ಬಾಲ್ಕನಿಯಲ್ಲಿ ಬೆತ್ತಲಾಗಿ ನಿಂತು ಪೋಸ್​ ಕೊಟ್ಟ ಹೆಂಗಳೆಯರು! ಕೆಲವೇ ಗಂಟೆಗಳಲ್ಲಿ ಕಾದಿತ್ತು ಬಿಗ್​ ಶಾಕ್​!

balcony
Published on

ದುಬೈ: ಅರಬ್​ ಸಂಯುಕ್ತ ಸಂಸ್ಥಾನದಲ್ಲಿ ಹೆಣ್ಣು ಮಕ್ಕಳಿಗೆ ಕೆಲ ವಿಶೇಷ ನೀತಿ ನಿಯಮಗಳಿವೆ. ಆದರೆ ಅದನ್ನೆಲ್ಲ ಗಾಳಿಗೆ ತೂರಿದ ಒಂದಿಷ್ಟು ಹೆಣ್ಣು ಮಕ್ಕಳು, ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತು ಪೋಸ್​ ಕೊಟ್ಟಿರುವ ಘಟನೆ ದುಬೈನಲ್ಲಿ ನಡೆದಿದೆ. ಇದೀಗ ಆ ಎಲ್ಲ ಹೆಣ್ಣು ಮಕ್ಕಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಿದ್ದಾರೆ.

ಒಂದು ಡಜನ್​​ಗೂ ಹೆಚ್ಚು ಹೆಣ್ಣು ಮಕ್ಕಳು ಈ ರೀತಿ ಮಾಡಿರುವುದಾಗಿ ವರದಿಯಾಗಿದೆ. ಬೆತ್ತಲಾಗಿ ಪೋಸ್ ಕೊಟ್ಟಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಶನಿವಾರದಂದು ಈ ಘಟನೆ ನಡೆದಿದ್ದು, ಅದೇ ದಿನ ಭಾರೀ ವೈರಲ್​ ಆಗಿದೆ. ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ಅವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.

ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಅರಬ್​ ಸಂಯುಕ್ತ ಸಂಸ್ಥಾನದಲ್ಲಿ ಸಾರ್ವಜನಿಕ ಸಭ್ಯತೆಯ ಕಾನೂನಿನ ಉಲ್ಲಂಘನೆ, ನಗ್ನತೆ ಮತ್ತು ಇತರ ‘ನೀಚ ವರ್ತನೆ’ ಅಪರಾಧಿಗಳಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 5,000 ದಿರ್ಹಾಮ್ (99,700 ರೂಪಾಯಿ) ದಂಡವನ್ನು ವಿಧಿಸಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net