

ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಶನಿವಾರ ಆರಂಭವಾಗಿದ್ದು, ಎರಡನೇ ಹಾಗೂ ಅಂತಿಮ ದಿನವಾದ ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿದೆ.
ನಿನ್ನೆ ನಡೆದ ಹರಾಜಿನಲ್ಲಿ ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ಫಾಪ್ ಡುಪ್ಲೆಸಿಸ್, ಶಿಖರ್ ಧವನ್ ಹಾಗೂ ಆರ್ ಅಶ್ವಿನ್ ಸೇರಿದಂತೆ ಅನೇಕ ಸ್ಟಾರ್ ಆಟಗಾರರ ಜತೆಯಲ್ಲಿ ಕೆಲ ದೇಶಿಯ ಪ್ರತಿಭೆಗಳು ಕೂಡ ಬಿಕರಿಯಾಗಿದ್ದರು. ಇಶಾನ್ ಕಿಶಾನ್ 15 ಕೋಟಿ ರೂ.ಗೆ ಮುಂಬೈ ತಂಡಕ್ಕೆ ಸೇಲಾಗುವ ಮೂಲಕ ಮೊದಲ ದಿನ ಅತಿ ಹೆಚ್ಚು ಮೊತಕ್ಕೆ ಸೇಲಾದ ಆಟಗಾರನೆಂಬ ಹೆಗ್ಗಳಿಕೆ ಹೊಂದಿದ್ದಾರೆ.
ಇದೀಗ ಎರಡನೇ ದಿನ ಆರಂಭವಾಗಿರುವ ಹರಾಜಿನಲ್ಲಿ ಮೊದಲ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಐಡೆನ್ ಮರ್ಕ್ರಮ್ ಬಿಕರಿಯಾಗಿದ್ದಾರೆ. ಮರ್ಕ್ರಮ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದೆ. ಉಳಿದಂತೆ ಅಂಜಿಕ್ಯ ರಹಾನೆ 1 ಕೋಟಿ ರೂಪಾಯಿಗೆ ಕೆಕೆಆರ್ ಪಾಲಾದರೆ, ಮಂದೀಪ್ ಸಿಂಗ್ 1.10 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ಗೆ ಸೇಲಾಗಿದ್ದಾರೆ.
ಮಾರ್ನಸ್ ಲ್ಯಾಬುಶೇನ್ ಮತ್ತು ಇಯಾನ್ ಮಾರ್ಗನ್ ಡೇವಿಡ್ ಮಲಾನ್ ಮಾರಾಟವಾಗದೇ ಉಳಿದಿದ್ದಾರೆ. ಹರಾಜು ಪ್ರಕ್ರಿಯೆ ಮುಂದುರಿದಿದೆ. (ಏಜೆನ್ಸೀಸ್)