ಕಟ್ಟಿಗೆ ತರಲು ಕಾಡಿಗೆ ಹೋದ ನಾಲ್ವರು ಬುಡಕಟ್ಟು ಮಹಿಳೆಯರಿಗೆ ಶಾಕ್​: ಫಾರೆಸ್ಟ್​ ಗಾರ್ಡ್​ನಿಂದ ನೀಚ ಕೃತ್ಯ​

Forest Guard
Published on

ಹೈದರಾಬಾದ್​: ತೆಲಂಗಾಣದ ಭದ್ರಾದ್ರಿ ಕೊಟ್ಟಗುಡೇಮ್​ ಜಿಲ್ಲೆಯ ಮುಲಕಲಪಲ್ಲಿ ಮಂಡಲದ ಅರಣ್ಯ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿನ ಅರಣ್ಯ ಸಿಬ್ಬಂದಿಯೊಬ್ಬ ಬುಡಕಟ್ಟು ಜನಾಂಗದ ಮಹಿಳೆಯರನ್ನು ಥಳಿಸಿ, ವಿವಸ್ತ್ರಗೊಳಿಸಿ ಮೃಗೀಯವಾಗಿ ಹಿಂಸಿಸಿದ್ದು, ಈ ಘಟನೆ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮುಲಕಪಲ್ಲಿ ಮಂಡಲದ ಕಡು ಗ್ರಾಮ ಸಕಿ ವಗು ಕಾಲನಿಯ ಬುಡಕಟ್ಟು ಸಮುದಾಯದ ನಾಲ್ವರು ಮಹಿಳೆಯರು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದರು. ಈ ವೇಳೆ ಅವರನ್ನು ನೋಡಿದ ಮಹೇಶ್​ ಹೆಸರಿನ ಫಾರೆಸ್ಟ್​ ಗಾರ್ಡ್​ ಅವರೊಂದಿಗೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆರೋಪಿ ಮಹೇಶ್​​ ಒಬ್ಬ ಮಹಿಳೆಯರನ್ನು ಹಿಮ್ಮೆಟ್ಟಿಸಿ ಹೋಗಿ ಕೋಲಿನಿಂದ ಥಳಿಸಿರುವ ಆರೋಪ ಕೇಳಿಬಂದಿದೆ. ಆತನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಇನ್ನೊಬ್ಬ ಮಹಿಳೆ ಹಳ್ಳದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟೇಅಲ್ಲದೆ, ಯುವತಿಯೊಬ್ಬಳನ್ನು ತಡೆದು ನಿಲ್ಲಿಸಿದ ಮಹೇಶ್​, ಆಕೆಯ ಕೆಳಭಾಗದ ಬಟ್ಟೆಯನ್ನು ಕಿತ್ತೆಸೆದು ಹಿಂಸಿಸಿದ್ದಾನೆ.

ಫಾರೆಸ್ಟ್​ ಗಾರ್ಡ್​ ಮಹೇಶ್​ ನಾಲ್ವರು ಮಹಿಳೆಯರ ಮೇಲೆಯೂ ದುರ್ವತನೆ ತೋರಿರುವ ಆರೋಪವಿದೆ. ಕೋಲಿನಿಂದ ಮನಬಂದಂತೆ ಥಳಿಸಿ, ವಿವಸ್ತ್ರಗೊಳಿಸಿದ್ದಾನೆ. ಈ ವಿಚಾರ ಬುಡಕಟ್ಟು ಸಮುದಾಯಕ್ಕೆ ತಿಳಿದಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net