ತನ್ನ ದೊಡ್ಡ ನಿತಂಬಗಳಿಂದಾದ ಅವಮಾನದ ಬಗ್ಗೆ ಮಾತನಾಡಿದ ಗೋವಾ ಬ್ಯೂಟಿ ಇಲಿಯಾನಾ..!

Iliana
Published on

ಹೈದರಾಬಾದ್: ಇಲಿಯಾನಾ ಡಿ ಕ್ರೂಸ್ ಭಾರತೀಯ ಸಿನಿರಂಗದ ಬೋಲ್ಡ್​ ಆ್ಯಂಡ್​ ಬ್ಯೂಟಿಫುಲ್​ ನಟಿ. ತಮ್ಮ ಮಾದಕ ನೋಟದಿಂದಲೇ ಇಲಿಯಾನಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಟಾಲಿವುಡ್​ನಲ್ಲಿ ರವಿತೇಜ ನಟನೆಯ ಅಮರ್​ ಅಕ್ಬರ್​ ಆಂಟೋನಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವ ಇಲಿಯಾನಾ, ಇತ್ತೀಚೆಗೆ ಬಾಡಿ ಶೇಮಿಂಗ್ (ದೇಹದ ಆಕಾರದ ಬಗ್ಗೆ ಅವಮಾನ ಮಾಡುವುದು) ಬಗ್ಗೆ ಮಾತನಾಡಿದ್ದಾರೆ.

ಕೇವಲ 12ರ ವಯಸ್ಸಿನಲ್ಲಿಯೇ ಇಲಿಯಾನಾ ಬಾಡಿ ಶೇಮಿಂಗ್​ ಅನುಭವಿಸಿದ್ದರಂತೆ. ನನ್ನ ಮುಂದೆ ನಡೆದ ಎಲ್ಲ ಘಟನೆಗಳು ನಿನ್ನೆಯಷ್ಟೇ ನಡೆದಿದೆ ಎನ್ನುವಷ್ಟು ನೆನಪಿದೆ. 12ನೇ ವಯಸ್ಸಿನಲ್ಲಿ ನಾನು ಬಾಡಿ ಶೇಮಿಂಗ್​ ಅನುಭವಿಸಿದ್ದೆ. ಆಗ ತಾನೇ ನಾನು ವಯಸ್ಸಿಗೆ ಬಂದಿದ್ದೆ. ನಾನು ಬೆಳೆದಂತೆ ನನ್ನ ದೇಹವನ್ನು ನೋಡಿ ಕೆಲವು ಕಾಮೆಂಟ್​ಗಳನ್ನು ಮಾಡುತ್ತಿದ್ದರು. ಓ ಮೈ ಗಾಡ್​ ನಿನ್ನ ನಿತಂಬ ಯಾಕಿಷ್ಟ ದಪ್ಪಗಾಗಿದೆ ಎಂದು ಕೇಳುತ್ತಿದ್ದರು. ನೀವು ಏನು ಹೇಳುತ್ತಿದ್ದೀರಿ ಎಂದು ಕೇಳುತ್ತಿದೆ ಎಂದು ಇಲಿಯಾನಾ ಕಹಿ ಘಟನೆಯನ್ನು ಮೆಲಕು ಹಾಕಿದರು.

ಇದೇ ವಿಚಾರವಾಗಿ ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಅತಿ ಕೆಟ್ಟ ಕಾಮೆಂಟ್​ಗಳನ್ನು ಸ್ವೀಕರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಕೆಲ ಜನರ ಇಂತಹ ಕೆಲಸಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕಲಿತಿರುವ ಇಲಿಯಾನಾ, ತನ್ನ ದೇಹದ ಬಗ್ಗೆ ತಾನೇ ಸಕಾರಾತ್ಮಕ ಮನೋಭಾವವನ್ನು ಹೊಂದಿದ್ದಾರೆ.

ಬಾಲಿವುಡ್​ನಲ್ಲಿ ಇಲಿಯಾನಾ ಕೊನೆಯದಾಗಿ ಅಭಿಷೇಕ್​ ಬಚ್ಚನ್​ ಅಭಿನಯದ ದಿ ಬಿಗ್​ ಬುಲ್​ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net