ಮೈಮಾಟ ಪ್ರದರ್ಶಿಸಿದ ಮಾತ್ರಕ್ಕೆ ಕೆಟ್ಟ ಸಿನಿಮಾ ಉಳಿಯುವುದಿಲ್ಲ: ದೀಪಿಕಾ ಚಿತ್ರದ ವಿರುದ್ಧ ಕಂಗನಾ ಕೆಂಗಣ್ಣು

Gehriyan
Published on

ಮುಂಬೈ: ಇತ್ತೀಚೆಗಷ್ಟೇ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾದ ನಟಿ ದೀಪಿಕಾ ಪಡುಕೋಣೆ ಅಭಿನಯದ "ಗೆಹ್ರಾಯಿಯಾಂ​" ಚಿತ್ರದ ವಿರುದ್ಧ ನಟಿ ಕಂಗನಾ ರಣಾವತ್​ ವಾಗ್ದಾಳಿ ನಡೆಸಿದ್ದಾರೆ.

1965ರಲ್ಲಿ ಬಿಡುಗಡೆಯಾದ ಬಾಲಿವುಡ್​ನ "ಹಿಮಾಲಯ ಕಿ ಗಾಡ್​ ಮೇನ್​" ಚಿತ್ರದ ವಿಡಿಯೋ ಕ್ಲಿಪ್ ಅನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ​ ಶೇರ್​ ಮಾಡಿಕೊಂಡಿರುವ ಕಂಗನಾ, ನಾನು ಸಹ ಸಹಸ್ರಮಾನದವಗಳು. ಆದರೆ, ನಾನು ಈ ರೀತಿಯ ಪ್ರಣಯವನ್ನು ಗುರುತಿಸುತ್ತೇನೆ ಮತ್ತು ಅರ್ಥಮಾಡಿಕೊಳ್ಳುತ್ತೇನೆ. ಹೊಸ ಯುಗದ ಹೆಸರಿನಲ್ಲಿ ನಗರದ ಸಿನಿಮಾಗಳು ದಯವಿಟ್ಟು ಕಸವನ್ನು ಮಾರಾಟ ಮಾಡಬಾರದು ಎಂದಿದ್ದಾರೆ.

ಕೆಟ್ಟ ಸಿನಿಮಾ ಕೆಟ್ಟ ಸಿನಿಮಾನೇ ಹೊರತು ಚರ್ಮ ಪ್ರದರ್ಶನ ಅಥವಾ ಅಶ್ಲೀಲ ಪ್ರದರ್ಶನ ಆ ಸಿನಿಮಾವನ್ನು ಕಾಪಾಡುವುದಿಲ್ಲ ಎಂದು ಸಾಮಾನ್ಯ ಸಂಗತಿ ಎಂದು ಕಂಗನಾ ಗೆಹ್ರಾಯಿಯಾಂ​ ಸಿನಿಮಾ ಕುರಿತು ಖಾರವಾಗಿ ಟೀಕಿಸಿದ್ದಾರೆ.

ಅಂದಹಾಗೆ ಗೆಹ್ರಾಯಿಯಾಂ ಚಿತ್ರವು ಫೆಬ್ರವರಿ 11 ರಂದು ಒಟಿಟಿ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿದೆ. ಸಿನಿಮಾದ ಬಹುತೇಕ ಭಾಗಗಳಲ್ಲಿ ದೀಪಿಕಾ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮೇಜಾನ್​ನಲ್ಲಿ ಈ ಚಿತ್ರ ಸದ್ದು ಮಾಡಿದ್ದು, ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net