More

    ವರನಿಗೆ 85, ವಧುವಿಗೆ 65: ಅಜ್ಜನಿಗೆ ಮದುವೆ ಮಾಡಿಸಿದ ಮೊಮ್ಮಕ್ಕಳು- ಮೈಸೂರಲ್ಲೊಂದು ಅಪರೂಪದ ವಿವಾಹ

    ಮೈಸೂರು: ಪತ್ನಿಯನ್ನು ಕಳೆದುಕೊಂಡಿರುವ ಅಪ್ಪನಿಗೆ ವೃದ್ಧಾಪ್ಯದಲ್ಲಿ ಆಸರೆ ಬೇಕೆಂಬ ಕಾರಣಕ್ಕೆ ಮಕ್ಕಳು, ಮೊಮ್ಮಕ್ಕಳು ಸೇರಿ 85 ವರ್ಷದ ವೃದ್ಧನಿಗೆ ಮದುವೆ ಮಾಡಿಸಿರುವ ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ಉದಯಗಿರಿಯ ಗೌಸಿಯ ನಗರದ ನಿವಾಸಿ, ಕುರಿ ವ್ಯಾಪಾರಿಯಾಗಿರುವ ಹಾಜಿ ಮುಸ್ತಫಾ ಅವರನ್ನು ಮೊಮ್ಮಕ್ಕಳು ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಇವರಿಗೆ ಜೀವನಸಾಥಿಯಾಗಿ ಬಂದವರು 65 ವರ್ಷದ ಫಾತಿಮಾ ಬೇಗಂ.

    ಮುಸ್ತಫಾಗೆ ಸದ್ಯ 9 ಜನ ಮಕ್ಕಳು. ಎಲ್ಲರಿಗೂ ಮದುವೆಯಾಗಿದ್ದು, ಮೊಮ್ಮಕ್ಕಳೂ ಇದ್ದಾರೆ. ಎಲ್ಲರೂ ಬೇರೆ ಬೇರೆ ಕೆಲಸದಲ್ಲಿ ಇರುವ ಕಾರಣ ಮುಸ್ತಫಾ ಒಂಟಿಯಾಗಿದ್ದರು. ಎರಡು ವರ್ಷದ ಹಿಂದೆ ಮುಸ್ತಫಾ ಪತ್ನಿ ಖುರ್ಷಿದ್ ಬೇಗಂ ಮೃತಪಟ್ಟಿದ್ದರಿಂದ ಒಂಟಿಯಾಗಿ ಇರಬೇಕಾಗಿತ್ತು. ಆದ್ದರಿಂದ ಇಳಿ ವಯಸ್ಸಿನಲ್ಲಿ ಜತೆಯಾಗಿ ಯಾರಾದರೂ ಆಸರೆಗೆ ಬೇಕು ಎನ್ನಿಸಿತು. ನಂತರ ಮಕ್ಕಳು, ಮೊಮ್ಮಕ್ಕಳು ‘ವಧು’ವಿನ ಹುಡುಕಾಟದಲ್ಲಿ ತೊಡಗಿದಾಗ ಒಂಟಿಯಾಗಿದ್ದ 65 ವರ್ಷದ ಫಾತಿಮಾ ಬೇಗಂ ಸಿಕ್ಕರು. ಅವರು ಕೂಡ ಮದುವೆಗೆ ಒಪ್ಪಿದ್ದರಿಂದ ನಿಖಾ ಮಾಡಲಾಗಿದೆ.

    ಮುಸ್ತಫಾ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಸಮ್ಮುಖದಲ್ಲಿ‌ ಫಾತಿಮಾಬೇಗಂ ಅವರನ್ನು ನಿಖಾ ಆಗಿದ್ದಾರೆ.

    VIDEO: ಅದ್ಧೂರಿಯಾಗಿ ಮದ್ವೆಯಾಗಲು ಸಿನಿಮೀಯ ಸ್ಟೈಲ್‌ನಲ್ಲಿ ಬ್ಯಾಂಕ್‌ ದರೋಡೆ ಮಾಡಿ ಸಿಕ್ಕಬಿದ್ದ ವಿಜಯಪುರದ ಭೂಪ!

    ಗೂಗಲ್‌ ನೋಡಿ ದರೋಡೆ ಕಲಿತ ಬೆಂಗಳೂರಿನ ಇಂಜಿನಿಯರ್‌! ಆದ್ರೆ ಉಳಿದದ್ದು ಗೊತ್ತಾಗದೇ ಸಿಕ್ಕಿಬಿದ್ದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts