತಲ್ವಾರ್​ ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಕೊನೆಗೂ ಮೌನ ಮುರಿದಿರುವ ಬಾಲಿವುಡ್‌ನ ಸುಪ್ರಸಿದ್ಧ ಗಾಯಕ ಮತ್ತು ನಟ ಯೋ ಯೋ ಹನಿ ಸಿಂಗ್, ನನ್ನ ವಿರುದ್ಧದ ಆರೋಪಗಳೆಲ್ಲವು ಸತ್ಯಕ್ಕೆ ದೂರ ಮತ್ತು ದುರುದ್ದೇಶಪೂರಿತವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

    ಹನಿ ಸಿಂಗ್​ ಮಾತ್ರವಲ್ಲದೆ, ಅವರ ಕುಟುಂಬದ ವಿರುದ್ಧವೂ ಶಾಲಿನಿ ತಲ್ವಾರ್​ ಗಂಭೀರ ಆರೋಗಳನ್ನು ಮಾಡಿ ದೂರು ನೀಡಿದ್ದಾರೆ. ಆರೋಪಗಳ ಸಂಬಂಧ ಇನ್​ಸ್ಟಾಗ್ರಾಂ ಮೂಲಕ ಸ್ಪಷ್ಟನೆ ನೀಡಿರುವ ಹನಿ ಸಿಂಗ್​, ಪತ್ನಿ ಶಾಲಿನಿ ತಲ್ವಾರ್​ ನನ್ನ ಮತ್ತು ಕುಟುಂಬದ ವಿರುದ್ಧ ಮಾಡಿರುವ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಕೇಳಿ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಇದರಿಂದ ನಾನು ವಿಚಲಿತಗೊಂಡಿದ್ದೇನೆ ಎಂದು ಹೇಳಿದ್ದಾರೆ.

    ನನ್ನ ಸಾಹಿತ್ಯ ಹಾಗೂ ಆರೋಗ್ಯದ ಕುರಿತು ಉಂಟಾದ ಊಹಾಪೋಹ ಮತ್ತು ಋಣಾತ್ಮಕ ಮಾಧ್ಯಮ ಪ್ರಚಾರದಿಂದ ಕಠಿಣ ಟೀಕೆಗಳಿಗೆ ಒಳಗಾಗಿದ್ದರೂ ನಾನೆಂದಿಗೂ ಸಾರ್ವಜನಿಕ ಹೇಳಿಕೆ ಅಥವಾ ಪತ್ರಿಕಾ ಟಿಪ್ಪಣಿಯನ್ನು ನೀಡಲಿಲ್ಲ. ಆದರೆ, ಈ ಬಾರಿ ನನ್ನ ಕುಟುಂಬ ಹಾಗೂ ನನ್ನ ವಿರುದ್ಧ ನನ್ನ ಪತ್ನಿಯೇ ಗಂಭೀರ ಆರೋಪಗಳನ್ನು ಮಾಡಿರುವಾಗ ಸುಮ್ಮನಿರುವುದು ಸರಿಯಲ್ಲ ಅನಿಸಿತು. ಆರೋಪಗಳು ಸಂಪೂರ್ಣ ಮಾನಹಾನಿ ಸ್ವಭಾವವನ್ನು ಹೊಂದಿದೆ ಎಂದು ತಿಳಿಸಿದರು.

    ದೇಶಾದ್ಯಂತ ಅನೇಕ ಕಲಾವಿದರು ಹಾಗೂ ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ಎಲ್ಲರಿಗೂ ನನ್ನ ಪತ್ನಿಯ ಜತೆಗಿನ ನನ್ನ ಸಂಬಂಧದ ಬಗ್ಗೆ ತಿಳಿದಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನನ್ನ ಜೀವನದ ಭಾಗವಾಗಿದ್ದ ಹಾಗೂ ನನ್ನ ಶೂಟಿಂಗ್​, ಭೇಟಿ ಹಾಗೂ ಕಾರ್ಯಕ್ರಮಗಳಲ್ಲೂ ಭಾಗವಾಗಿದ್ದರು ಎಂದು ಎಲ್ಲರಿಗೂ ತಿಳಿದಿದೆ. ನನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಾನು ತಿರಸ್ಕರಿಸುತ್ತೇನೆಂದು ಹೇಳಿದ್ದಾರೆ.

