More

    ಕಡಬ ತಾಲೂಕಿನಲ್ಲಿ ಶೇಕಡ 70

    ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕಡಬ ತಾಲೂಕಿನಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಮತದಾನ ನಡೆಯಿತು.

    ಕೊಂಬಾರು, ಬಿಳಿನೆಲೆ, ಐನೆಕಿದು, ಸುಬ್ರಹ್ಮಣ್ಯ ಮೊದಲಾದೆಡೆ ನಕ್ಸಲ್ ಬಾಧಿತ ಪ್ರದೇಶದಲ್ಲಿ, ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಯಾವೂದೇ ಅಹಿತಕರ ಘಟನೆ ನಡೆದಿಲ್ಲ.

    ಉದ್ಯೋಗ ನಿಮಿತ್ತ ದೂರದ ಊರುಗಳಲ್ಲಿ ನೆಲೆಸಿದ್ದವರಿಗೆ ವಿವಿಧ ಪಕ್ಷಗಳು ಬಸ್‌ನ ವ್ಯವಸ್ಥೆ ಮಾಡಿದ್ದರಿಂದ ಬಹುತೇಕ ಎಲ್ಲ ಉದ್ಯೋಗಿಗಳು ಬಂದು ಮತ ಚಲಾಯಿಸಿದರು. ಮದುವೆ ಇನ್ನಿತರ ಶುಭಕಾರ್ಯ ಹೆಚ್ಚಾಗಿದ್ದರಿಂದ, ಸುಡುಬಿಸಿಲು, ಸಂಜೆ ವೇಳೆ ಸುರಿಯುವ ಗುಡುಗು ಮಳೆಯಿಂದಾಗಿ ಮತದಾರರು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಈ ಬಾರಿ ಮಧ್ಯಾಹ್ನದ ವೇಳೆಗೆ ಹೆಚ್ಚಿನ ಮತ ಚಲಾವಣೆಗೊಂಡವು. ನಕ್ಸಲ್ ಬಾಧಿತ ಪ್ರದೇಶದ ಮತಗಟ್ಟೆಯಲ್ಲಿ ಭದ್ರತೆ ಒದಗಿಸಲಾಗಿತ್ತು.

    ಕಡಬ ತಾಲೂಕು ಆಲಂಕಾರು ಗ್ರಾಮದ ಶರವೂರು 57 ಮತ್ತು 58ನೇ ಮತಗಟ್ಟೆ ಕೇಂದ್ರಗಳು ಹಿಂದು ಮತದಾರರನ್ನು ಮಾತ್ರ ಹೊಂದಿರುವ ಮತಗಟ್ಟೆಗಳಾಗಿವೆ. ಇಲ್ಲಿನ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನವಾಗಿದೆ.

    ಶರವೂರು, ಕಕ್ವೆ, ನಗ್ರಿ, ಕೊಂಡಾಡಿ, ಕೊಪ್ಪ, ಗಾಣಂತಿ ಮೊದಲಾದ ಪ್ರದೇಶಗಳನ್ನು ಹೊಂದಿರುವ ಈ ಎರಡು ಮತಗಟ್ಟೆ 1807 ಮತದಾರರನ್ನು ಹೊಂದಿದೆ. ಇಲ್ಲಿ ಎರಡು ಪಕ್ಷಗಳ ನಡುವೆ ನೇರ ಹಣಾಹಣಿಯಿರುವುದರಿಂದ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ವಾಹನದಲ್ಲಿ ತಮ್ಮ ಬೆಂಬಲಿಗರನ್ನು ಕರೆ ತಂದು ಮತದಾನ ನಡೆಸಿದರು. ಸುಡು ಬಿಸಿಲಿನ ಕಾರಣ 12ಗಂಟೆ ಸಮಯಕ್ಕೆಶೇ.70 ಮತ ಚಲಾವಣೆಯಾಗಿತ್ತು.

    ಆಯೋಗದ ನಿಯಮಗಳಿಗೆ ನೋ ಕೇರ್

    ಬೆಳಗ್ಗೆ ಮತದಾನ ಆರಂಭಕ್ಕೂ ಮುನ್ನ ಮತದಾರರು ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಪಕ್ಷಗಳ ಕಾರ್ಯಕರ್ತರು ಮತದಾರನ್ನು ಕರೆತರಲು ವ್ಯವಸ್ಥೆ ಮಾಡಿದ ವಾಹನ ಬಳಸಿಕೊಂಡರು. ಮತಗಟ್ಟೆಯೊಳಗಡೆ ವಾಹನ ಬರಬಾರದು ಎಂಬ ಕಾನೂನು ಇದ್ದರೂ ಗಣನೆಗೆ ತೆಗೆದುಕೊಳ್ಳದಿರುವುದು ಬಹುತೇಕ ಎಲ್ಲ ಬೂತ್‌ಗಳಲ್ಲಿ ಕಂಡುಬಂತು. ಬಹುತೇಕ ಮತಗಟ್ಟೆಯಲ್ಲಿ ಎಲ್ಲ ಪಕ್ಷದ ಕಾರ್ಯಕರ್ತರು ಮತದಾರರನ್ನು ಕೊನೇ ಸಲ ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿ ಚುನಾವಣಾ ಆಯೋಗದ ನಿಯಮ ಪಾಲಿಸದಿರುವುದು ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts