ಜಂಗಮ ಸಮುದಾಯದ ಬೆಂಬಲಕ್ಕೆ ಋಣಿಯಾಗಿದ್ದೇನೆ: ಬಸವರಾಜ ಬೊಮ್ಮಾಯಿ

blank

ಗದಗ: ಜಂಗಮ ಸಮುದಾಯ ಬೆಂಬಲ ನೀಡಿರುವುದಕ್ಕೆ ಋಣಿಯಾಗಿದ್ದೇವೆ. ನಿಮ್ಮ ಆಶಿರ್ವಾದ ನನಗೆ ಸಿಕ್ಕಿರುವುದು. ನನಗೆ ಬಹಳಷ್ಟು ಸಂತೋಷವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾರತ ಭಕ್ತಿ ಪ್ರಧಾನ ದೇಶ.‌ಭಾರತದಲ್ಲಿ ಆಗಿರುವ ಭಕ್ತಿ ಚಳುವಳಿಗಳು ಬೇರೆ ಯಾವ ದೇಶದಲ್ಲಿಯೂ ಆಗಿಲ್ಲ. ನಮ್ಮ ಗುರುಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ನಾವು ಲಿಂಗ ಒಊಜೆ ಮಾಡದೇ ಹೊರಗೆ ಬರುವುದಿಲ್ಲ. ನಾವು ಸಿದ್ತಾಂತ ಶಿಖಾಮಣಿಯನ್ನು ಪಾಲಿಸಿದರೆ ನಾವು ಪರಿಪೂರ್ಣರಾಗುತ್ತೇವೆ ಎಂದು ಹೇಳಿದರು.
ನಾನು ಹುಟ್ಟಿ ಬೆಳೆದಿದ್ದು ಹುಬ್ಬಳ್ಳಿಯ ಯಕ್ಕುಂಡಿ ಮಠದಲ್ಲಿ ನಮ್ಮ ತಂದೆ ಯಕ್ಕುಂಡಿ ಮಠದಲ್ಲಿ ಬಾಡಿಗೆ ಇದ್ದರು. ರುದ್ರಯ್ಯ ಸ್ವಾಮಿ ನನ್ನ ಬೆಳೆಸಿದರು. ಅವರು ಉಗ್ರ ತಪಸ್ವಿ ಅವರು ನನ್ನ ಆರಾದ್ಯ ದೈವ. ನನಗೆ ಆಚಾರ, ವಿಚಾರ ಸಂಸ್ಕಾರ ಕಲಿಸಿಕೊಟ್ಟವರು. ಗುರುವಿಗೂ ಭಕ್ತರಿಗೂ ಬಹಳ ಅನ್ಯೋನ್ಯವಾಗಿರುವ ಸಂಬಂಧ ಇದೆ. ಗುರುವಿನ ಆಶೀರ್ವಾದ ಪಡೆದುಕೊಳ್ಳುವುದು ಅತ್ಯಂತ ಮುಖ್ಯ. ಭಕ್ತಿ ಎಂದರೆ ಉತ್ಕೃಷ್ಟ ಪ್ರೀತಿ, ಗುರುವಿನಲ್ಲಿ ಲೀನವಾದಾಗ ಸಂಸ್ಕಾರ ದೊರೆಯುತ್ತದೆ. ಗುರುಗಳೆಲ್ಲರೂ ಸೇರಿ ಆಶೀರ್ವಾದ ಮಾಡಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಹೇಳಿದರು.
ಸಂಘಟಿತವಾದ ಸಮಾಜ ಇದ್ದರೆ ಮಾತ್ರ ಎಲ್ಲವನ್ನೂ ಎದುರಿಸಲು ಸಾಧ್ಯ. ದೇಶ ಉಳಿದರೆ ಮಾತ್ರ ನಮ್ಮ ಧರ್ಮ, ಸಂಸ್ಕಾರ ಉಳಿಯಲಿದೆ. ಬೇರೆಯವರಿಗೆ ಬೇರೆ ದೇಶಗಳಿವೆ.
ನೀವು ಮತದ ಮೂಲಕ ಪ್ರೀತಿ ಕೊಡಬೇಕು ಅದಕ್ಕೆ ವಿಶ್ವಾಸ ಬರುವ ರೀತಿಯಲ್ಲಿ ನಾನು ಸಮಾಜದ ಜೊತೆಗೆ ಇರುತ್ತೇನೆ. ನಿಮ್ಮ ಸಹೋದರನನ್ನು ಸಂಸತ್ತಿಗೆ ಕಳುಹಿಸಿ, ನಿಮ್ಮ ಮತವನ್ನು ಸ್ವಂತಕ್ಕೆ ಬಳಸಿಕೊಳ್ಳದೇ, ನಿಮ್ಮ ಸೇವೆಗೆ ಮೀಸಲಿಡುವೆ ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಹಾಗೂ ಜಂಗಮ ಸಮಾಜದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…