ಪರಿವರ್ತನೆಗೆ ಈ ವಿಡಿಯೋ ನೋಡಿ ಎಂದು ಒಳ ಉಡುಪುಗಳನ್ನು ಪ್ರದರ್ಶಿಸಿದ ನಟಿ ಯಶಿಕಾ! ವಿಡಿಯೋ ವೈರಲ್​​

Yashika
Published on

ಚೆನ್ನೈ: ಕಾಲಿವುಡ್​ನ ವಯಸ್ಕರ ಕಾಮಿಡಿ ಚಿತ್ರ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಅವರು ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಂಡಿದ್ದು, ಈಗಷ್ಟೇ ತಾನೇ ಸಹಜ ಜೀವನಕ್ಕೆ ಮರಳಿದ್ದಾರೆ.

ಅಪಘಾತದ ಬಳಿಕ ಯಶಿಕಾ ಅವರು ಅನೇಕ ಸರ್ಜರಿಗೆ ಒಳಗಾಗಬೇಕಾಯಿತು. ಸದ್ಯ ಗುಣಮುಖರಾಗಿರುವ ಅವರು ಮತ್ತೆ ಸಾಮಾಜಿಕ ಜಾಲತಾಣದತ್ತ ಮುಖ ಮಾಡಿದ್ದಾರೆ. ಜಾಲತಾಣದಲ್ಲಿ ಸಕ್ರೀಯರಾಗಿದ್ದು, ಇದೀಗ ಅವರು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿರುವುದರ ಜತೆಗೆ ಸಿಕ್ಕಾಪಟ್ಟೆ ಟ್ರೋಲ್​ ಸಹ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಯಶಿಕಾ ತಮ್ಮ ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಅವರು ಒಳಉಡುಪು ಸೇರಿದಂತೆ ತಮ್ಮ ಒಂದೊಂದೆ ಬಟ್ಟೆಗಳನ್ನು ಕ್ಯಾಮೆರಾ ಮುಂದೆ ಪ್ರದರ್ಶನ ಮಾಡುತ್ತಾರೆ. ವಿಡಿಯೋ ಕೊನೆಯಲ್ಲಿ ಮಾಯಾವಾಗುವ ಯಶಿಕಾ, ತಕ್ಷಣ ಬಟ್ಟೆಗಳು ತುಂಬಿದ್ದ ಬುಟ್ಟಿಯನ್ನು ಹಿಡಿದು ಒಂದು ನಗು ಬೀರಿ, ತಕ್ಷಣ ಯಾರಿಗೋ ಟಾಂಗ್​ ನೀಡುತ್ತಿರುವಂತೆ ತಮ್ಮ ಮುಖದ ಭಾವನೆಯನ್ನು ವ್ಯಕ್ತಪಡಿಸಿ ಅಲ್ಲಿಂದ ಹೊರಡುತ್ತಾರೆ.

ವಿಡಿಯೋ ಬಗ್ಗೆ "ಪರಿವರ್ತನೆಗಾಗಿ ಕೊನೆಯವರೆಗೂ ಕಾಯಿರಿ" ಎಂಬ ಶಿರ್ಷಿಕೆಯನ್ನು ನೀಡಿದ್ದಾರೆ. ಈ ವಿಡಿಯೋಗೆ ಇನ್​ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಬಂದಿದ್ದರೆ, ಟ್ವಿಟರ್​ನಲ್ಲಿ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಲ್ಲದೆ, ಯಶಿಕಾ ವರ್ತನೆಯನ್ನು ಸಾಕಷ್ಟು ಮಂದಿ ನೆಟ್ಟಿಗರು ಟೀಕಿಸಿದ್ದಾರೆ. ನಿನಗೇನು ಹುಚ್ಚಾ? ಎಂದು ನೆಟ್ಟಿಗರೊಬ್ಬರು ಹೇಳಿದ್ದರೆ, ಇದೆಲ್ಲ ಕೆಲಸಕ್ಕೆ ಬಾರದ ವಿಷಯಗಳು ಎಂದು ಮತ್ತೊಬ್ಬ ನೆಟ್ಟಿಗ ಟೀಕಿಸಿದ್ದಾರೆ. ನಮ್ಮ ಭಾರತ ಸಂಸ್ಕೃತಿ ಆಧಾರಿತ ದೇಶವಾಗಿದೆ. ನಿಮ್ಮ ಕುಟುಂಬ ಮತ್ತು ನೀನು ಸಂಸ್ಕೃತಿ ಇಲ್ಲದವರು ಎಂದು ಇನ್ನೊಬ್ಬ ನೆಟ್ಟಿಗ ಯಶಿಕಾರನ್ನು ಜರಿದಿದ್ದಾರೆ. ಏನಾಗಿದೆ ನಿನಗೆ ಅಪಘಾತದ ಬಳಿಕ ಏನಾದರೂ ಆಯಿತಾ ಎಂದು ಪ್ರಶ್ನಿಸುವ ಮೂಲಕ ನೆಟ್ಟಿಗರು ಯಶಿಕಾರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂದಹಾಗೆ ಕಳೆದ ವರ್ಷ ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ದೀರ್ಘ ಕಾಲ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲು ಸಹ ಅವರಿಗೆ ಆಗುತ್ತಿರಲಿಲ್ಲ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net