ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಕಾರ್ಯಕ್ರಮ: ಬಿಜೆಪಿ ಭ್ರಷ್ಟೋತ್ಸವ ಎಂದು ಕಾಂಗ್ರೆಸ್ ವ್ಯಂಗ್ಯ

Congress
Published on

ಬೆಂಗಳೂರು: ಸರ್ವರ ವಿಕಾಸ, ಸಮೃದ್ಧ ಕರ್ನಾಟಕದತ್ತ! ದೃಢ ಹೆಜ್ಜೆಗಳು ಎಂಬ ಧ್ಯೇಯದಡಿ ಬಿಜೆಪಿಯು ದೊಡ್ಡಬಳ್ಳಾಪುರದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ʻಜನಸ್ಪಂದನʼ ಸಮಾವೇಶ ನಡೆಸುತ್ತಿದೆ. ಇದನ್ನು ವ್ಯಂಗ್ಯವಾಡಿರುವ ಕಾಂಗ್ರೆಸ್ ಕರ್ನಾಟಕ ಜನತೆಗೆ ಬಿಜೆಪಿಯು ಏನು ಮಾಡಿದೆ ಎಂದು ಪ್ರಶ್ನಿಸಿದೆ.

ರಾಜ್ಯದ ಜನತೆಗೆ ಯಾವ ಸಾಧನೆ, ಯೋಜನೆ, ಸ್ಪಂದನೆ ಮಾಡಿದ್ದರೆಂದು ಸರ್ಕಾರ ಸಮಾವೇಶ ಮಾಡುತ್ತಿದೆ? ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ, ಕನ್ನಡ ನಾಡುನುಡಿಗೆ ಮಾಡಿದ್ದು ಬಿಟ್ಟರೆ ಬೇರೇನು ಮಾಡಿದೆ? ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ನಾಡಿನ ಸಾಹಿತಿಗಳಿಗೆ ಅವಮಾನಿಸಿದ್ದೇ ನಿಮ್ಮ ಸಾಧನೆಯೇ ಬಸವರಾಜ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದೆ.

Koo App
ಸರ್ವರ ವಿಕಾಸ, ಸಮೃದ್ಧ ಕರ್ನಾಟಕದತ್ತ ! ದೊಡ್ಡಬಳ್ಳಾಪುರದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ʻಜನಸ್ಪಂದನʼ ಸಮಾವೇಶ. #ಜನಸ್ಪಂದನ #JanaSpandana
View attached media content
-BJP KARNATAKA (@BJP4Karnataka)10 Sep 2022
#PuppetCM ಅವರ ಒಂದು ವರ್ಷದ ವಾರ್ಷಿಕೋತ್ಸವಕ್ಕೆ ಸಜ್ಜಾಗಿರುವ ಸರ್ಕಾರ ತಮ್ಮ ಸಾಧನೆ ಏನು ಎಂದು ನಾಡಿನ ಜನತೆಗೆ ಉತ್ತರಿಸಬೇಕು. ಪಠ್ಯಪುಸ್ತಕಗಳಲ್ಲಿ ಅವಾಂತರ ಸೃಷ್ಟಿಸಿದ ಸರ್ಕಾರ ಇನ್ನೂ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಲಿಲ್ಲ. ದೇಶದ್ರೋಹಿಗಳನ್ನು ದೇಶಭಕ್ತರನ್ನಾಗಿ ಬಿಂಬಿಸಿದ್ದೇ ಸಾಧನೆಯೇ? ಎನ್ನುವ ಮೂಲಕ ಬಿಜೆಪಿಯನ್ನು ಕಾಂಗ್ರೆಸ್​ ಟೀಕಿಸಿದೆ.
Koo App
ರಾಜ್ಯದ ಜನತೆಗೆ ಯಾವ ಸಾಧನೆ, ಯೋಜನೆ, ಸ್ಪಂದನೆ ಮಾದಿದ್ದರೆಂದು ಸರ್ಕಾರ ಸಮಾವೇಶ ಮಾಡುತ್ತಿದೆ? @BJP4Karnataka ಸರ್ಕಾರ ಕರ್ನಾಟಕದ ಜನತೆಗೆ, ಕನ್ನಡ ನಾಡುನುಡಿಗೆ ಮಾಡಿದ್ದು ಬಿಟ್ಟರೆ ಬೇರೇನು ಮಾಡಿದೆ? ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ನಾಡಿನ ಸಾಹಿತಿಗಳಿಗೆ ಅವಮಾನಿಸಿದ್ದೇ ನಿಮ್ಮ ಸಾಧನೆಯೇ @bsbommai ಅವರೇ? #BJPBrashtotsava
View attached media content
-ಕರ್ನಾಟಕ ಕಾಂಗ್ರೆಸ್ (@inckarnataka)10 Sep 2022
Koo App
#PuppetCM ಅವರ ಒಂದು ವರ್ಷದ ವಾರ್ಷಿಕೋತ್ಸವಕ್ಕೆ ಸಜ್ಜಾಗಿರುವ ಸರ್ಕಾರ ತಮ್ಮ ಸಾಧನೆ ಏನು ಎಂದು ನಾಡಿನ ಜನತೆಗೆ ಉತ್ತರಿಸಬೇಕು. ಪಠ್ಯಪುಸ್ತಕಗಳಲ್ಲಿ ಅವಾಂತರ ಸೃಷ್ಟಿಸಿದ ಸರ್ಕಾರ ಇನ್ನೂ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಲಿಲ್ಲ. ದೇಶದ್ರೋಹಿಗಳನ್ನು ದೇಶಭಕ್ತರನ್ನಾಗಿ ಬಿಂಬಿಸಿದ್ದೇ ಸಾಧನೆಯೇ? #BJPBrashtotsava
View attached media content
-ಕರ್ನಾಟಕ ಕಾಂಗ್ರೆಸ್ (@inckarnataka)10 Sep 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net