    ಹನಿ ಸಿಂಗ್​ ಪತ್ನಿ ಮಾಡಿದ್ದ ಆರೋಪವೇನು?
    ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯ್ದೆ’ ಅಡಿ ದೆಹಲಿಯ ಟಿಸ್ ಹಜಾರಿ ಕೋರ್ಟ್‌ನಲ್ಲಿ ಯೋ ಯೋ ಹನಿ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿರುವ ಶಾಲಿನಿ ತಲ್ವಾರ್​, ಸುಮಾರು 120 ಪುಟಗಳಲ್ಲಿ ಗಂಡನ ದುಷ್ಕೃತ್ಯಗಳನ್ನು ವಿವರವಾಗಿ ಬರೆದಿದ್ದಾರೆ. ಗಂಡನ ನನಗೆ ನಿರಂತರ ಕಿರುಕುಳ ನೀಡುತ್ತಿದ್ದರು ಮತ್ತು ಕೊಲೆಯ ಬೆದರಿಕೆಯು ಇತ್ತು. ಗಂಡನ ಮನೆಯಲ್ಲಿ ಎಲ್ಲರೂ ರಾಕ್ಷಸರ ರೀತಿ ವರ್ತಿಸುತ್ತಿದ್ದರು ಎಂದು ಶಾಲಿನಿ ಆರೋಪಿಸಿದ್ದಾರೆ. ಗಂಡನಿಗೆ ಡಜನ್​ಗೂ ಅಧಿಕ ಮಹಿಳೆಯರ ಜತೆ ವಿವಾಹೇತರ ಸಂಬಂಧ ಇತ್ತು. ಈ ಬಗ್ಗೆ ಪ್ರಶ್ನಿಸಿದರೆ ಮೃಗೀಯವಾಗಿ ಹಿಂಸಿಸುತ್ತಿದ್ದರು ಎಂದು ಶಾಲಿನಿ ಗಂಭೀರ ಆರೋಪ ಮಾಡಿದ್ದಾರೆ.

    ಹನೀ ಸಿಂಗ್​ ತಂದೆ ಅಥವಾ ಮಾವನ ವಿರುದ್ಧವೂ ಶಾಲಿನಿ ಸಂಚಲನ ಸೃಷ್ಟಿಸುವಂತಹ ಗಂಭೀರ ಆರೋಪ ಮಾಡಿದ್ದಾರೆ. ಮಾವನು ಕೂಡ ಲೈಂಗಿಕ ಕಿರುಕುಳ ನೀಡಿದ್ದಾರೆ. ಒಂದು ದಿನ ನಾನು ಕೋಣೆಯಲ್ಲಿ ಬಟ್ಟೆ ಬದಲಾಯಿಸುವಾಗ ಹನೀ ಸಿಂಗ್​ ತಂದೆ ಪಾನಮತ್ತ ಸ್ಥಿತಿಯಲ್ಲಿ ನನ್ನ ಕೋಣೆಯೊಳಗೆ ನುಗ್ಗಿದರು. ನನ್ನ ಎದೆಯನ್ನು ಹಿಡಿದುಕೊಂಡು ಕಿರುಕುಳ ನೀಡಿದರು ಎಂದು ಆರೋಪ ಮಾಡಿದ್ದಾರೆ.

    ನನಗೆ ನ್ಯಾಯ ಕೊಡಿಸಿ ಎಂದಿರುವ ಶಾಲಿನಿ, 20 ಕೋಟಿ ರೂಪಾಯಿ ಪರಿಹಾರ, ತಿಂಗಳಿಗೆ 5 ಲಕ್ಷ ರೂಪಾಯಿ ಹಣ, ಮುಂಬೈನ ಪ್ರತಿಷ್ಠಿತ ಜಾಗದಲ್ಲಿ ಫುಲ್‌ ಫರ್ನಿಷ್‌ ಆಗಿರುವ ಬಂಗಲೆ ನೀಡಲು ಆದೇಶಿಸಬೇಕು ಹಾಗೂ ತಾನು ಮದುವೆಯ ವೇಳೆ ನೀಡಿರುವ ವರದಕ್ಷಿಣೆಯನ್ನು ಸಂಪೂರ್ಣವಾಗಿ ಹಿಂದಿರುಗಿಸಲು ಗಂಡನಿಗೆ ಆದೇಶಿಸಬೇಕು ಎಂದು ಶಾಲಿನಿ ಕೋರಿದ್ದಾರೆ. ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕೋರ್ಟ್‌ ಯೋ ಯೋ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದು ಇದೇ 28ರ ಒಳಗೆ ಉತ್ತರಿಸುವಂತೆ ಹೇಳಿದೆ.

    ಯೋ ಯೋ ಹನಿ ಸಿಂಗ್‌ ಅವರ ನಿಜವಾದ ಹೆಸರು ಹಿರ್ದೇಶ್ ಸಿಂಗ್. ದೀಪಿಕಾ ಪಡುಕೊಣೆ ಮತ್ತು ಸೈಫ್ ಅಲಿ ಖಾನ್ ಚಿತ್ರ ಕಾಕ್ ಟೈಲ್‌ನ ಆಂಗ್ರೇಜಿ ಬೀಟ್ ಹಾಡು ಸೂಪರ್ ಹಿಟ್ ಆದ ಮೇಲೆ ಯೋ ಯೋ ಭಾರೀ ಖ್ಯಾತಿ ಗಳಿಸಿದರು. (ಏಜೆನ್ಸೀಸ್​)

    BREAKING NEWS| ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಯಾರಿಗೆ-ಯಾವ ಖಾತೆ? ಅಧಿಕೃತ ಪಟ್ಟಿ ಬಿಡುಗಡೆ

    ವಿಸ್ಮಯ ದುರಂತ ಸಾವು ಪ್ರಕರಣ: ಸರ್ಕಾರಿ ಕೆಲಸ ಕಳೆದುಕೊಂಡ ಹಣದಾಹಿ ಗಂಡ..!

    ದಂತಕಥೆಯಲ್ಲಿ ರಿಷಬ್ ಶೆಟ್ಟಿ; ಹೊಂಬಾಳೆಯ ಹೊಸ ಚಿತ್ರ ಕಾಂತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts