More

    14 ಕಾರುಗಳ ಗ್ಲಾಸ್ ಪುಡಿ ಪುಡಿ ಮಾಡಿದ ಪ್ರಕರಣ: ಉ. ಭಾರತ ಮೂಲದ ಐವರು ವಿದ್ಯಾರ್ಥಿಗಳ ಬಂಧನ

    ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗ್ಲಾಸ್ ಒಡೆದು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ಆರ್​ಆರ್​ ನಗರ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

    ಬಂಧಿತ ಐವರು ಕೂಡ ಉತ್ತರ ಭಾರತ ಮೂಲದ ವಿದ್ಯಾರ್ಥಿಗಳು. ನಗರದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರು. ಕಂಠಪೂರ್ತಿ ಕುಡಿದು ಕಾರುಗಳ ಗ್ಲಾಸ್​ಗಳನ್ನು ಆರೋಪಿಗಳು ಪುಡಿ ಪುಡಿ ಮಾಡಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಆರ್​ಆರ್​ ನಗರ ಠಾಣಾ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಬಂಧಿತ ಐದು ಜನ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಓದುತ್ತಿದ್ದರು. ಏಳನೇ ಸಮಿಸ್ಟರ್​ ವಿದ್ಯಾರ್ಥಿಗಳಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಆರ್​ ಆರ್ ನಗರದ ಕಾಲೇಜು ಹಾಸ್ಟೆಲ್​ನಿಂದ ಮೂರು ಜನ ಕೆಂಗೇರಿಗೆ ತೆರಳಿದ್ದರು. ಕೆಂಗೇರಿಯಲ್ಲಿ ಇನ್ನಿಬ್ಬರು ಆರೋಪಿಗಳು ವಾಸವಿದ್ರು. ಒಟ್ಟು ಐದು ಜನ ಬರ್ತಡೇ ಪಾರ್ಟಿ ಮಾಡಿದ್ದರು.

    ಪಾರ್ಟಿಯಲ್ಲಿ ಫುಲ್​ ಟೈಟ್​ ಆಗಿದ್ದ ಆರೋಪಿಗಳು ಬಳಿಕ ಬ್ಯಾಟ್ ತೆಗೆದುಕೊಂಡು ಬಂದು ಕಾರಿನ ಗ್ಲಾಸ್​ ಪುಡಿ ಪುಡಿ ಮಾಡಿದ್ದರು. ಕುಡಿದ ಅಮಲಿನಲ್ಲಿ ಆರ್ ಆರ್ ನಗರದಲ್ಲಿ 6 ಕಾರು ಮತ್ತು ಕೆಂಗೇರಿಯಲ್ಲಿ 8 ಕಾರುಗಳ ಗ್ಲಾಸ್ ಅನ್ನು ಆರೋಪಿಗಳು ಪುಡಿ ಪುಡಿ ಮಾಡಿದ್ದರು. ಸದ್ಯ ಆರೋಪಿಗಳ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಇತ್ತ ಉದ್ಯೋಗವೂ ಇಲ್ಲ: ಸಾವಿಗೆ ಶರಣಾದ ಅಣ್ಣ-ತಮ್ಮ

    ಅಮೆರಿಕಕ್ಕೆ ಮೋದಿ ಭೇಟಿ ಇಂಪ್ಯಾಕ್ಟ್‌- ಭಾರತಕ್ಕೆ ಮರಳಿತು 157 ಪುರಾತನ ಐತಿಹಾಸಿಕ ಕಲಾಕೃತಿಗಳು…

    ನೀವು ಯಾವಾಗಲೂ ಖುಷಿಯಿಂದ ಇರಬೇಕಾ? ಹಾಗಾದ್ರೆ ಅಮಲಾ ಪೌಲ್​ ಹೇಳೋ ಮಾತನೊಮ್ಮೆ ಕೇಳಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts