More

    ಬಾಲ್ಕನಿಯಲ್ಲಿ ಬೆತ್ತಲಾದ ಮಾಡೆಲ್​ಗಳಿಗೆ​ ಶಾಕ್​ ಕೊಟ್ಟ ದುಬೈ: ಮುಂದಿನ 5 ವರ್ಷ ಈ ಷರತ್ತು ಅನ್ವಯ!

    ದುಬೈ: ದುಬೈನ ಕಟ್ಟಡವೊಂದರ ಬಾಲ್ಕನಿಯಲ್ಲಿ ಬೆತ್ತಲೆ ಫೋಟೋಶೂಟ್ ಮಾಡಿ ದುಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಉಕ್ರೇನಿಯನ್​ ಮಾಡೆಲ್​ಗಳಿಗೆ ಸಂಯುಕ್ತ ಅರಬ್ ಸಂಸ್ಥಾನ ದೊಡ್ಡ ಆಘಾತವೊಂದನ್ನು ನೀಡಿದೆ.

    ಸದ್ಯ ಬಿಡುಗಡೆಗೊಂಡಿರುವ ಮಾಡೆಲ್​ಗಳನ್ನು ದುಬೈನಿಂದ ಹೊರಗಾಕಿದ್ದು, ಮುಂದಿನ ಐದು ವರ್ಷಗಳವರೆಗೆ ಅರಬ್​ ದೇಶಕ್ಕೆ ಭೇಟಿ ನೀಡದಂತೆ ಬ್ಯಾನ್​ ಮಾಡಲಾಗಿದೆ. ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸಿದಕ್ಕೆ ಮಾಡೆಲ್​ಗಳಿಗೆ ಈ ಶಿಕ್ಷೆಯನ್ನು ವಿಧಿಸಲಾಗಿದೆ. ಸದ್ಯ ಮಾಡೆಲ್​ಗಳು ಮರಳಿ ಉಕ್ರೇನಿಯ ಸೇರಿಕೊಂಡಿದ್ದಾರೆ.

    ಇದನ್ನೂ ಓದಿರಿ: ಮನೆಯ ಮುಖ್ಯದ್ವಾರದ ಚಿಲಕಕ್ಕೆ ಕಟ್ಟಿದ್ದ ಪತ್ರದಲ್ಲಿನ ಭಾಷೆ ನೋಡಿ ಬೆಚ್ಚಿಬಿದ್ದ ಕುಟುಂಬ!

    ಪರಿಣಿತರು ಹೇಳುವ ಪ್ರಕಾರ ಮಾಡೆಲ್​ ಅದೃಷ್ಟವಂತರಂತೆ. ಏಕೆಂದರೆ, ತುಂಬಾ ಕಟ್ಟುಪಾಡುಗಳಿರುವ ದುಬೈನಲ್ಲಿ ಬೆತ್ತಲೆ ಕಾಣಿಸಿಕೊಳ್ಳುವುದೆಂದರೆ ದೊಡ್ಡ ಅಪರಾಧವೇ ಆರು ತಿಂಗಳು ವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಸಹ ಎದುರಿಸಬೇಕಾಗುತ್ತದೆ. ಆದರೆ, ಇವರು ಇಷ್ಟು ಬೇಗ ಬಿಟ್ಟು ಕಳಿಹಿಸಿರುವುದು ಅಚ್ಚರಿಯೇ ಸರಿ ಎಂದಿದ್ದಾರೆ.

    ಅಂದಹಾಗೆ ಏಪ್ರಿಲ್​ 3ರಂದು ದುಬೈ ಕಟ್ಟಡದ ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತ ಮಹಿಳೆಯರು ಕ್ಯಾಮೆರಾಗೆ ಪೋಸ್​ ನೀಡಿದ್ದರು. ಇದಕ್ಕೆ ಸಂಬಂಧಿಸಿದ್ದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ದುಬೈ ಪೊಲೀಸರಿಂದ ಮಾಡೆಲ್​ಗಳ ಬಂಧನವೂ ಆಗಿತ್ತು. (ಏಜೆನ್ಸೀಸ್​)

    ದುಬೈ ಬಾಲ್ಕನಿ ಬೆತ್ತಲೆ ಫೋಟೋಶೂಟ್​ ಹಿಂದಿನ ಕರಾಳ ರಹಸ್ಯ ಬಿಚ್ಚಿಟ್ಟ ಉಕ್ರೇನಿಯನ್​ ಮಾಡೆಲ್..!​

    ಬಾಲ್ಕನಿಯಲ್ಲಿ ಬೆತ್ತಲಾಗಿ ನಿಂತು ಪೋಸ್​ ಕೊಟ್ಟ ಹೆಂಗಳೆಯರು! ಕೆಲವೇ ಗಂಟೆಗಳಲ್ಲಿ ಕಾದಿತ್ತು ಬಿಗ್​ ಶಾಕ್​!

    ಹಿಜಬ್ ಧರಿಸದೇ ಫೋಟೋಶೂಟ್ ಮಾಡಿದ್ದಕ್ಕೆ 20ರ ಚೆಲುವೆಯನ್ನು ಅಪಹರಿಸಿದ ಉಗ್ರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts