More

    ಖಂಡಿತ ಮದುವೆ ಆಗ್ತಾನೆ! ಪ್ರಭಾಸ್ ಬಗ್ಗೆ​ ಯಾರಿಗೂ ತಿಳಿಯದ ರಹಸ್ಯವೊಂದನ್ನು ಬಿಚ್ಚಿಟ್ಟ ಅವರ ದೊಡ್ಡಮ್ಮ

    ಹೈದರಾಬಾದ್​: ತೆಲುಗು ಚಿತ್ರರಂಗದ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್ ಅಂದರೆ ಅದು​ ಪ್ರಭಾಸ್​. ವಯಸ್ಸು 41 ವರ್ಷವಾದರೂ ಮದುವೆ ಆಗದೇ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಸಾಲು ಸಾಲು ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್​ ನಟಿಸುತ್ತಿದ್ದು, ಸಿನಿಮಾಗಳಲ್ಲೇ ಮುಳುಗಿ ಹೋಗಿರುವ ಪ್ರಭಾಸ್​ ಮದುವೆಯನ್ನೇ ಮರೆತುಬಿಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅಭಿಮಾನಿಗಳು ಪ್ರಭಾಸ್​ ಮದುವೆ ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಇದೀಗ ಪ್ರಭಾಸ್​ ಮದುವೆ ಕುರಿತು ಅವರ ದೊಡ್ಡಮ್ಮ ಆಸಕ್ತಿಕರ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

    ಸದ್ಯ ಪ್ರಭಾಸ್​ ತಮ್ಮ ನಟನೆಯ ರಾಧೆಶ್ಯಾಮ್​ ಚಿತ್ರದ ಪ್ರಚಾರದ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಸೌತ್​ ಬ್ಯೂಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಇದೇ ಮಾರ್ಚ್​ 11ರಂದು ಚಿತ್ರ ತೆರೆ ಕಾಣಲಿದೆ. ಈ ಹಿಂದೆಯೇ ಪ್ರಚಾರ ಆರಂಭಿಸಿದ್ದ ಚಿತ್ರತಂಡ ಟ್ರೈಲರ್​ ಕೂಡ ಬಿಡುಗಡೆ ಮಾಡಿತ್ತು. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಕಳೆದ ಜನವರಿಯಲ್ಲಿ ಚಿತ್ರ ತೆರೆಗೆ ಅಪ್ಪಳಿಸಬೇಕಾಗಿತ್ತು. ಆದರೆ, ಕರೊನಾ ಮೂರನೇ ಅಲೆಯಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು.

    ಇನ್ನು ಎರಡೇ ದಿನದಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ. ಚಿತ್ರದ ಪ್ರಚಾರದಲ್ಲಿ ಪ್ರಭಾಸ್​ ದೊಡ್ಡಮ್ಮ ಶ್ಯಾಮಲಾ ದೇವಿ ಕೂಡ ಭಾಗವಹಿಸಿದ್ದಾರೆ. ಶ್ಯಾಮಲಾ ದೇವಿ ಅವರು ನಟ ಹಾಗೂ ರಾಜಕಾರಣಿ ಕೃಷ್ಣಮ ರಾಜು ಅವರ ಪತ್ನಿ. ಪ್ರಭಾಸ್​ ಬಗ್ಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಅವರು ಹಲವು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

    ನಟ ಪ್ರಭಾಸ್​ಗೆ ಪುಲ್ಸಾ ಚಾಪ್ಸ್​ ಕರಿ ಅಂದರೆ ತುಂಬಾ ಇಷ್ಟವಂತೆ. ಹಾಗೇ ಅವರ ದೊಡ್ಡಪ್ಪ ಕೃಷ್ಣಮ ರಾಜು ಅಂದರೆ ತುಂಬಾ ಇಷ್ಟವಂತೆ. ಅವರನ್ನು ಯಾವಾಗಲೂ ಭೇಟಿ ಮಾಡುವ ಪ್ರಭಾಸ್​, ಸಾಕಷ್ಟು ಹೊತ್ತು ಮಾತನಾಡುತ್ತಾರಂತೆ. ಕೃಷ್ಣಮ ರಾಜು ಅವರನ್ನು ಬಿಗ್​ ಬಾಜಿ ಎಂದು ಕರೆಯುವ ಪ್ರಭಾಸ್​ ನನ್ನನ್ನು ಕಣ್ಣಮ್ಮ ಎಂದು ಕರೆಯುತ್ತಾನೆ. ನಾನು ಅವನನ್ನು ಬಾಬು ಪ್ರಭಾಸ್​ ಎಂದು ಕರೆಯುತ್ತೇನೆಂದು ಎಂದು ಶ್ಯಾಮಲಾ ದೇವಿ ಹೇಳಿದರು.

    ಪ್ರಭಾಸ್​ಗೆ ಪ್ರತಿನಿತ್ಯ ತುಂಬಾ ಕರೆಗಳು ಬರುತ್ತವೆ. ಅದರಲ್ಲೂ ಹೆಚ್ಚು ಕರೆಗಳು ಹುಡುಗಿಯರಿಂದ ಬರುತ್ತದೆ. ಪ್ರಭಾಸ್​ ಅವರನ್ನು ತುಂಬಾ ಹೊಗಳುತ್ತಾರೆ. ಅಲ್ಲದೆ, ಹುಡುಗಿಯರ ಜತೆ ಮಾತನಾಡಲು ಪ್ರಭಾಸ್​ ತುಂಬಾ ನಾಚಿಕೊಳ್ಳುತ್ತಾನೆ. ಹೀಗಾಗಿ ಕೆಲವು ಸಂದರ್ಭಗಳಲ್ಲಿ ಕರೆಗಳನ್ನು ನಾನು ಸ್ವೀಕರಿಸಿ ಮಾತನಾಡುತ್ತೇನೆ ಎಂದರು.

    ಪ್ರಭಾಸ್ ಯಾವುದೇ ಹುಡುಗಿಯನ್ನು ಮದುವೆಯಾಗಲಿ ಅಥವಾ ಪ್ರೇಮ ವಿವಾಹವಾಗಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಮದುವೆ ಎಂಬುದು ವಿಧಿಯ ಕೈಯಲ್ಲಿ ಇರುತ್ತದೆ. ಆದರೆ, ಪ್ರಭಾಸ್​ ಖಂಡಿತ ಮದುವೆ ಆಗುತ್ತಾನೆ. ಹೀಗಾಗಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಅನೇಕ ಹುಡುಗಿಯರು ಮುಂದೆ ಬರುತ್ತಿದ್ದಾರೆ. ಪ್ರಭಾಸ್ ಜೊತೆ ಫೋಟೋ ತೆಗೆಸಿಕೊಡುವಂತೆ ಅನೇಕರು ವಿನಂತಿಸುತ್ತಾರೆ. ಪ್ರಭಾಸ್ ಎಷ್ಟೇ ಯಶಸ್ವಿಯಾದರೂ ತನ್ನನ್ನು ತಾನು ಹೆಮ್ಮೆ ಪಡುವುದಿಲ್ಲ. ಆತನಿಗೆ ಅಹಂ ಇಲ್ಲ ಎಂದು ಹೇಳಿದರು. (ಏಜೆನ್ಸೀಸ್​)

    ಬೆತ್ತಲೆ ದೇಹ ತೋರಿಸು ಎಂದ ನೆಟ್ಟಿಗನಿಗೆ ನಟಿ ಯಶಿಕಾ ಆನಂದ್​ ಕೊಟ್ಟ ಖಡಕ್​ ಉತ್ತರ ಹೀಗಿತ್ತು…

    ಯುದ್ಧ ಪೀಡಿತ ಯೂಕ್ರೇನ್​ನಿಂದ ಸುರಕ್ಷಿತ ಸ್ಥಳಾಂತರ: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪಾಕ್​ ಯುವತಿ

    ಕಸ ಸಂಗ್ರಹಣಾ ಆಟೋಗೆ ಚಂದನಾ ಡ್ರೈವರ್​! ಗಂಡ-ಅತ್ತೆಯ ಸಹಕಾರ, ಆತ್ಮಬಲವೇ ಈಕೆಗೆ ಶ್ರೀರಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts