More

    ಮ್ಯಾಟ್ರಿಮೋನಿ ಸೈಟ್​ನಲ್ಲಿ ಪರಿಚಯ, ಪಬ್​ನಲ್ಲಿ ಭೇಟಿ: 12 ಮಹಿಳೆಯರ ಮೇಲೆ ಕಾಮುಕನ ಅಟ್ಟಹಾಸ!

    ಮುಂಬೈ: ಸುಮಾರು 12 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ 32 ವರ್ಷದ ಮೆಕಾನಿಕಲ್​ ಇಂಜಿನಿಯರ್​ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಮಹೇಶ್​ ಅಲಿಯಾಸ್​ ಕರಣ್​ ಗುಪ್ತಾ ಎಂದು ಗುರುತಿಸಲಾಗಿದೆ. ಮುಂಬೈ ಮಲಾಡ್​ ಏರಿಯಾದಲ್ಲಿ ಸೋಮವಾರ ಬಂಧಿಸಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಪೊಲೀಸ್​ ಬಲೆಗೆ ನಯವಂಚಕ ಬಿದ್ದಿದ್ದಾನೆ.

    ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಅನೇಕ ನಕಲಿ ಖಾತೆಗಳನ್ನು ಸೃಷ್ಟಿಸಿ ಸುಶಿಕ್ಷಿತ ಮಹಿಳೆಯರನ್ನೇ ಈತ ಟಾರ್ಗೆಟ್​ ಮಾಡುತ್ತಿದ್ದ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ವೆಬ್​ಸೈಟ್​ ಮೂಲಕ ಮಹಿಳೆಯರನ್ನು ಪರಿಚಯಿಸಿಕೊಂಡ ನಂತರ ಫೋನ್​ ಮೂಲಕ ಭೇಟಿಯನ್ನು ನಿಗದಿಪಡಿಸುತ್ತಿದ್ದ. ಪಬ್​, ರೆಸ್ಟೋರೆಂಟ್​ ಅಥವಾ ಮಾಲ್​ಗಳಲ್ಲಿ ಭೇಟಿ ಮಾಡುತ್ತಿದ್ದ.

    ಭೇಟಿಯ ವೇಳೆಯೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಡೆಪ್ಯೂಟಿ ಕಮಿಷನರ್​ ಆಫ್​ ಪೊಲೀಸ್​ ಸುರೇಶ್​ ಮೆಂಗಡೆ ಮಾಹಿತಿ ನೀಡಿದ್ದಾರೆ.

    ಪ್ರತಿ ಅಪರಾಧ ಮಾಡುವಾಗಲು ಆರೋಪಿ ಬೇರೆ ಬೇರೆ ನಂಬರ್​ ಬಳಸುತ್ತಿದ್ದ. ಸಿಮ್​ ಕಾರ್ಡ್​ ಬದಲಾಯಿಸುವುದೇ ಈತನ ಕಾಯಕವಾಗಿತ್ತು. ತನ್ನ ಹೆಸರಿನಲ್ಲಿ ನೋಂದಾವಣೆಯಾಗದ ಫೋನ್​ ನಂಬರ್​ ಅನ್ನೇ ಬಳಸುತ್ತಿದ್ದ. ವೈಯಕ್ತಿಕ ವಾಹನ ಬಳಸದೇ ಓಲಾ, ಊಬರ್​ ಕ್ಯಾಬ್​ ಮೂಲಕವೇ ಸಂಚಾರ ಮಾಡುತ್ತಿದ್ದ. ಕಂಪ್ಯೂಟರ್​ ಮೇಲೆ ಉತ್ತಮ ಜ್ಞಾನ ಹೊಂದಿರುವ ಆರೋಪಿ ಕೆಲ ಸಮಯ ಹ್ಯಾಕರ್​ ಆಗಿ ಕೆಲಸ ಮಾಡಿದ್ದ. ಆದರೆ, ಇದನ್ನು ಕೆಟ್ಟ ಕೆಲಸಕ್ಕಾಗಿ ಬಳಸಿದ್ದ ಎಂದು ಮೆಂಗಾಡೆ ತಿಳಿಸಿದರು.

    ಗೌರವಾನ್ವಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಆರೋಪಿ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದಾನೆ. ಇಲ್ಲಿಯವರಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈತ 12 ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಆತನನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. (ಏಜೆನ್ಸೀಸ್​)

    VIDEO| ಬೋಲ್ಡ್​ ಸೀನ್​ ಮೂಲಕ ಎಲ್ಲರ ಹುಬ್ಬೇರಿಸಿದ ಸಮಂತಾ: ಮಾದಕ ದೃಶ್ಯಗಳು ವೈರಲ್​!

    ವಿಶ್ವ ಪರಿಸರ ದಿನದಂದು ರಸ್ತೆ ಬದಿಯಲ್ಲೇ ಗಾಂಜಾ ಗಿಡ ನೆಟ್ಟ ಯುವಕನಿಗಾಗಿ ಪೊಲೀಸರ ತಲಾಶ್!​

    ಯುವತಿಯರು ವಾಸವಿದ್ದ ಬಾಡಿಗೆ ಮನೆಯ ಗುಟ್ಟು ದಿಢೀರ್​ ಪೊಲೀಸ್​ ದಾಳಿಯಿಂದ ರಟ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts