More

    ಕೇಂದ್ರದಿಂದ ರಾಜ್ಯದ ರೈತರಿಗೆ 3454 ಕೋಟಿ ರೂ. ಬರ ಪರಿಹಾರ: ಸಿಸಿ ಪಾಟೀಲ

    ವಿಜಯವಾಣಿ ಸುದ್ದಿಜಾಲ ಗದಗ
    ರಾಜ್ಯದ ರೈತರಿಗೆ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 3454 ಕೊಟಿ ಬರಪರಿಹಾರ ಬಿಡುಗಡೆ ಮಾಡಿದೆ. ರೈತರ ಕಷ್ಟಗಳಿಗೆ ಕೇಂದ್ರ ಸರ್ಕಾರ ಯಾವಾಗಲೂ ಸ್ಪಂಧಿಸುತ್ತದೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.
    ಗದಗ ನಗರದ ವಿವಿಧ ವಾರ್ಡ್​ಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ದಲಿತರ, ಅಲ್ಪಸಂಖ್ಯಾತರ ಯೋಜನೆಗಳಿಗೆ ಬಳಸುತ್ತಿದ್ದ ಹಣವನ್ನು ವರ್ಗಾವಣೆ ಮಾಡಿಕೊಂಡಿದೆ. ದಲಿತ ಮತ್ತು ಅಲ್ಪಸಂಖ್ಯಾರ ಸಮುದಾಯಕ್ಕೆ ಮಾಡಿದ ಅನ್ಯಾಯ ಇದಲ್ಲವೇ?. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರ ರಾಜ್ಯ ಸೇರಿದಂತೆ ಇತರೆ ರಾಜ್ಯದ ರೈತರಿಗೆ ಬರ ಪರಿಹಾರ ವಿತರಿಸಿದೆ ಎಂದರು.
    ಎಐಸಿಸಿ ನೀಡುವ ಗ್ಯಾರಂಟಿ ಕಾರ್ಡ್​ಗಳಿಗೆ ಯಾವುದೇ ಬೆಲೆ ಇಲ್ಲ. ಏಕೆಂದರೆ ಕಾಂಗ್ರೆಸ್​ ನವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಷ್ಟು ಕ್ಷೇತ್ರಗಳಲ್ಲಿ ಸ್ಪಧಿರ್ಸಿಯೇ ಇಲ್ಲ. ಚುನಾವಣೆ ಮುಗಿದ ಮೇಲ ಅವರು ಮನೆಗೆ ಹೋಗುತ್ತಾರೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.
    ಕಾಂಗ್ರೆಸ್​ ಕೊಡುವ ಗ್ಯಾರಂಟಿಗೆ ಬೆಲೆಯಿಲ್ಲ. ಕಾಂಗ್ರೆಸ್​ ನವರು ಕೇವಲ 230 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕು. ಹೀಗಾಗಿ ಕಾಂಗ್ರೆಸ್​ ಕೊಡುವ ಗ್ಯಾರೆಂಟಿ ಕಾರ್ಡ್​ಗಳಿಗೆ ಬೆಲೆಯಿಲ್ಲ. ಸುಳ್ಳು ಆಮಿಷೆ ತೋರಿಸಿ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿ ಇದ್ದಾರೆ.
    ಈ ಚುನಾವಣೆಯು ಗ್ರಾಪಂ ಸದಸ್ಯ, ಶಾಸಕ ಆಯ್ಕೆ ಮಾಡುವ ಚುನಾವಣೆ ಅಲ್ಲ. ದೇಶವನ್ನು ಯಾರು ಸುರಕ್ಷಿತವಾಗಿಡುತ್ತಾರೆ ಅವರನ್ನು ಆಯ್ಕೆ ಮಾಡುವ ಚುನಾವಣೆ ಇದಾಗಿ. ಹತ್ತು ವರ್ಷದಲ್ಲಿ ನರೇಂದ್ರ ಮೋದಿಯವರು ಭಯೋತ್ಪಾದನಾ ಮುಕ್ತ ದೇಶ ಮಾಡಿದ್ದಾರೆ. ಯುಪಿಎ ಅವಧಿಯಲ್ಲಿ ದೇಶದ ಮುಂಬೈ, ದೆಹಲಿಗಳಲ್ಲಿ ಬಾಂಬ್​ ಸ್ಪೋಟಗೊಂಡರೆ ಪಾಕಿಸ್ಥಾನಕ್ಕೆ ಪತ್ರ ಬರೆಯುತ್ತಿದ್ದರು. ಮೋದಿಯವರ ಅವರ ನೆಲಕ್ಕೆ ಹೋಗಿ ಭಯೋತ್ಪಾದಕರನ್ನು ಹೊಡೆದುರುಳಿಸಿದರು. ಇದು ಬಲಿಷ್ಠ ಭಾರತ ದೇಶ ಎಂದರು.
    ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮನೆ ಮನೆಗೆ ನೀರು ಕೊಟ್ಟಿದ್ದಾರೆ. ಅಸಾಧ್ಯವನ್ನು ಸಾದ್ಯ ಮಾಡಿದ್ದಾರೆ. ಸ್ವಾತಂತ್ರ್ಯ ಬಂದು 70 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದರು. ನಮ್ಮ ಅವಧಿಯಲ್ಲಿ ಮೂರು ವರ್ಷದಲ್ಲಿ ಮೂವತ್ತು ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ ಎಂದರು.
    ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಎಲ್ಲರಿಗೂ 200 ಯುನಿಟ್​ ವಿದ್ಯುತ್​ ಕೊಡುವುದಾಗಿ ಹೇಳುತ್ತಾರೆ. ಆದರೆ, ಯಾರಿಗೂ 200 ಯುನಿಟ್​ ವಿದ್ಯುತ್​ ಕೊಟ್ಟಿಲ್ಲ. ಈ ಸರ್ಕಾರದಲ್ಲಿ ಯಾರೂ ಸುರಕ್ಷಿತ ಆಗಿಲ್ಲ. ಪೊಲೀಸ್​ ಠಾಣೆಗಳು ಸೆಟಲ್​ ಮೆಂಟ್​ ಕೇಂದ್ರಗಳಾಗಿವೆ. ಬರ ಬಂದಿದೆ ರೈತರಿಗೆ ಪರಿಹಾರ ಕೊಡದೇ ಇರುವ ದರಿದ್ರ ರಾಜ್ಯ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
    ನಾವು ಅಧಿಕಾರದಲ್ಲಿ ಇದ್ದಾಗ ಪ್ರವಾಹ ಬಂದಾಗ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ. ಕೊಟ್ಟಿದ್ದೇವು. ಬೆಳೆ ಪರಿಹಾರ ಎರಡು ಪಟ್ಟು ಕೊಟ್ಟಿದ್ದೇವು. ಇವರು ಬರಗಾಲದ ಪರಿಹಾರ ನೀಡದೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದರು.
    ಪ್ರಧಾನಿ ನರೇಂದ್ರ ಮೋದಿಯವರು ಕೊವಿಡ್​ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಟ್ಟಿದ್ದರು. ಈಗಲೂ ರಾಜ್ಯದಲ್ಲಿ ಮೋದಿಯವರೇ 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಕೊವಿಡ್​ ಸಂದರ್ಭದಲ್ಲಿ ದೇಶದ 130 ಕೋಟಿ ಜನರಿಗೆ ಉಚಿತ ಲಸಿಕೆ ಕೊಡಿಸಿದ್ದಾರೆ. ಕಷ್ಟದಲ್ಲಿದ್ದಾಗ ಅನ್ನ, ನೀರು ಆರೋಗ್ಯ ಕೊಟ್ಟಿರುವ ನರೇಂದ್ರ ಮೋದಿಯವರ ಋಣ ತೀರಿಸುವ ಕೆಲಸ ಮಾಡಬೇಕು. ಮೋದಿಯವರಿಗೆ ಮತ ಹಾಕುವ ಮೂಲಕ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
    ರಾಜು ಕುರಡಗಿ, ಉಷಾ ದಾಸರ, ಎಸ್​.ವಿ. ಸಂಕನೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts