More

    ಬಸವರಾಜ ಬೊಮ್ಮಾಯಿ ಗೆಲವು ನಿಶ್ಚಿತ: ಆಲ್ಕೊಡ ಹನುಮಂತಪ್ಪ

    ವಿಜಯವಾಣಿ ಸುದ್ದಿಜಾಲ ಗದಗ
    ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅನುಭವಿ ರಾಜಕಾರಣಿಗಳು. ರಾಜಕೀಯವಾಗಿ ಬೊಮ್ಮಾಯಿ ಅಪಾರ ಅನುಭವ ಹೊಂದಿದ್ದಾರೆ. ಶಾಸಕರಾಗಿ, ವಿಪ ಸದಸ್ಯರಾಗಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅವರ ಗೆಲವ ನಿಶ್ಚಿತ ಎಂದು ಜೆಡಿಎಸ್​ ರಾಜ್ಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಆಲ್ಕೊಡ ಹನುಮಂತಪ್ಪ ಹೇಳಿದರು
    ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಶಿಗ್ಗಾಂವ ತಾಲೂಕನ್ನು ಮಾದರಿ ತಾಲೂಕಾಗಿ ಮಾಡಿದ್ದಾರೆ. ಈ ಬಾರಿ ಅವರು ಲೋಕಸಭೆಯಲ್ಲಿ ಗೆದ್ದು ಹಾವೇರಿ-ಗದಗ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾವಿ ಮಾಡಲಿದ್ದಾರೆ. ಈಗಿರುವ ಕಾಂಗ್ರೆಸ್​ ಸರ್ಕಾರಕ್ಕೂ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೂ ಬಹಳ ವ್ಯತ್ಯಾಸ ಇದೆ. ರೈತರಿಗೆ ಕಿಸಾನ್​ ಸಮ್ಮಾನ ಯೋಜನೆ ಜಾರಿಗೆ ತಂದು ರೈತರ ಹಿತ ಕಾಪಾಡಿದ್ದರು. ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ಈ ಯೋಜನೆ ಸ್ಥಗಿತಗೋಳಿಸಿ ರೈತರಿಗೆ ಅನ್ಯಾಯ ಮಾಡಿದೆ. ಇಂತಹ ನಿಷ್ಕ್ರಿಯ ಸರ್ಕಾರದಿಂದ ಜನರು ಭರವಸೆ ಇಟ್ಟುಕೊಳ್ಳುವುದಿಲ್ಲ. ನಗರದ ಕುಡಿಯುವ ನೀರಿನ ಭವಣೆ ನೀಗಿಸಲು ಕಾಂಗ್ರೆಸ್​ ಸರ್ಕಾರಕ್ಕೆ ಸಾಧ್ಯ ಆಗುತ್ತಿಲ್ಲ. ಅಧಿಕಾರಕ್ಕೆ ಬಂದು 24ಗಂಟೆಯಲ್ಲಿ ಮುಸಲ್ಮಾನರಿಗೆ ಶೇ. 4 ಮೀಸಲಾತಿ ನೀಡುತ್ತೇವೆ ಎಂದು ಕಅಂಗ್ರೆಸ್​ ಹೇಳಿತ್ತು. ಇನ್ನೂ ಮೀಸಲಾತಿ ನೀಡಿಲ್ಲ. ಕಾಂಗ್ರೆಸ್​ ಪಕ್ಷ ದಲಿತ ಮುಖಂಡರನ್ನು ನಿರಂತರವಾಗಿ ತುಳಿಯುತ್ತ ಬಂದಿದೆ. ಹಾವೇರಿ -ಗದಗ ಮತಕ್ಷೇತ್ರದಲ್ಲಿ ದಲಿತ ಮುಖಂಡರನ್ನು ಬೆಳೆಯಲು ಬಿಟ್ಟಿಲ್ಲ ಎಂದು ಆರೋಪಿಸಿದರು.
    ಗ್ಯಾರಂಟಿ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ದೇಶ ಒಡೆಯುವ ಕೆಲಸ ನಡೆಯುತ್ತದೆ. ಮತದಾರರು ಇಂತವರನ್ನು ದೂರವಿಡಬೇಕು ಎಂದರು.
    ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಜೆಡಿಎಸ್​ ಜಿಲ್ಲಾಧ್ಯಕ್ಷ ಎಂ. ಎಪ್​ ಮುಧೋಳ, ಬಿಜೆಪಿ ಶಹರ ಘಟಕದ ಅಧ್ಯಕ್ಷ ಅನಿಲ ಅಬ್ಬಿಗೇರಿ, ಬಸವರಾಜ ಅಪ್ಪಣ್ಣನವರ, ಬಿಜೆಪಿ ಹಿರಿಯ ಮುಖಂಡ ಎಂ. ಎಸ್​. ಕರೀಗೌಡ್ರ, ಅಶೋಕ ಸಂಕಣ್ಣನವರ, ವೀರಣ್ಣ ಬಾಳಿಕಾಯಿ, ಜೆಡಿಎಸ್​ ಮಹಿಳಾ ಜಿಲ್ಲಾಧ್ಯಕ್ಷೆ ಮಂಜುಳಾ ಮೇಟಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts