More

    ಕಸ ಸಂಗ್ರಹಣಾ ಆಟೋಗೆ ಚಂದನಾ ಡ್ರೈವರ್​! ಗಂಡ-ಅತ್ತೆಯ ಸಹಕಾರ, ಆತ್ಮಬಲವೇ ಈಕೆಗೆ ಶ್ರೀರಕ್ಷೆ

    | ಶಿವರಾಜ್ ಎಂ. ಬೆಂಗಳೂರು ಗ್ರಾಮಾಂತರ
    ಹೆಣ್ಮಕ್ಕಳು ಆಟೋ ಓಡಿಸೋದಾ, ಅದೂ ಮನೆಮನೆಯಿಂದ ಕಸ ತೆಗೆದುಕೊಳ್ಳೋ ಆಟೋಗೆ ಡ್ರೈವರ್ರಾ! ಇಂಥ ಮೂದಲಿಕೆ, ಮುಜುರಗಳಿಗೆಲ್ಲ ಸೆಡ್ಡು ಹೊಡೆದು ಕಸ ಸಂಗ್ರಹಣೆ ಆಟೋವೊಂದಕ್ಕೆ ಚಾಲಕಿಯಾಗಿ ಇದೇ ಮೂದಲಿಗೆ ಜನರಿಂದಲೇ ಶಹಬ್ಬಾಸ್‌ಗಿರಿ ಪಡೆಯುತ್ತಿದ್ದಾರೆ ತೂಬಗೆರೆ ಚಂದನಾ! ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಸ ಸಂಗ್ರಹಣೆ ಆಟೋಗೆ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರವಾಗಿದ್ದಾರೆ.

    ತೂಬಗೆರೆಯ ಸ್ತ್ರೀಶಕ್ತಿ ಸಂಘಟನೆ ಸದಸ್ಯೆಯಾಗಿದ್ದ ಚಂದನಾ, ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಪಾಲಕರ ಒತ್ತಾಸೆಯಂತೆ ಮದುವೆಯಾದ ಚಂದನಾ, ಮುಂದಿನ ಓದಿಗೆ ತಿಲಾಂಜಲಿ ಇಟ್ಟರೂ ಉದ್ಯೋಗ ಮಾಡಬೇಕೆಂಬ ಹಂಬಲ ಬಿಡಲಿಲ್ಲ. ಇದಕ್ಕೆ ಒತ್ತಾಸೆಯಾಗಿದ್ದು ತೂಬಗೆರೆ ಸ್ತ್ರೀ ಸಂಘಟನೆ. ತೂಬಗೆರೆ ಪಂಚಾಯಿತಿ ವ್ಯಾಪ್ತಿಯ ಒಣ ಕಸ ಸಂಗ್ರಹಣೆ ಆಟೋಗೆ ಚಾಲಕ ಹುದ್ದೆ ಖಾಲಿ ಇರುವ ವಿಷಯ ತಿಳಿದ ಚಂದನಾ, ಅರ್ಜಿ ಹಾಕಿಯೇ ಬಿಟ್ಟರು. 20 ದಿನ ಆಟೋ ಚಾಲನೆ ತರಬೇತಿ ಪಡೆದು ಪರವಾನಗಿಯನ್ನೂ ಪಡೆದರು. ಪಂಚಾಯಿತಿ ಇವರಿಗೆ ಆಟೋ ಚಾಲಕಿ ವೃತ್ತಿ ಮಾಡಲೂ ನೆರವು ನೀಡಿತು. ಅದರಂತೆ ಚಂದನಾ ಚಾಲಕಿಯಾಗಿ ಆಟೋ ಏರಿ ಹೊರಟೇ ಬಿಟ್ಟರು.

