More

    ಊರಲ್ಲಿ ಹಲವು ಗಂಡಸರ ಜತೆ ಸಂಬಂಧ: ಬುದ್ಧಿ ಕಲಿಯದ ಮಹಿಳೆಗೆ ಪತಿ ಮತ್ತು ಸ್ವಂತ ತಮ್ಮನಿಂದಲೇ ಸ್ಕೆಚ್..!​

    ಹಾವೇರಿ: ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದ ಮಗಳು ಅದ್ಯಾಕೋ ಅನೈತಿಕ ದಾರಿ ಹಿಡಿದಿದ್ದಳು. ಊರಿನಲ್ಲಿ ಪರಗಂಡಸರ ಸಂಗ ಬೇಡ ಎಂದು ಬುದ್ದಿಮಾತು ಹೇಳಿದರು ಕೇಳದ ಮಹಿಳೆ ಇದೀಗ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಮನೆಯ ಮಾನ ತೆಗೆದಳು ಅಂತಾ ಪತಿ ಹಾಗೂ ಅವಳ ತಮ್ಮನೇ ಕತ್ತು ಹಿಸುಕಿ ಸುಟ್ಟು ಹಾಕಿ ಈಗ ಜೈಲುಪಾಲಾಗಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಹಾವೇರಿ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ.

    ಕೆರೆಕೊಪ್ಪ ಗ್ರಾಮದ ಶೇಖವ್ವ ಉಪ್ಪಾರ (30) ಕೊಲೆಯಾದ ಮಹಿಳೆ. ಇವಳ ಗಂಡ ಹನುಮಂತಪ್ಪ ಹಾಗೂ ಮೃತಳ ಸಹೋದರ ಬಸವರಾಜ್ ಇಬ್ಬರು ಸೇರಿಕೊಂಡು ಹತ್ಯೆ ಮಾಡಿದ್ದಾರೆ. ಕಳೆದ ಸೋಮವಾರ ಸಂಜೆ ಗ್ರಾಮದ ಹೊರವಲಯದಲ್ಲಿ ಕೊಲೆ ನಡೆದಿದೆ. ನಂತರ ಸಾಕ್ಷಿ ದೊರೆಯದಂತೆ ಗ್ರಾಮದ ಸ್ಮಶಾನದಲ್ಲಿ ಸುಟ್ಟು ಹಾಕಿರುವುದಾಗಿ ತಿಳಿದು ಬಂದಿದೆ.

    ಮೃತ ಮಹಿಳೆಯು ಕಳೆದ ಕೆಲವು ವರ್ಷಗಳಿಂದ ಗ್ರಾಮದ ಹಾಗೂ ಇತರೆ ಗ್ರಾಮದ ವ್ಯಕ್ತಿಗಳೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಳು ಎಂಬ ಆರೋಪಗಳು ದಟ್ಟವಾಗಿ ಕೇಳಿ ಬರುತ್ತಿವೆ. ಕಳೆದ 20 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಅನೇಕ ಕಡೆಗಳಲ್ಲಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಕಳೆದ ಸೋಮವಾರ ಜಮೀನಿನಲ್ಲಿ ಶೇಖವ್ವ ಸಂಚಾರ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಪತಿ ಹಾಗೂ ಸಹೋದರ ಸಂಜೆವರೆಗೆ ಹುಡುಕಿದ್ದಾರೆ. ಈ ವೇಳೆ ಸಿಕ್ಕ ಶೇಖವ್ವಳನ್ನು ಉಪಾಯದಿಂದ ಬೈಕ್‌ನಲ್ಲಿ ಗುಡ್ಡದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾರೆಂದು ಹೇಳಲಾಗುತ್ತಿದೆ.

    ಇದೇ ವಿಚಾರ ಕೆರೆಕೊಪ್ಪ ಗ್ರಾಮದಲ್ಲಿ ಗುಸು ಗುಸು ಹಬ್ಬಿದೆ. ಇದಾದ ಬಳಿಕ ಗುತ್ತಲ ಠಾಣೆಯ ಪೋಲಿಸರು ಕರೆಯಿಸಿ ಹನುಮಂತಪ್ಪ ಮತ್ತು ಬಸವರಾಜ್​ನನ್ನು ವಿಚಾರಣೆ ಮಾಡಿದಾಗ ಸತ್ಯಾಂಶ ಹೊರಬಂದಿದೆ. ನಮ್ಮ ಮಗಳು ಸತ್ತು ಹೊಗಿದ್ದೆ ಖುಷಿಯಾಗಿದೆ. ಅವಳಿಂದ ಬಹಳ ಕಷ್ಟ ಅನುಭವಿಸಿದ್ದೇವೆ. ಸತ್ತ ಬಳಿಕ ಜಳಕ ಮಾಡಿ ಖುಷಿ ಪಟ್ಟಿದ್ದೆವೆಂದು ಮೃತಳ ತಂದೆ ಆಕ್ರೋಶ ವ್ಯಕ್ತಪಡಿಸಿದರು.

    ಇನ್ನೂ ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿದ್ದು, ತನಿಖೆ ಮುಂದುವರೆಸುವಂತೆ ಸೂಚನೆ ನೀಡಿದ್ದಾರೆ. ಕ್ಷಣಿಕ ಸುಖಕ್ಕಾಗಿ ಇತ್ತ ಶೇಖವ್ವಾ ಕೊಲೆಯಾಗಿ ಸಾವನ್ನಪ್ಪಿದ್ದಾಳೆ. ಅತ್ತ ಕೊಲೆ ಮಾಡಿ ಪತಿ ಜೈಲು ಸೇರಿದ್ದಾನೆ. ಪಾಪ ಇವರ ನಡುವೆ ಏನೂ ಅರಿಯದ ಮಕ್ಕಳು ಈಗ ಅನಾಥರಾಗಿದ್ದಾರೆ. (ದಿಗ್ವಿಜಯ ನ್ಯೂಸ್, ಹಾವೇರಿ)

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!

    14 ಕಾರುಗಳ ಗ್ಲಾಸ್ ಪುಡಿ ಪುಡಿ ಮಾಡಿದ ಪ್ರಕರಣ: ಉ. ಭಾರತ ಮೂಲದ ಐವರು ವಿದ್ಯಾರ್ಥಿಗಳ ಬಂಧನ

    ನೀವು ಯಾವಾಗಲೂ ಖುಷಿಯಿಂದ ಇರಬೇಕಾ? ಹಾಗಾದ್ರೆ ಅಮಲಾ ಪೌಲ್​ ಹೇಳೋ ಮಾತನೊಮ್ಮೆ ಕೇಳಿ..!

    ಬಸ್ಸಿನಲ್ಲಿ ನಿದ್ದೆಗೆ ಜಾರಿ ಕೈಕಳೆದುಕೊಂಡ ವ್ಯಾಪಾರಿ: ಹಾವೇರಿಯಲ್ಲಿ ಭಯಾನಕ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts