More

    ರಾಷ್ಟ್ರಗೀತೆ ಆರಂಭಕ್ಕೂ ಮುನ್ನ ರಾಹುಲ್​ ನಡೆದುಕೊಂಡ ರೀತಿಗೆ ನೆಟ್ಟಿಗರ ಬಹುಪರಾಕ್​: ವಿಡಿಯೋ ವೈರಲ್​

    ನವದೆಹಲಿ: ಆತಿಥೇಯ ಜಿಂಬಾಬ್ವೆ ವಿರುದ್ಧ ಗುರುವಾರ ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್​ಗಳ ಭರ್ಜರಿ ಜಯ ದಾಖಲಿಸುವ ಕೆ.ಎಲ್​. ರಾಹುಲ್​ ಟೀಮ್​ ಇಂಡಿಯಾದ ನಾಯಕನಾಗಿ ತಮ್ಮ ಮೊದಲ ಗೆಲುವನ್ನು ದಾಖಲಿಸಿದ್ದಾರೆ.

    ರಾಹುಲ್​ ಅವರು 2022ರ ಐಪಿಎಲ್​ ಬಳಿಕ, ದೀರ್ಘ ವಿರಾಮದ ನಂತರ ಮೊದಲ ಬಾರಿಗೆ ಮೈದಾನಕ್ಕೆ ಇಳಿದಿದ್ದಾರೆ. ಆದರೆ, ಗುರುವಾರದ ಪಂದ್ಯದಲ್ಲಿ ರಾಹುಲ್​ ಬ್ಯಾಟಿಂಗ್​ ಆಡದೇ ಇದ್ದರೂ ಅವರ ನಡವಳಿಕೆಯೊಂದು ಅಭಿಮಾನಿಗಳನ್ನು ಪ್ರಭಾವಿತಗೊಳಸಿದೆ. ಪಂದ್ಯ ಆರಂಭಕ್ಕೂ ತಂತಮ್ಮ ರಾಷ್ಟ್ರಗೀತೆ ಹಾಡಲು ಎರಡು ತಂಡಗಳು ಸಾಲಿನಲ್ಲಿ ನಿಂತಿದ್ದವು. ಈ ವೇಳೆ ರಾಹುಲ್​ ಚೂಯಿಂಗ್​ ಗಮ್​ ಅಗಿಯುತ್ತಿದ್ದರು. ಇನ್ನೇನು ನಮ್ಮ ರಾಷ್ಟ್ರಗೀತೆ ಆರಂಭ ಆಗಬೇಕು ಎನ್ನುವಷ್ಟರಲ್ಲಿ ತಮ್ಮ ಬಾಯಲ್ಲಿದ್ದ ಚೂಯಿಂಗ್​ ಗಮ್​ ಹೊರ ತೆಗೆದರು.

    ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಕೆ.ಎಲ್​. ರಾಹುಲ್​ ಅವರ ನಡವಳಿಕೆ ನೋಡಿ ನೆಟ್ಟಿಗರು ಬಹುಪರಾಕ್​ ಎನ್ನುತ್ತಿದ್ದಾರೆ. ವಿಡಿಯೋ ನೋಡಿದ ಮೇಲೆ ನಿಮ್ಮ ಮೇಲಿನ ಗೌರವ ದುಪ್ಪಟ್ಟಾಯಿತು. ನಿಮ್ಮ ದೇಶಪ್ರೇಮಕ್ಕೆ ನಮ್ಮ ಸೆಲ್ಯೂಟ್​ ಎಂದು ಕ್ರೀಡಾಭಿಮಾನಿಗಳು ವಿಡಿಯೋ ನೋಡಿ ಕಾಮೆಂಟ್​ ಮಾಡುತ್ತಿದ್ದಾರೆ.

    ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದ ರಾಹುಲ್​ ಫೀಲ್ಡಿಂಗ್​ ಆಯ್ದುಕೊಂಡರು. ನಿಗದಿತ 50 ಓವರ್​ಗಳಲ್ಲಿ ಜಿಂಬಾಬ್ವೆ ತಂಡ 189 ರನ್​ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನತ್ತಿದ ಭಾರತ, ಆರಂಭಿಕ ಆಟಗಾರರಾದ ಶುಭ್​ಮನ್​ ಗಿಲ್​ (72 ಎಸೆತಕ್ಕೆ ಅಜೇಯ 82 ರನ್​) ಮತ್ತು ಶಿಖರ್​ ಧವನ್​ (113 ಎಸೆತಕ್ಕೆ 81 ರನ್​) ಅವರ ಮುರಿಯದ ಜೊತೆಯಾಟದಿಂದಾಗಿ ಯಾವುದೇ ವಿಕೆಟ್​ ನಷ್ಟವಿಲ್ಲದೆ ಸುಲಭವಾಗಿ ಗುರಿ ಮುಟ್ಟಿತು. ಈ ಮೂಲಕ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಏಕದಿನ ಪಂದ್ಯ ಶನಿವಾರ (ಆ.20) ನಡೆಯಲಿದೆ. (ಏಜೆನ್ಸೀಸ್​)

    ಸ್ಫೂರ್ತಿ ಗೌಡ ವಿರುದ್ಧ ಇದೆಂಥಾ ಆರೋಪ? ಮನೆಯಿಂದ ಹೊರ ಹೋಗಲಿ ಅಂತ ಬೇಡುತ್ತಿರುವ ನೆಟ್ಟಿಗರು!

    ಆರ್ಥಿಕ ಆಶಾಭಾವ ನೋಂದಣಿ: ಸೋರಿಕೆ ತಡೆಗೆ ಆದ್ಯತೆ, ಇತರ ಮುದ್ರಾಂಕಗಳಿಂದಲೂ ಹಣದ ಹರಿವು

    ಮರು ಪರಿಷ್ಕೃತ ಪಠ್ಯ ರೆಡಿ, ವೆಬ್​ಸೈಟ್​ನಲ್ಲಿ ಸಾಫ್ಟ್ ಕಾಪಿ: ಮುದ್ರಣದ ಕಾರ್ಯ ಪ್ರಗತಿ, 3 ವಾರದ ಬಳಿಕ ಶಾಲೆಗಳಿಗೆ ರವಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts