

ನವದೆಹಲಿ: ಡ್ರಗ್ಸ್ ರಾಣಿಯೆಂದೇ ಹೆಸರುವಾಸಿಯಾಗಿದ್ದ, ಎರಡು ಬಾರಿ ಜೈಲು ಸೇರಿದ್ದ ದೆಹಲಿಯ ಶಯನಾ ಎಂಬಾಕೆ ತನ್ನ ನಾಲ್ಕನೆಯ ಗಂಡನಿಂದ ಕೊಲೆಯಾಗಿದ್ದು, ದುರಂತ ಅಂತ್ಯ ಕಂಡಿದ್ದಾಳೆ!
ಡ್ರಗ್ಸ್ ಕೇಸ್ನಲ್ಲಿ ಜೈಲಿಗೆ ಹೋಗಿದ್ದ ಸಮಯದಲ್ಲಿ ಈಕೆಯ ನಾಲ್ಕನೆಯ ಗಂಡ ವಾಸಿಮ್ ಅವಳ ತಂಗಿಯ ಜತೆ ಮಂಚದಲ್ಲಿ ಏಕಾಂತದಲ್ಲಿ ಇರುವ ಸಿಕ್ಕಿಬಿದ್ದ. ಆಗ ಪತಿಯ ಜತೆ ಜಗಳವಾಡಲು ಹೋದಾಗ ಆತ ಈಕೆಯ ಕೊಲೆ ಮಾಡಿದ್ದಾನೆ. ಆತ ಹಾರಿಸಿದ ಗುಂಡಿಗೆ ಶಯನಾ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾಳೆ. ಜಗಳ ತಪ್ಪಿಸಲು ಬಂದ ಕೆಲಸಗಾರ ಶಹಾದತ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಲೆಯ ಬಳಿಕ ವಾಸೀಮ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಮನೆಯ ಸಿಸಿಟಿವಿ ಫೋಟೋಜ್ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಯನಾ ಬದುಕೇ ವಿಚಿತ್ರವಾದದ್ದು. ಮೊದಲು ಎರಡು ಮದುವೆಯಾಗಿದ್ದಳು ಶಯನಾ. ಆದರೆ ಈಕೆಯ ಕಾಟಕ್ಕೆ ಬೇಸತ್ತು ಅವರು ಇವಳನ್ನು ತೊರೆದು ಹೋಗಿದ್ದರು. ನಂತರ ಮೂರನೆಯ ಗಂಡನಾಗಿ ಬಂದವರು ಡ್ರಗ್ಸ್ ಕಿಂಗ್ ಎಂದೇ ಕುಖ್ಯಾತಿ ಪಡೆದಿದ್ದ ಶರಾಫತ್ ಶೇಖ್. ಡ್ರಗ್ಸ್ ದಂಧೆಯ ಜತೆಯಾಗಿದ್ದ ಈ ಗಂಡ. ನಂತರ ಇದೇ ದಂಧೆಗೆ ಸಂಬಂಧಿಸಿದಂತೆ ಇಬ್ಬರೂ ತಿಹಾರ ಜೈಲು ಸೇರಿದ್ದರು. ಈಕೆ ಬಿಡುಗಡೆಯಾದಳು, ಗಂಡ ಜೈಲಿನಲ್ಲಿಯೇ ಇದ್ದ.
ಜೈಲಿನಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಳೆದ ವರ್ಷ ನಾಲ್ಕನೆ ಮದುವೆಯಾಗಿದ್ದಳು ಶಯನಾ. ಆದರೆ ದಂಧೆ ಮಾತ್ರ ಮುಂದುವರೆದಿತ್ತು. ಈ ಪ್ರಕರಣದಲ್ಲಿ ಆಕೆಯನ್ನು ಜೈಲಿಗೆ ಕಳುಹಿಸಲಾಗಿತ್ತು. ಈ ವೇಳೆ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಅದ್ದರಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ತನ್ನ ಹೆಂಡತಿ ಸದ್ಯ ಬರುವುದಿಲ್ಲ ಎಂದುಕೊಂಡಿದ್ದ ಗಂಡ, ಆಕೆಯ ತಂಗಿಯ ಜತೆ ಸಂಬಂಧ ಬೆಳೆಸಿದ್ದ.
ಜೈಲಿನಿಂದ ಬಂದಾಗ ಇದನ್ನು ನೋಡಿದ್ದ ಶಯನಾ ಜಗಳ ಮಾಡಿದ್ದಳು. ಇದೇ ವೇಳೆ ಬಂದೂಕಿನಿಂದ ಆತ ಹೊಡೆದು ಕೊಲೆ ಮಾಡಿದ್ದಾನೆ.