ನಿಮ್ಮ ಮಗಳು ಲವ್​ ಮಾಡ್ತಿದ್ದಾಳೆ: ತಾಯಿ ಬೈದ ಕೋಪಕ್ಕೆ ಪುತ್ರಿಯಿಂದ ಮಹಾ ಎಡವಟ್ಟು!

HYD Girl
Published on

ಮಲ್ಕಜ್​ಗಿರಿ: ಹೈದರಾಬಾದ್​ನಲ್ಲಿ ಪದೇಪದೆ ಯುವತಿಯರ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿರುವುದು ಪೊಲೀಸರಿಗೆ ತಲೆನೋವಿನ ಸಂಗತಿಯಾಗಿದ್ದು, ಜನಸಾಮಾನ್ಯರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಇದೀಗ ಮತ್ತೆ ಇಬ್ಬರು ಯುವತಿಯರು ದಿಢೀರ್​ ಕಾಣೆಯಾಗಿರುವುದಾಗಿ ವರದಿಯಾಗಿದೆ.

ಮಲ್ಕಜ್​ಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯ ಹನುಮನ್​ಪೇಟೆ ನಿವಾಸಿ ಅಶ್ವಿನಿ (19) ಎಂಬಾಕೆ ಇದೀಗ ಕಾಣೆಯಾಗಿರುವುದಾಗಿ ಪ್ರಕರಣ ದಾಖಲಾಗಿದೆ. ಅಶ್ವಿನಿ ಡಿಗ್ರಿ ಓದುತ್ತಿದ್ದಳು. ಕಳೆದ ಕೆಲವು ದಿನಗಳಿಂದ ಹೆಚ್ಚು ಮೊಬೈಲ್​ನಲ್ಲೇ ಬಿಜಿಯಾಗಿರುವುದನ್ನು ತಾಯಿ ಬಾಲಾಮಣಿ ಗಮನಿಸಿದ್ದರು.

ಇದೇ ತಿಂಗಳ 4ರಂದು ಮೂವರು ಅಪರಿಚಿತ ಯುವತಿಯರು ಬಂದು ಯುವಕನೊಬ್ಬನ್ನು ಅಶ್ವಿನಿ ಪ್ರೀತಿಸುತ್ತಿದ್ದಾಳೆ. ಅವನನ್ನೇ ಮದುವೆ ಆಗಬೇಕೆಂದುಕೊಂಡಿದ್ದಾಳೆಂದು ಹೇಳಿದ್ದರು. ಇದರಿಂದ ಕುಪಿತಗೊಂಡ ತಾಯಿ, ಅಶ್ವಿನಿಗೆ ಬೈದು ಬುದ್ಧಿವಾದ ಹೇಳಿದ್ದಳು. ಅದೇ ದಿನ ಸೂಪರ್ ಬಜಾರ್​ಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಅಶ್ವಿನಿ ಮರಳಿ ಬರಲೇ ಇಲ್ಲ. ಈ ಬಗ್ಗೆ ಭಾನುವಾರ ಅಶ್ವಿನಿ ತಾಯಿ ದೂರು ದಾಖಲಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ರಿಶಿದಾ (21) ಎಂಬಾಕೆ ಪೆಟ್ಬಶಿರಾಬಾದ್​ನಿಂದ ನಾಪತ್ತೆಯಾಗಿದ್ದಾಳೆ. ಶ್ರೀಕೃಷ್ಣನಗರದ ಕಾಲೇಜು ವಿದ್ಯಾರ್ಥಿನಿಯಾಗಿದ್ದ ರಿಶಿದಾ ಜೂನ್​ 5ರಂದು ಬೆಳಗ್ಗೆ 8.30ರಿಂದ ಮನೆಯಿಂದ ಕಾಣೆಯಾಗಿದ್ದಾಳೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಸಂಬಂಧಿಕರು ಮತ್ತು ಸ್ನೇಹಿತರನ್ನೆಲ್ಲ ವಿಚಾರಿಸಿದ್ದಾರೆ. ಆದರೆ, ಏನು ಪ್ರಯೋಜನವಾಗದಿದ್ದಾಗ ಅಂದೇ ಠಾಣೆಗೆ ತೆರಳಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ಎರಡು ಪ್ರಕರಣಗಳ ಸಂಬಂಧ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net