    ಆರಂಭದಲ್ಲಿ ಮುಜುಗರ: ಆರಂಭದಲ್ಲಿ ಈ ಬಗ್ಗೆ ಜನರಿಂದ ಸಾಕಷ್ಟು ಮುಜುಗರ ಎದುರಿಸಬೇಕಾದರೂ ಪತಿ, ಅತ್ತೆಯ ಸಹಕಾರ ಹಾಗೂ ಆತ್ಮಬಲದಿಂದಾಗಿ ಇವೆಲ್ಲವನ್ನೂ ಚಂದನಾ ಮೆಟ್ಟಿನಿಂತರು. ಪ್ರತಿದಿನ 5 ಹಳ್ಳಿಗಳಂತೆ ಪಂಚಾಯಿತಿ ವ್ಯಾಪ್ತಿಯ 18 ಹಳ್ಳಿಗಳಿಂದ ಒಣ ಕಸ ಸಂಗ್ರಹಿಸುವ ಕಾಯಕವನ್ನು ಲೀಲಾಜಾಲವಾಗಿ ನಿರ್ವಹಿಸುತ್ತಿದ್ದು, ಜನರಿಂದ ಶಹಬ್ಬಾಸ್ ಗಿರಿ ಪಡೆಯುತ್ತಿದ್ದಾರೆ.

    ಜಿಪಂ ನೆರವಿಗಿದೆ: ಗ್ರಾಮಾಂತರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಕಸ ಸಂಗ್ರಹಣೆ ಆಟೋ ಚಾಲಕಿಯಾಗಿ ವೃತ್ತಿ ಆರಂಭಿಸಿ ಯಶಸ್ಸುಗಳಿಸಿರುವುದು ನಿಜಕ್ಕೂ ಮಹಿಳಾ ಸಬಲೀಕರಣ ಕೂಗಿಗೆ ಬಲಬಂತಂತಾಗಿದೆ. ಇದು ಮತ್ತಷ್ಟು ಮಹಿಳೆಯರಿಗೆ ಮಾದರಿ ಆಗಲಿದೆ. ಚಂದನಾರಂತೆ ಮತ್ತಷ್ಟು ಮಹಿಳಾ ಸಬಲೀಕರಣಕ್ಕೆ ಜಿಪಂನಿಂದ ಎಲ್ಲ ಸಹಕಾರ ನೀಡಲಾಗುವುದು ಎಂದಿದ್ದಾರೆ ಜಿಪಂ ಸಿಇಒ ರೇವಣಪ್ಪ.

    ಆತ್ಮತೃಪ್ತಿ ಇದೆ: ಮಹಿಳೆ ಆ ಕೆಲಸ ಮಾಡಬಾರದು ಈ ಕೆಲಸ ಮಾಡಬಾರದು ಎಂಬ ಲಕ್ಷ್ಮಣ ರೇಖೆ ಎಂದಿಗೂ ಸಮಂಜಸವಲ್ಲ, ನ್ಯಾಯಯುತವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂಬುದೇ ನನ್ನ ಅನಿಸಿಕೆ. ಆಟೋ ಚಾಲನ ವೃತ್ತಿ ಆಯ್ಕೆ ಮಾಡಿಕೊಂಡಾಗ ಕೆಲವರು ಸಹಜವಾಗಿಯೇ ವಿರೋಧಿಸಿದರು. ಆದರೆ ನನ್ನ ಮನೆಯವರ ಒತ್ತಾಸೆ ಬೆಂಬಲದಿಂದ ಅವೆಲ್ಲವನ್ನೂ ಧೈರ್ಯವಾಗಿಯೇ ಎದುರಿಸಿದೆ. ಈ ಕಾಯಕದಲ್ಲಿ ನನಗೆ ಆತ್ಮತೃಪ್ತಿ ಇದೆ. ಮತ್ತಷ್ಟು ಮಹಿಳೆಯರಿಗೆ ಇದು ಮಾದರಿಯಾಗಲಿ ಎಂಬ ಅಭಿಲಾಷೆ ಇದೆ ಎನ್ನುತ್ತಾರೆ ಚಂದನಾ.

    ತಡರಾತ್ರಿ ಘೋರ ದುರಂತ: 8 ತಿಂಗಳ ಮಗು ಸೇರಿ ಐವರು ಮಲಗಿದ್ದಲ್ಲೇ ಸಜೀವ ದಹನ

    ನಾವು ಲವ್​ ಮಾಡಿದ್ದೇ ತಪ್ಪಾ? ಚಿತ್ರಹಿಂಸೆ ಕೊಡ್ತಿದ್ದಾರೆ.. ಪ್ಲೀಸ್​ ನಮ್ಮನ್ನು ಕಾಪಾಡಿ.. ಬೆಂಗಳೂರಲ್ಲಿ ಸಚಿವರ ಪುತ್ರಿ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts